SUDDILIVE || SHIVAMOGGA
ಇದೇನು ಏರ್ ಪೋರ್ಟಾ? ರೈಲ್ವೆ ಸ್ಟೇಷನ್ನಾ?Is this an airport? Or Is it a railway station?
ಇದೇನು ವಿಮಾನ ನಿಲ್ದಾಣವೋ ಅಥವಾ ರೈಲ್ವೆ ನಿಲ್ದಾವೋ ಗೊತ್ತಿಲ್ಲ. ಪತ್ರಕರ್ತರು ಮತ್ತು ಸಾಮಾನ್ಯ ಜನರಿಗೆ ವಿಮಾನ ನಿಲ್ದಾಣದ ಗೇಟ್ ನಲ್ಲೇ ತಡೆಯುವ ಸೆಕ್ಯೂರಿಟಿಗಳು ಈ ಆಟೋಗಳನ್ನ ಒಳಗೆ ಬಿಟ್ಟುಕೊಳ್ಳುವ ವ್ಯವಸ್ಥೆ ಮಾಡಿದ್ದಾರೆ. ಈ ವ್ಯವಸ್ಥೆಗೆ ಬ್ರೇಕ್ ಹಾಕದಿದ್ದರೆ ಮತ್ತೊಂದು ರೈಲ್ವೆ ನಿಲ್ದಾಣವಾಗುವ ಸಾಧ್ಯತೆಯಿದೆ.
ಶಿವಮೊಗ್ಗ ರಾಷ್ಟ್ರಕವಿ ಕುವೆಂಪು ವಿಮಾನ ನಿಲ್ದಾಣದಲ್ಲಿ ಆಟೋ ಚಾಲಕರಿಂದ ಬಾಡಿಗೆ ಮಾಡಿ ಕಾನೂನು ಉಲ್ಲಂಘನೆ ಆಗುತ್ತಿದೆ ಎಂದು ಸೋಗಾನೆ ವಿಮಾನ ನಿಲ್ದಾಣ ಚಾಲಕರು ಆರ್ ಟಿಗೆ ಮನವಿ ಮಾಡಿ 15 ದಿನಗಳು ಕಳೆದರೂ ಅಧಿಕಾರಿಗಳು ನಿದ್ರೆಗೆ ಜಾರಿದ್ದಾರೆ. ಈಗಾಗಲೇ ಟ್ಯಾಕ್ಸಿ ಮತ್ತು ಆಟೋ ರಿಕ್ಷಗಳ ನಡುನೆ ಪ್ಯಾಸೆಂಜರ್ ಗಳನ್ನ ಹತ್ತಿಸಿಕೊಳ್ಳುವ ಬಗ್ಗೆ ಪೈಪೋಟಿ ನಡೆಯುತ್ತಿದೆ. ಇಲ್ಲಿ ಕಾನೂನು ಕೈಗೆತ್ತಿಕೊಳ್ಳುವ ಮುನ್ನ ಕ್ರಮ ಜರುಗದಿದ್ಧರೆ ಅಧಿಕಾರಿಗಳೆ ನೇರ ಹೊಣೆ ಆಗಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.
ಸೋಗಾನೆ ವಿಮಾನ ನಿಲ್ದಾಣ ಚಾಲಕರು ಮತ್ತು ಮಾಲೀಕರ ಸಂಘದಲ್ಲಿ 60 ಜನ ಸದಸ್ಯರಿದ್ದು, ಎರಡು ವರ್ಷಗಳಿಂದ ಯಾವುದೇ ಕಾನೂನು ಉಲ್ಲಂಘನೆ ಆಗದೇ ಬಾಡಿಗೆ ಮಾಡಿಕೊಂದು ಬಂದಿದ್ದು, ಇತ್ತೀಚಿನ ದಿನಗಳಲ್ಲಿ ಆಟೋ ಚಾಲಕರು ವಿಮಾನ ನಿಲ್ದಾಣದ ಒಳಗಡೆ ಬಂದು ಯಾವುದೇ ಕಾನೂನು ಪಾಲಿಸದೆ ಅನುಮತಿ ಇಲ್ಲದಿದ್ದರೂ ಕಾನೂನು ಬಾಹಿರವಾಗಿ ಬಾಡಿಗೆ ಮಾಡುತ್ತಿರುತ್ತಾರೆ. ಇದರಿಂದ ಕಾರು ಚಾಲಕರಿಗು ಮತ್ತು ಆಟೋ ಚಾಲಕರಿಗು ಪ್ರತಿ ದಿನ ವಿಮಾನ ಪ್ರಯಾಣಿಕರ ಎದುರು ಮಾತಿನ ಚಕಮಕಿ ನಡೆಯುತ್ತಿದೆ. ಇದರಿಂದ ವಿಮಾನ ನಿಲ್ದಾಣದಲ್ಲಿ ವಾತಾವರಣ ಹದಗೆಡುತ್ತಿದೆ. ಆಟೋ ಚಾಲಕರಿಗೆ ಬಸ್ ಸ್ಟ್ಯಾಂಡ್‌ನಿಂದ 10 ಕಿ.ಮೀ ವ್ಯಾಪ್ತಿಯಲ್ಲಿ ಬಾಡಿಗೆ ಮಾಡಲು ಅನುಮತಿ ಇದ್ದು, ವಿಮಾನ ನಿಲ್ದಾಣ ಬಸ್ ಸ್ಟ್ಯಾಂಡ್‌ನಿಂದ 14.50 ಕಿ.ಮೀ ಇದ್ದು ಪ್ರತಿ ನಿತ್ಯ ಇದರ ಉಲ್ಲಂಘನೆ ಮಾಡುತ್ತಿದ್ದಾರೆ. ಬಾಡಿಗೆ ಮಾಡುತ್ತಿರುವುದರ ಜೊತೆಗೆ ಕೆಲವು ಆ್ಯಪ್‌ಗಳನ್ನು ಬಳಸಿ ಬಾಡಿಗೆ ಮಾಡುತ್ತಿರುತ್ತಾರೆ. ಇದರಿಂದ ಕಾನೂನು ರೀತಿಯಲ್ಲಿ ರಿಜಿಸ್ಟರ್ ಆಗಿರುವ ಏರ್‌ಪೋರ್ಟ್ ಟ್ಯಾಕ್ಸಿ ಚಾಲಕರು ಮತ್ತು ಮಾಲೀಕರಿಗೆ ತೊಂದರೆಯಾಗುತ್ತಿದೆ ಎಂದು ಸಂಘ ಆರ್ ಟಿಒಗೆ ನೀಡಿದ ಮನವಿಯಲ್ಲಿ ಆಗ್ರಹಿಸಿದೆ.
ಹಾಗಾಗಿ ಆಟೋ ಚಾಲಕರು ಏರ್‌ಪೋರ್ಟ್‌ಗೆ ಬಾರದಂತೆ ತಡೆದು ಕಾರು ಚಾಲಕರಿಗೆ ಬಾಡಿಗೆ ಮಾಡಲು ಯಾವುದೇ ತೊಂದರೆಯಾಗದಂತೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ವಿನಂತಿಸಿಕೊಳ್ಳಲಾಗಿದೆ.
ಇದೇ ರೀತಿಯಾಗಿ ಹಲವು ಬಾರಿ ಆರ್ ಟಿಒಗೆ ಸಂಘದ ವತಿಯಿಂದ ಮನವಿಯನ್ನು ಸಲ್ಲಿಸಿದ್ದರು ಕೂಡ ಯಾವುದೇ ಕ್ರಮವನ್ನು ಕೈಗೊಂಡಿಲ್ಲ. ತಾವುಗಳು ಈ ಮನವಿಯನ್ನು ಪುರಸ್ಕರಿಸಬೇಕೆಂದು ಈ ಮೂಲಕ ಮನವಿ ಮಾಡಿಕೊಳ್ಳುತ್ತೇವೆ. ಈ ಮನವಿಯನ್ನು ಪರಿಗಣನೆಗೆ ತೆಗೆದುಕೊಳ್ಳದೇ ಇದ್ದಲ್ಲಿ ಸೋಗಾನೆ ವಿಮಾನ ನಿಲ್ದಾಣ ಟ್ಯಾಕ್ಸಿ ಚಾಲಕರು ಮತ್ತು ಮಾಲೀಕರ ಸಂಘದ ವತಿಯಿಂದ ಮುಂದಿನ ದಿನಗಳಲ್ಲಿ ಉಗ್ರ ಹೋರಾಟವನ್ನು ಮಾಡುತ್ತೇವೆ ಎಂದು ಸಂಘ ಎಚ್ಚರಿಸಿದೆ.
ಆದರೆ ಆರ್ ಟಿ ಒಗೆ ಮನವಿ ಬಗ್ಗೆ ಗಮನ ಹರಿಸಲು ಪುರುಸೊತ್ತಾಗಿಲ್ಲ ಅನಿಸುತ್ತೆ. ಒಂದು ವೇಳೆ ಈ ವಿಚಾರ ಉಲ್ಬಣಗೊಂಡಲ್ಲಿ ಆರ್ ಟಿ ಒ ಮತ್ತು ಸಂಬಂಧಪಟ್ಟ ಅಧಿಕಾರಿಗಳನ್ನ ನೇರ ಹೊಣೆಪಡಿಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.
Is this an airport? Or Is it a railway station?