ad

ಕಂದಾಯ ತೆರಿಗೆ ಕಟ್ಟುವ ವಿಷಯದಲ್ಲಿ ಯಡವಟ್ಟು ಸರಿಪಡಿಸಲಿದೆಯಾ ಪಾಲಿಕೆ?Will the corporation fix the problem of paying income tax?

 SUDDILIVE || SHIVAMOGGA

ಕಂದಾಯ ತೆರಿಗೆ ಕಟ್ಟುವ ವಿಷಯದಲ್ಲಿ ಯಡವಟ್ಟು ಸರಿಪಡಿಸಲಿದೆಯಾ ಪಾಲಿಕೆ?Will the corporation fix the problem of paying income tax?

Palike, tax

ಕಂದಾಯ ಕಟ್ಟಲು ಹೋಗುವಾದ ವ್ಯತ್ಯಾಸ ನಡೆದಿದೆ. ತೆರಿಗೆ ಹೆಸರಿನಲ್ಲಿ ವಂಚನೆ ನಡೆಯುತ್ತಿದೆ ಎಂದು ತೆರಿಗೆದಾರ ಅಲ್ವಿನ್ ಲೂಯಿಸ್ ಆರೋಪಿಸಿದರು.  

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2019-20 ರಲ್ಪಿ 5938, 2020-21 ರಲ್ಲಿ 5994, 2021-22 ರಲ್ಲಿ 5985 ರೂ. 2022-23 ರಲ್ಲಿ 5633 ಹಣ ಕಟ್ಟಲಾಗಿದೆ. ಒಟ್ಟು 23,550 ರೂ ಕಟ್ಟಬೇಕಿದೆ. ಆದರೆ ಒಟ್ಟು 18203 ರೂ. ಹಣಕಟ್ಟಲಾಗಿದೆ. ಇದನ್ನ ಆನ್ ಲೈನ್ ಮೂಲಕ ಕಟ್ಟಿದಾಗ 18203 ರೂ. ಕಟ್ಟಲಾಗಿದೆ. ಆದರೆ 5347 ರೂ. ಹಣ ಕಟ್ಟಿಲ್ಲ ಎಂದರು. 

ಒಟ್ಟು 5347 ರೂ. ಹಣ ಕಟ್ಟಿಲ್ಲ. ಆದರೆ ಈ ಹಣ ಎಲ್ಲಿಗೆ ಹೋಗಿದೆ. ಈ ಬಗ್ಗೆ ವಿಚಾರಿಸಿದರೆ ಪಾಲಿಕೆ ಸಿಬ್ಬಂದಿ ನೀವು ಲಕ್ಕಿ ನಿಮಗೆ ಹಣ ಕಡಿಮೆ ಕಟ್ಟಲಾಗಿದೆ ಎಂಬ ನಿರ್ಲಕ್ಷ ಉತ್ತರ ನೀಡಿದ್ದಾರೆ. ಆನ್ ಲೈನ್ ನಲ್ಲಿ ಕಡಿಮೆ ಬರುತ್ತಿದೆ. ಆಫ್ ಲೈನ್ ನಲ್ಲಿ 25% ಹಣ ಹೆಚ್ಚಿಗೆ ಹೋಗುತ್ತಿದೆ. ಈ ಬಗ್ಗೆ ಪಾಲಿಜೆ ಮೌನವಾಗಿದೆ ಎಂದರು.

ಕೆಎಸ್ ವರ್ಕರ್, ಬಿಲ್ ಕಲೆಕ್ಟರ್ ಬಳಿ ಉತ್ತರವಿಲ್ಲ. ಇಖಾತಾ ದಾಖಲೆಯಿದೆ. ದಾಖಲೆಗಳಲ್ಲಿ ಗ್ರ್ಯಾಂಡ್ ಟೋಟಲ್ ಮತ್ತು ಬೇಸ್ ಅಮೌಂಟ್ ತೋರಿಸುತ್ತದೆ. 10 ವರ್ಷ ಬಿಟ್ಟು ಮತ್ತೆ ಬಡ್ಡಿಬರಲಿದೆ. ಬ್ರೋಕರ್ ಮೂಲಕ ಹೋದರೆ ಈ ಹಣವನ್ನ ಕಟ್ಟಲಾಗುತ್ತಿದೆ 1 ಲಕ್ಷ ಖಾತೆದಾರರಿಗೆ ಹೀಗೆ ಮೋಸ ಆಗಿರಬಹುದು. ಇದಕ್ಕೆ ಪತ್ರ ಬರೆಯಲಾಗಿದೆ ಆಯುಕ್ತರೆ ಉತ್ತರಿಸಬೇಕು ಎಂದು ಲೂಯಿಸ್ ತಿಳಿಸಿದ್ದರೆ. 

Will the corporation fix the problem of paying income tax?

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close