SUDDILIVE || THIRTHAHALLI
ಬಾಳೆಬೈಲು ಬಳಿ ಗೋ ಸಾಗಾಟಕ್ಕೆ ಯತ್ನ - ವಾಹನ ಸಮೇತ ಇಬ್ಬರ ಬಂಧನ- Attempt to transport cows near Balebailu - Two arrested along with vehicle
ವಾಹನದಲ್ಲಿ ಗೋ ಸಾಗಾಟಕ್ಕೆ ಯತ್ನಿಸುತ್ತಿದ್ದ ಇಬ್ಬರನ್ನು ವಾಹನ ಸಮೇತ ಪೊಲೀಸರು ಬಂಧಿಸಿರುವ ಘಟನೆ ಶುಕ್ರವಾರ ನಡೆದಿದೆ.
ತೀರ್ಥಹಳ್ಳಿ ಪಟ್ಟಣದ ಬಾಳೆಬೈಲಿನ ಬಿರಿಯಾನಿ ಪಾಯಿಂಟ್ ಹಿಂಭಾಗ ಗ್ಯಾರೇಜ್ ಹತ್ತಿರ ಜಾನುವಾರುಗಳನ್ನು ಕಳ್ಳತನ ಮಾಡಲು ಹೊಂಚು ಹಾಕುತ್ತಿರುವುದಾಗಿ ತೀರ್ಥಹಳ್ಳಿ ಪೊಲೀಸರಿಗೆ ಮಾಹಿತಿ ಬಂದಿದ್ದು ಕೂಡಲೇ ಗಸ್ತು ವಾಹನಕ್ಕೆ ವಿಷಯ ತಿಳಿಸಲಾಗಿದೆ. ಸದರಿ ಸ್ಥಳದಲ್ಲಿ ಇಬ್ಬರು ತಮ್ಮ ವಾಹನದಲ್ಲಿ ಕುಳಿತು ಜಾನುವಾರು ಕಳ್ಳತನ ಮಾಡಲು ಹೊಂಚು ಹಾಕುತ್ತಿರುವುದು ಕಂಡು ಬಂದಿದ್ದು
ಕೂಡಲೇ ಸ್ಥಳಿಯರ ಸಹಾಯದಿಂದ ವಾಹನ ಸಮೇತ ಇಬ್ಬರನ್ನು ಬಂಧಿಸಲಾಗಿದೆ.ಜಾನುವಾರು ಕಳ್ಳತನಕ್ಕೆ ತಂದಿದ್ದ ವಾಹನದಲ್ಲಿದ್ದ ವ್ಯಕ್ತಿಗಳಲ್ಲಿ ಶರತ ಬಿನ್ ಧರ್ಮೇಗೌಡ, 35 ವರ್ಷ, ಕಡೇಮನೆ ಬಿಳುಕೊಪ್ಪ, ಮತ್ತೊರ್ವ ನಯಾಜ್ ಬಿನ್ ಇಲಿಯಾಜ್ ಖಾನ್, 34 ವರ್ಷ, ಗಾಜನೂರು ಎಂದು ತಿಳಿದುಬಂದಿದೆ.
ಅಷ್ಟೇ ಅಲ್ಲದೆ ರಸ್ತೆ ಬದಿಯಲ್ಲಿ ಮಲಗಿದ್ದ ಬಿಡಾಡಿ ಜಾನುವಾರುಗಳನ್ನು ಕಳ್ಳತನ ಮಾಡಿಕೊಂಡು ಅಕ್ರಮವಾಗಿ ವಧೆ ಮಾಡಿ ಮಾಂಸ ಮಾಡುವ ಉದ್ದೇಶದಿಂದ ತೆಗೆದುಕೊಂಡು ಹೋಗಲು ವಾಹನ ಸಮೇತ ಬಂದಿರುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.
ಇಬ್ಬರನ್ನು ಪೊಲೀಸರು ಬಂಧಿಸಿ ಕಾನೂನು ಕ್ರಮ ಜರುಗಿಸಿದ್ದು ಇನ್ನು ಮುಂದೆ ಯಾವುದೇ ಅಕ್ರಮ ಗೋವಿನ ಸಾಗಾಟ ಕಂಡುಬಂದರೆ ಹತ್ತಿರದ ಪೊಲೀಸ್ ಠಾಣೆಗೆ ಅಥವಾ ಬೀಟ್ ಸಿಬ್ಬಂದಿಗಳಿಗೆ ತಿಳಿಸಲು ಕೋರಿದ್ದಾರೆ.
Attempt to transport cows near Balebailu
