ad

371 ರನ್ ಗೆ ಕರ್ನಾಟಕ ಆಲ್ ಔಟ್, ಗೋವಕ್ಕೆ ಆರಂಭಿಕ ಆಘಾತ-Karnataka all out for 371 runs, an early shock for Goa

 SUDDILIVE || SHIVAMOGGA

371 ರನ್ ಗೆ ಕರ್ನಾಟಕ ಆಲ್ ಔಟ್, ಗೋವಕ್ಕೆ ಆರಂಭಿಕ ಆಘಾತ-Karnataka all out for 371 runs, an early shock for Goa

Karnataka, goa
ಫೊಟೊ-ಕೃಪೆ


ನವುಲೆಯ ಕೆ ಎಸ್ ಸಿ ಎ ಗ್ರೌಂಡ್ ನಲ್ಲಿ ನಡೆಯುತ್ತಿರುವ ರಣಜಿ ಪಂದ್ಯವು ಎರನೇ ದಿನಕ್ಕೆ ಕಾಲಿಟ್ಟಿದೆ. ನಾಲ್ಕು ದಿನಗಳ ಆಟದಲ್ಲಿ ಮೊದಲನೇ ದಿನದ ಅಂತ್ಯಕ್ಕೆ 222/5 ರನ್ ಗಳಿಸಿದ್ದ ಕರ್ನಾಟಕ ತಂಡ ಎರಡನೇ ದಿನದಲ್ಲಿ 371 ಕ್ಕೆ ಆಲ್ ಔಟ್ ಆಗಿದೆ.  

ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಕರ್ನಾಟಕ ತಂಡಕ್ಕೆ ಕರುಣ್ ನಯ್ಯರ್ ಆಶ್ರಯವಾಗಿದ್ದಾರೆ. ಕರುಣ್ ನಯ್ಯರ್ 267 ಬಾಲಿನಲ್ಲಿ 174 ರನ್ ಅನ್ನು ಸಿಡಿಸಿ ಅಜೇಯರಾಗಿ ಉಳಿದಿದ್ದಾರೆ. ಇವರ ಜೊತೆ ಶ್ರೇಯಸ್ ಗೋಪಾಲ್ 109 ಬಾಲುಗಳಲ್ಲಿ 57ರನ್ನನ್ನು ಗಳಿಸಿ ಔಟ್ ಆಗಿದ್ದರು. ಇವರ ನಂತರ ಬಂದ ಬ್ಯಾಟ್ಸ್ಮನ್ ಗಳು ಸಣ್ಣ ಮೊತ್ತಕ್ಕೆ ಔಟ್ ಆಗಿ ಹೋಗಿದ್ದಾರೆ. 

ಶ್ರೇಯಸ್ ಗೋಪಾಲ್ ಹಾಗೂ ಕರುಣ್ ನಯರ್ ನಡುವೆ 117 ರನ್ ಪಾರ್ಟ್ನರ್ಶಿಪ್ ಬಿದ್ದಿದ್ದರೆ. ವೈಶಾಕ್ ಹಾಗೂ ಕರುಣ್ ನಯ್ಯರ್ ನಡುವೆ 60ರ ಪಾರ್ಟ್ನರ್ಶಿಪ್ ರನ್ ಬಂದಿದೆ. 371 ರ ಬೆನ್ನು ಹತ್ತಿದ ಗೋವಾ ತಂಡ ಆರಂಭಿಕ ಆಘಾತವನ್ನು ಅನುಭವಿಸಿದೆ.  ಗೋವ 11 ರನ್ನಿಗೆ ಒಂದು ವಿಕೆಟ್ ಅನ್ನು ಕಳೆದುಕೊಂಡು ಆಟ ಮುಂದುವರಿಸಿದೆ. ಅಭಿಲಾಶ್ ಶೆಟ್ಟಿ ಅವರು ಆರಂಭಿಕ ಆಟಗಾರರಾಗಿ ಬಂದಿದ್ದ ಮಂತನ್ ಕುತರ್ಕರ್ ಅವರ ವಿಕೇಟನ್ನು ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. 9ರನ್ ಇರುವಾಗಲೆ ಗೋವಾ ತಂಡ ಒಂದು ವಿಕೆಟ್ ಅನ್ನು ಕಳೆದುಕೊಂಡಿತ್ತು.

Karnataka all out for 371 runs, an early shock for Goa


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close