ad

ಸಿಎಂ ಸ್ಥಾನ ಉಳಿಯಬೇಕೆಂದರೆ ಆರ್ ಎಸ್ ಎಸ್ ಸುದ್ದಿಗೆ ಹೋಗಬೇಡಿ-ಈಶ್ವರಪ್ಪ ಸಲಹೆ- If you want to remain CM, don't go into RSS news - Eshwarappa advises

 SUDDILIVE || SHIVAMOGGA

ಸಿಎಂ ಸ್ಥಾನ ಉಳಿಯಬೇಕೆಂದರೆ ಆರ್ ಎಸ್ ಎಸ್ ಸುದ್ದಿಗೆ ಹೋಗಬೇಡಿ-ಈಶ್ವರಪ್ಪ ಸಲಹೆ-If you want to remain CM, don't go into RSS news - Eshwarappa advises

CM, Eshwarappa


ಬಿಜೆಪಿ ಬೆಳೆಯಲು ಕಾಂಗ್ರೆಸ್ ಕಾರಣವಾಗಿದೆ. ಮಾಜಿ ಡಿಸಿಎಂ ಈಶ್ವರಪ್ಪ ತಿಳಿಸಿದರು 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, RSSನ್ನ ನಿಲ್ಸಲು ಪ್ರಯತ್ನ ನಡುದ್ರೆ ನಿಮ್ಮ ಸರ್ಕಾರ ನಿರ್ಮಾಮವಾಗಲಿದೆ. ಇದಕ್ಕೆ ಸಿಎಂ, ಪ್ರಿಯಾಂಕ್ ಖರ್ಗೆ ಮತ್ತು ಹರಿಪ್ರಾಸದ್ ಕಾರಣರಾಗುತ್ತಾರೆ. ಸಿದ್ದರಾಮಯ್ಯನವರ ಹುದ್ದೆಗೆ ಸಂಚಕಾರ ತರಲೆಂದೆ ಇವರುಗಳು ಸಲಹೆ ನೀಡುತ್ತಿದ್ದಾರೆ. ಸಿಎಂ ಎಚ್ಚರದಿಂದ ಇರುವಂತೆ ಆಗ್ರಹಿಸಿದರು. 

ಡಿಸಿಎಂ ಡಿಕೆಶಿ ಮುನಿರತ್ನಗೆ ಕರಿಟೋಪಿ ಎಂದು ಕರೆದು ಅವಮಾನಿಸಿದ್ದಾರೆ. ಹಿಂದಿನ ಶೈಲಿಯಲ್ಲೇ ಡಿಜೆಶಿ ವರ್ತನೆ ಮುಂದುವರೆದಿದೆ. ಅಚರ ವರ್ತನೆ ಸರಿಪಡಿಸಿಕೊಳ್ಳಿ ಎಂದು ಆಗ್ರಹಿಸಿದರು. 

ಆರ್ ಎಸ್ ಎಸ್ ಸುದ್ದಿಗೆ ಬಂದ್ರೆ ಸರ್ಕಾರ ಉಳಿಯಲ್ಲ. ಶಾಖೆ ನಡೆಸುವ ಕಡೆ ಬಂದ್ ನೋಡಿ ಬಂದ್ ಮಾಡಿ ನೋಡಿ ಎಂದು ಸವಾಲು ಹಾಕಿದ ಈಶ್ಬರಪ್ಪ, ಅಧಿಕಾರಕ್ಕಾಗಿ ಆರ್ ಎಸ್ ಎಸ್ ನ್ನ ಟೀಕಿಸಲಾಗುತ್ತಿದೆ. ಒಂದೊಂದು ಊರಿನಲ್ಲಿ ಗಣವೇಶಧಾರಿಗಳ ಮೆರವಣಿಗೆಗಳು ಕಾಂಗ್ರೆಸ್ ನ ಕಣ್ಣು ಕುಕ್ಕಿಸಿದೆ. ಇಡೀ ಜಾಗೃತ ಹಿಂದೂಗಳು ಜಾಗೃತಗೊಂಡಿವೆ. 

ನಾಗಪುರದಲ್ಲಿ ರಾಷ್ಟ್ರಧ್ವಜ ಏರಿಸಲ್ಲ ಎಂಬ ಕಾಂಗ್ರೆಸ್ ಹೇಳುತ್ತಿರುವುದು ಸತ್ಯಕ್ಕೆ ದೂರವಾಗಿದೆ. ವಿಶೇಷ ಸಂದರ್ಭದಲ್ಲಿ ರಾಷ್ಟ್ರಧ್ವಜ ಏರಿಸುತ್ತಾರೆ. ಕೇಸರಿ ಧ್ವಜ ಏರಿಸುವ ಮೂಲಕ ರಾಷ್ಟ್ರಪ್ರೇಮಿ ಮೆರೆಯಲಾಗುತ್ತಿದೆ. ಸಿಎಂ ಸ್ಥಾನ ಉಳಿಯಬೇಕೆಂದರೆ ಆರ್ ಎಸ್ ಎಸ್  ಸುದ್ದಿಗೆ ಬರಬೇಡಿ, ಪ್ರಿಯಾಂಕ್ ಖರ್ಗೆ ಷಡ್ಯಂತ್ರ ನಡೆಸಿ ಸಿಎಂ ಸ್ಥಾನಕ್ಕೆ ಸಂಚಕಾರ ತರಲಿದ್ದಾರೆ. ದೇಶದ್ರೋಹಿ ಸಂಘಟನೆಗಳಾದ ಎಸ್ ಡಿಪಿಐ, ಪಿಎಫ್ಐ, ಲವ್ ಜಿಹಾದ್ ನಡೆಸುವರು, ಉಗ್ರಗಾಮಿ ಸಂಘಟನೆಗಳ ವಿರುದ್ಧ ಚಕಾರ ಎತ್ತುತ್ತಿಲ್ಲ. ದೇಶದ್ರೋಹಿ ಸಂಘಟನೆಗಳು ಬೀಗರು ಕಂಡಂತೆ ಕಾಣುತ್ತಿದೆ ಎಂದರು. 

ನವೆಂಬರ್ ಕ್ರಾಂತಿ ಹುಟ್ಟಾಕಿದ್ದು ರಾಜಣ್ಣನವರು, ನಂತರ ಸಿಎಂ ಡಿಸಿಎಂ ಅವರು ಬಿಜೆಪಿ ಹೇಳಿಕೆ ಎಂದಿತು. ನಂತರ ಸಂಪುಟ ಪುನರ್ ರಚನೆ ಬಗ್ಗೆ ಮಾತನಾಡಲು ಆರಂಭಿಸಿದರು‌. ಕಾದುನೋಡೋಣ ಎಂದ ಅವರುಜಾತಿ ಜನಗಣತಿ ಜಾರಿ ಮಾಡಲು ಬಿಡಲ್ಲ. ಹಾವನೂರು ವರದಿ ರೀತಿಯಲ್ಲೇ ಅ್ಉ ಜಾರಿಯಾಗಲ್ಲ ಎಂದರು. 

If you want to remain CM, don't go into RSS news - Eshwarappa advises

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close