ad

ಇಎಸ್ಐ ಸೇವೆ ಸರಿಪಡಿಸಿ-ಡಿಎಸ್ ಅರುಣ್ ಆಗ್ರಹ- Fix ESI service - DS Arun demands

SUDDILIVE || SHIVAMOGGA

ಇಎಸ್ಐ ಸೇವೆ ಸರಿಪಡಿಸಿ-ಡಿಎಸ್ ಅರುಣ್ ಆಗ್ರಹ-Fix ESI service - DS Arun demands

Esi, dsarun


ವಿಮಾ ವೈದ್ಯಾಧಿಕಾರಿ ಸೇವೆಗಳ ದ್ವಿತೀಯ ದರ್ಜೆಯ ಚಿಕಿತ್ಸೆಯನ್ನ ನಿಲ್ಲಿಸಿ ಕಾರ್ಮಿಕರಿಗೆ ಬಹುದೊಡ್ಡ ಅನ್ಯಾವಾಗುತ್ತಿದೆ. ರಾಜ್ಯ ಸರ್ಕಾರ ರಿನಿವಲ್ ಮಾಡಬೇಕಾದ ಇಎಸ್ಐ ಕಾರ್ಡ್ ಗಳನ್ನ ಮಾಡದೆ ಕಾರ್ಮಿಕರನ್ನ ಪರದಾಡುವಂತೆ ಮಾಡುತ್ತಿದೆ ಎಂದು ಶಿವಮೊಗ್ಗ ಜಿಲ್ಲಾ ಇಎಸ್ಐ ವಿಮಾದಾರರು ಹಾಗೂ ಇತರೆ ಕ್ಷೇಮಾಭಿವೃದ್ಧಿ ಸಂಘ ಆರೋಪಿಸಿದೆ. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಂಎಲ್ ಸಿ ಡಿ.ಎಸ್.ಅರುಣ್, ಶಿವಮೊಗ್ಗದಲ್ಲಿ ಡಿಸ್ಪೆನ್ಸರಿ ಮೂರು ಇದೆ ಭದ್ರವಾತಿ ಒಂದು ಇದೆ. ಮೂರು ಸಾವಿರ ಮೇಲೆ ಇಎಸ್ಐ ಕಾರ್ಡ್ ಹೊಂದಿದ್ದರೆ ಒಂದು ಡಿಸ್ಪೆನ್ಸರಿ ಆಸ್ಪತ್ರೆ ತೆರಯಲಾಗುವುದು.  ಸಾಗರದಲ್ಲಿ 5000 ಕಾರ್ಡ್ ಹೋಲ್ಡರ್ ಮತ್ತು ಶಿಕಾರಿಪುರದಲ್ಲಿ ಮೂರು ಸಾವಿರಕ್ಕೂ ಹೆಚ್ಚು ಕಾರ್ಡ ಹೊಂದಿದವರ ಸಂಖ್ಯೆಯಿದೆ.  ಅಲ್ಲಿ ಡಿಸ್ಪೆನ್ಸರಿ ಒಪನ್ ಮಾಡಬೇಕು ಎಂದು ಒತ್ತಾಯಿಸಿದರು. 

ಈ ಡಿಸ್ಪೆನ್ಸರಿಯಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವರಿಗೆ ರೆಫರಲ್ ಕೊಡ್ತಾಯಿಲ್ಲ. ಶಿವಮೊಗ್ಗದಲ್ಲಿ  ಅತಿ ಹೆಚ್ಚು ಕಾರ್ಮಿಕರಿದ್ದಾರೆ. ಈ ರಿನಿವಲ್ ನ್ನ ನಾನು ಕಾರ್ಮಿಕ ಸಚಿವ  ಸಂತೋಷ್ ಲಾಡ್ ರನ್ನ ಭೇಟಿ ಆದಾಗ ನ್ಯಾಚ್ಯುರಲ್ ಆಗಿ ಆಗುತ್ತೆ ಎಂದಿದ್ದರು. ಏನು ಆಗಿಲ್ಲ. ರಾಜ್ಯ ಸರ್ಕಾರ ಸಮಸ್ಯೆ ಮಾಡುತ್ತಿದೆ. ಈ ಸೇವೆಯಲ್ಲಿ ಕೇಂದ್ರ ಸರ್ಕಾರ 88% ಅನುದಾನವಿದ್ದರೆ ರಾಜ್ಯ ಸರ್ಕಾರದ ಪಾಲು 12% ಇರುತ್ತದೆ. ಈ 12% ಅನುದಾನಕ್ಕೆ ರಾಜ್ಯ ಸರ್ಕಾರ ಸಮಸ್ಯೆ ಉಂಟು ಮಾಡುತ್ತಿದೆ.  ಡಿಸ್ಪೆನ್ಸರಿಯಿಂದ ಆಸ್ಪತ್ರೆಗೆ ರೆಫರ್ ಆಗುವಂತೆ ಸರ್ಕಾರ ಮಾಡಬೇಕು ಎಂದು ಆಗ್ರಹಿಸಿದರು. 

ಕೇಂದ್ರ ಸರ್ಕಾರಕ್ಕೆ ಬೈಯಲು ಅತಿಹೆಚ್ಚು ಸಮಯ ಹೋಗುವುದರಿಂದ ಸಚಿವ ಲಾಡ್ ಅವರಿಗೆ ತಮ್ಮ ಇಲಾಖೆಗೆ ಗಮನಮಕೊಡಲಾಗುತ್ತಿಲ್ಲ. ಇಎಸ್ಐ ಕಾರ್ಡ್ ಹೊಂದಿದ ಮಹಿಳಾ ಒಬ್ವರಿಗೆ ರಿನಿವಲ್ ಮಾಡಲು 22 ದಿನಗಳನ್ನ ತೆಗೆದುಕೊಳ್ಳಲಾಗಿದೆ. ಇವರ ಹೆರಿಗೆ ಕಷ್ಟವಾಗಿದೆ. ಇವರ ರಿನಿವಲ್ ನ್ನ ಮೂರು ತಿಂಗಳು ಮಾಡಿಕೊಡಲಾಗುತ್ತಿದೆ. ಇದನ್ನ ಕನಿಷ್ಠ ಮೂರು ವರ್ಷಕ್ಕೆ ಮಾಡಿ, ಇಎಸ್ಐ ಚಿಕಿತ್ಸೆ ನೀಡದ ಆಸ್ಪತ್ರೆಯ ಮೇಲೆ ಎನ್ ಕ್ವಯರಿ ಹಾಕಿ ಎಂದರು

21 ಸಾವಿರ ಸಂಬಳ ತಿಂಗಳು ಪಡೆಯುವರಿಗೆ ಮಾತ್ರ ಇದರ ಲಾಭವಿದೆ ಅದನ್ನ 38 ಸಾವಿರ ಕ್ಕೆ ಲಿಮಿಟ್ ಮಾಡಬೇಕು. ಡಿಸ್ಪೆನ್ಸರಿಯಲ್ಲಿ ಸ್ಟೆಥೋ ಸ್ಕೋಪ್ ಬರೆಯುವ ಸೌಜನ್ಯವೇ ಇಲ್ಲ. ಸರ್ಕಾರದಿಂದ ಮರುಪಾವತಿ ತಡವಾಗುತ್ತಿದೆ. 

Fix ESI service - DS Arun demands

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close