SUDDILIVE || SHIVAMOGGA
ಬಾಲಣ್ಣನ ಅನಾರೋಗ್ಯಕ್ಕೆ ಕಾರಣರಾದ ಡಿ ಎಫ್ ಓ ಆರ್ ಎಫ್ ಗಳನ್ನು ಅಮಾನತ್ತಿನಲ್ಲಿರಿಸಿ ನ್ಯಾಯಾಧೀಶರ ತನಿಕೆಗೆ ಕರವೇ ಸಿಂಹ ಸೇನೆ ಆಗ್ರಹ-Karave Simha Sena demands suspension of DFO and RFO, who caused Balanna's illness, and judicial enquiry
ಸಕ್ರೆಬಯಲಿನ ಕ್ಯಾಂಪ್ ನಲ್ಲಿರುವ ಬಾಲಣ್ಣ ಮತ್ತು ಮಿತ್ರ ಆನೆಗಳ ಆರೋಗ್ಯ ಸ್ಥಿತಿ ಗಂಭೀರವಾಗಿಸಲು ಅಧಿಕಾರಿಗಳೆ ಕಾರಣ ಎಂದು ಆಗ್ರಹಿಸಿ ಮತ್ತು ಆನೆಗಳ ಬಗ್ಗೆ ನಿರ್ಲಕ್ಷ ತೋರುವ ಅಧಿಕಾರಿಗಳನ್ನ ಅಧಿಕಾರದಿಂದ ವಜಾಗೊಳಿಸುವಂತೆ ಒತ್ತಾಯಿಸಿ ಇಂದು ಕರ್ನಾಟಕ ರಕ್ಷಣಾ ವೇದಿಕೆ ಸಿಂಹ ಸೇನೆ ಜಿಲ್ಲಾ ಶಾಖೆ ಸಿಎಂ ಸಿದ್ದರಾಮಯ್ಯ ಅವರಿಗೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಮಾಡಿದೆ.
ಶಿವಮೊಗ್ಗ ದಸರಾದಲ್ಲಿ ದಸರಾ ಮೆರವಣಿಗೆಗೆ ಮೆರುಗು ನೀಡಿದ ಬಾಲಣ್ಣನ ಸ್ಥಿತಿ ಇಂದು ಚಿಂತಾ ಜನಕವಾಗಿದ್ದು ಬಾಲಣ್ಣನ ಈ ಸ್ಥಿತಿಗೆ ತಂದಂತಹ ಮಾವುತ, ಕಾವಾಡಿಗ ಡಿಎಫ್ ಒ ಮತ್ತು ವೈದ್ಯಾಧಿಕಾರಿಗಳಾಗಿದ್ದಾರೆ. ಕಾಲುನೋವಿನಲ್ಲಿ ಬಳಲುತ್ತಿದ್ದ ಬಾಲಣ್ಣನನ್ನು ಚುಚ್ಚುಮದ್ದು ನೀಡುವ ಮೂಲಕ ಆತನಿಗೆ ಬಲವಂತವಾಗಿ ಮೆರವಣಿಗೆಯಲ್ಲಿ ಪಾಲ್ಗೊಳ್ಳುವಂತೆ ಮಾಡಲಾಗಿದೆ.
ಆನೆಯ ಆರೋಗ್ಯಕ್ಕಿಂತ ಇಲ್ಲಿನ ಸಿಬ್ಬಂದಿಗಳ ಮತ್ತು ಅಧಿಕಾರಿಗಳ ಹಠ ಮುಖ್ಯವಾಗಿದೆ ಹಾಗಾಗಿ ಆರ್ ಎಫ್ ಒ ಮತ್ತು ಡಿ ಎಫ್ ಒ ಗಳನ್ನು ಕೂಡಲೇ ತಾತ್ಕಾಲಿಕವಾಗಿ ಅಮಾನತ್ತಿನಲ್ಲಿಟ್ಟು ನಿವೃತ್ತ ಹಾಗೂ ಹಾಲಿ ಮಾನ್ಯ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ರಚಿಸಿ ತನಿಖೆಗೆ ಆದೇಶಿಸಬೇಕೆಂದು ಸಂಘಟನೆ ಆಗ್ರಹಿಸಿದೆ.
ಬಾಲಣ್ಣನ ಜೊತೆ ಇತರ ಇನ್ನೆರಡು ಆನೆಗಳು ಸಹ ಆರೋಗ್ಯದಲ್ಲಿ ಏರುಪೇರು ಕಾಣುತ್ತಿದ್ದು ಸಕ್ರೆ ಬೈಲಿನ ಕ್ಯಾಂಪಿನಲ್ಲಿರುವ ವೈದ್ಯಾಧಿಕಾರಿಗಳನ್ನು ಹೊರತುಪಡಿಸಿ ಇತರೆ ವೈದ್ಯಾಧಿಕಾರಿಗಳಿಂದ ಆನೆಗಳಿಗೆ ಸೂಕ್ತರೀತಿಯಲ್ಲಿ ಚಿಕಿತ್ಸೆ ನೀಡಬೇಕು ಎಂದು ಸಂಘಟನೆ ಮನವಿಯಲ್ಲಿ ಒತ್ತಾಯಿಸಿದೆ.
ಮನವಿ ನೀಡುವ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ಮಧುಸೂದನ್ ಎಸ್ಎಂ ತರವೇ ಸಿಂಹ ಸೇನೆಯ ರಾಜ್ಯಾಧ್ಯಕ್ಷ ರವಿಪ್ರಸಾದ್ ಎಂ ನಯಾಜ್ ಅಭಿಜಿತ್ ಪ್ರಶಾಂತ್ ಮೊದಲದವರು ಉಪಸ್ಥಿತರಿದ್ದರು.
Karave Simha Sena demands suspension of DFO and RFO