ad

ಟ್ರಯಲ್ ಫ್ರೀಪೇಯ್ಡ್ ಆಟೋ ಆರಂಭ-Trial freepaid auto starts

 SUDDILIVE || SHIVAMOGGA

ಟ್ರಯಲ್ ಫ್ರೀಪೇಯ್ಡ್ ಆಟೋ ಆರಂಭ-Trial freepaid auto starts    

Railway, prepaidauto


ಸಂಚಾರಿ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ (ಸಿಪಿಐ) ದೇವರಾಜ್ ಅವರ ಖಡಕ್ ನಿರ್ಧಾರದ ಹಿನ್ನಲೆಯಲ್ಲಿ ಇಂದಿನಿಂದ ರೈಲ್ವೆ ನಿಲ್ದಾಣದಲ್ಲಿ ಪ್ರೀಪೇಯ್ಡ್ ಆಟೋ ಆರಂಭವಾಗಿದೆ. ಸಧ್ಯಕ್ಕೆ ಇದೊಂದು ಟ್ರಯಲ್ ಎಂದು ಹೇಳಲಾಗುತ್ತಿದೆ. 

ಕಳೆದ 10 ವರ್ಷದಿಂದ ಶಿವಮೊಗ್ಗದಲ್ಲಿ ಪ್ರೀಪೇಯ್ಡ್ ಆರಂಭಿಸಬೇಕು ಎಂದು ತೀರ್ಮಾನಿಸಿ ರೈಲ್ವೆ ನಿಲ್ದಾಣ ಮತ್ತು ಬಸ್ ನಿಲ್ದಾಣದಲ್ಲಿ ಆರಂಭಿಸಬೇಕು ಎಂಬುದನ್ನ ನಿರ್ಧರಿಸಲಾಗಿತ್ತು. ಆದರೆ ಅನೇಕ ಅಡಚಣೆಯಿಂದಾಗಿ ಆರಂಭವಾಗಿರಲಿಲ್ಲ. ಇದಕ್ಕೆಲ್ಲ ಒಂದು ಇಚ್ಛಾಶಕ್ತಿಯೂ ಬೇಕಿತ್ತು. 

ಆ ಇಚ್ಛಶಕ್ತಿ ಟ್ರಯಲ್ ರೂಪದಲ್ಲಿ ಜಾರಿಯಾಗುತ್ತಿದೆ. ಇದು ಗಟ್ಟಿಯಾದಾಗ ಮಾತ್ರ ಸಾಧ್ಯವಾಗಲಿದೆ. ಆ ಇಚ್ಛಾಶಕ್ತಿ ಸಿಪಿಐ ದೇವರಾಜ್ ಮಾಡಲಿದ್ದಾರೆ ಎಂಬ ಭರವಸೆ ಹೆಚ್ಚಾಗಿದೆ. ಎನಿವೇ! ಇಂದು ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಶಿವಮೊಗ್ಗ ಟ್ರಾಫಿಕ್ ಪೊಲೀಸರು ಪೇಜ್ ನಲ್ಲಿ ಹರಿಬಿಟ್ಟಿದ್ದಾರೆ. 

Prepaid, auto

ಹಬ್ಬಕ್ಕೆ ಸರಿಯಾಗಿ ರೈಲ್ವೆ ನಿಲ್ದಾಣದಲ್ಲಿ ಟ್ರಯಲ್ ಪ್ರೀಪೇಯ್ಡ್ ಆಟೋ ಆರಂಭಿಸಲಾಗಿದ್ದು, ಒಂದು ಬಿಲ್ ನ್ನೂ ಸಹ ಹಾಕಲಾಗಿದೆ. ಪ್ರಯಾಣಿಕರೊಬ್ಬರು ರೈಲ್ವೆ ನಿಲ್ದಾಣದಿಂದ KSRTC  ಬಸ್ ನಿಲ್ದಾಣದ ವರೆಗೆ 62 ರೂ. ಹಣ ನೀಡಿದ್ದಾರೆ. ಪ್ರೀಪೇಯ್ಡ್ ಇಲ್ಲದಿದ್ದಾಗ ರೈಲ್ವೆ ನಿಲ್ದಾಣದಿಂದ ಉಷಾ ನರ್ಸಿಂಗ್ ಹೋಮ್ ವರೆಗೆ 80 ರೂ. ಹಣ ನೀಡಬೇಕಿತ್ತು. 

Trial freepaid auto starts

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close