SUDDILIVE || SHIVAMOGGA
ಪ್ರಾಣಿಗಳ ಮೇಲೆ ದಯೆತೋರದ KSRTC ಬಸ್- KSRTC bus not kind to animals
ನಗರದ ಸೂಳೆಬೈಲಿನ ವೃತ್ತದಲ್ಲಿ KSRTC ಬಸೊಂದು ಡಿಕ್ಕಿ ಪರಿಣಾಮ ಗೋವಿನ ಪರಿಸ್ಥಿತಿ ಗಂಭೀರವಾಗಿದೆ. ಅದರ ಬಾಲವೇ ಕಟ್ ಆಗಿದೆ. ಕೊಂಬು ಮುರಿದುಹೋಗಿದೆ. ಬಸ್ ಗೂಳಿಗೆ ಹೊಡೆದ ರಬಸಕ್ಕೆ ಬಸ್ ನ ಮುಂಭಾಗ ಡೆಂಟ್ ಆಗಿದೆ.
ಹೊಸದುರ್ಗದಿಂದ ಶಿವಮೊಗ್ಗಕ್ಕೆ ಬರುತ್ತಿದ್ದ KSRTC ಬಸ್ ಸೂಳೆಬೈಲಿನ ಸರ್ಕಲ್ ಬಳಿ ಗೂಳಿಯೊಂದು ಅಡ್ಡ ಬಂದ ಕಾರಣ ಗುದ್ದಿಕೊಂಡು ಹೋಗಿದೆ. ಗೋವಿನ ಒಂದು ಕೊಂಬು ಕಟ್ ಆಗಿದೆ. ಬಾಲ ತುಂಡಾಗಿದೆ. ಗೂಳಿ ಮೈಯಲ್ಲ ತರಚಿದ ಗಾಯವಾಗಿವೆ. ಪ್ರತಿ ಸರ್ಕಾರಿ ಬಸ್ ಮೇಲೆ ಪ್ರಾಣಿಗಳ ಮೇಲೆ ದಯೆ ಇರಲಿ ಎಂಬ ನಾಮಫಲಕ ಇರುತ್ತದೆ.
ಆದರೆ ಈ ಚಾಲಕ ಪ್ರಾಣಿ ಮೇಲೆ ದಯೆಯಿರಲಿ ಎಂಬ ನಾಮಫಲಕ ಗಮನಿಸದೆ ಇರುವುದು ದುರುದೃಷ್ಟಕರವಾಗಿದೆ.