SUDDILIVE || SHIVAMOGGA
ಮೆಗ್ಗಾನ್ ಅವ್ಯವಸ್ಥೆ ವಿರುದ್ಧ ಬೀದಿಗಿಳಿಯಲಿರುವ ಕರವೇ-Karave to take to the streets against the Megan chaos
ಮೆಗ್ಗಾನ್ ಅವ್ಯವವಸ್ಥೆ ಕುರಿತು ಮತ್ತು ಮೆಗ್ಗಾನ್ ನಿಂದ ಜಿಲ್ಲಾ ಆಸ್ಪತ್ರೆಯನ್ನ ಬೇರ್ಪಡಿಸಿ ಪ್ರತ್ಯೇಕ ಸಾರ್ವಜನಿಕ ಆಸ್ಪತ್ರೆ ಮಾಡುವಂತೆ ಆಗ್ರಹಿಸಿ ಕರವೇ ನಾರಾಯಣ ಗೌಡರ ಬಣ ತೀರ್ಮಾನಿಸಿದೆ
ಅಹೋರಾತ್ರಿ ಧರಣಿ ನಡೆಸಲಿರುವ ಕರವೇ ನಾರಾಯಣಗೌಡರ ಬಣದ ಜಿಲ್ಲಾಧ್ಯಕ್ಷ ಮಂಜು ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಮೆಗ್ಗಾನ್ ಆಸ್ಪತ್ರೆಯಲ್ಲಿ, ರೋಗಿಗಳಿಗೆ ಸರಿಯಾದ ಮೆಡಿಸಿನ್ ಸಿಗುತ್ತಿಲ್ಲ. ವೈದ್ಯರ ಅಲಭ್ಯತೆ, ವಾಸನೆಗಳ ಆಗರ, ಸ್ವಚ್ಛತೆಗಳ ಕೊರತೆಯನ್ನ ವಿರೋಧಿಸಿ ಪ್ರತಿಭಟಿಸಲಾಗುತ್ತಿದೆ. ಮೆಗ್ಗಾನ್ ಆಸ್ಪತ್ರೆಯ ಮುಂಭಾಗದಲ್ಲಿಯೇ ಸಂಘಟನೆ ಪ್ರತಿಭಟಸಲಾಗುವುದು ಎಂದು ತಿಳಿಸಿದರು.
ಅ. 15 ಮತ್ತು 16 ರಂದು ಪ್ರಯಿಭಟಿಸಲಾಗುವುದು. ಸರಿಯಾಗದಿದ್ದರೆ ಉಗ್ರಹೋರಾಟ ನಡೆಯಲಿದೆ. ಎಂಎಲ್ ಎ, ಎಂಎಲ್ ಸಿ ಗಳ ಮೂಲಕ ಸರ್ಕಾರಕ್ಕೆ ಒತ್ತಾಯಿಸಲಾಗುವುದು ಎಂದರು.
ಮಹಿಳೆ ಕಾರ್ಯಕರ್ತೆ ಜ್ಯೋತಿ ಸೋಮಶೇಖರ್ ಮಾತನಾಡಿ, ವೈದ್ಯರು ಖಾಸಗಿ ಆಸ್ಪತ್ರೆಗೆ ಹೋಗುವುದರಿಂದ ಸರ್ಜಾರಿ ಆಸ್ಪತ್ರೆಗೆ ಬರುವ ರೋಗಿಗಳ ಬಗ್ಗೆ ನಿರ್ಲಕ್ಷ ಹೆಚ್ಚಾಗಿದೆ. ಹೆರಿಗೆನಿಗದಿಯಾಗಿದ್ದರೆ, ಗಂಡು ಮಕ್ಕಳಿಗೆ ಒಂದು ರೀತಿಯ ಹಣ ನಿಗದಿಯಾಗಿದ್ದರೆ ಹೆಣ್ಣು ಮಗು ಹುಟ್ಟಿದರೆ ಒಂದು ರೇಟು ಲಂಚ ನಿಗದಿಯಾಗಿದೆ. ಸಿಜರಿಯನ್ ಮಾಡುದ್ರೆ 10 ಸಾವಿರ ಲಂಚ ನೀಡಬೇಕಿದೆ. ಸಿಬ್ಬಂದಿಗಳ ಕುಂದುಕೊರತೆ ವಿರುದ್ಧ ಪ್ರತಿಭಟಿಸಲಾಗುತ್ತಿದೆ ಎಂದರು.
Karave to take to the streets against the Megan chaos