ad

ಸರ್ಜಿ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಧ್ವನಿ ಎತ್ತುವಂತೆ ಕರೆ ನೀಡಿದ ಸಂಸದರು-MPs call for voices to be raised at Sarji's office inauguration

SUDDILIVE || SHIVAMOGGA

ಸರ್ಜಿ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಧ್ವನಿ ಎತ್ತುವಂತೆ ಕರೆ ನೀಡಿದ ಸಂಸದರು-MPs call for voices to be raised at Sarji's office inauguration

Sarji, mp


ನಗರದ ವಿನೋಬನಗರದ ಶುಭಮಂಗಳ ಕಲ್ಯಾಣ ಮಂದಿರದ ರಸ್ತೆಯಲ್ಲಿರುವ ಮಹಾನಗರ ಪಾಲಿಕೆಯ ಕಟ್ಟಡದಲ್ಲಿ ಎಂಎಲ್ ಸಿ ಡಾ.ಧನಂಜಯ ಸರ್ಜಿರವರ ನೂತನ ಕಚೇರಿ ಪ್ರಾರಂಭಗೊಂಡಿದೆ. ಕಚೇರಿ ಉದ್ಘಟನಾ ಸಮಾರಂಭದಲ್ಲಿ ಸಂಸದ ರಾಘವೇಂದ್ರ  ಆರ್ ಎಸ್ ಎಸ್ ಗೆ ಭೂ ನಿರ್ಬಂಧ ಮಾಡಿರುವ ರಾಜ್ಯ ಸರ್ಕಾರದ ಬಗ್ಗೆ ಮಾತನಾಡಿರುವುದು ಗಮನ ಸೆಳೆದಿದೆ. 

ಮೊದಲಿಗೆ ಕಚೇರಿ ಉದ್ಘಾಟಿಸಿ ಮಾತನಾಡಿದ ಸಂಸದರು,  ಕಚೇರಿ ಕ್ರಿಯಾಶೀಲವಾಗಿ ಕೆಲಸ ಮಾಡಲಿ. ಉದ್ಯೋಗ ಅರಸುವವರಿಗೆ ಅನುಕೂಲವಾಗಲಿದೆ. ಇದು ಪವಿತ್ರವಾದ ಕೆಲಸ.‌ ಇದರಿಂದ ಜಿಲ್ಲೆಗೂ ಶಕ್ತಿ ನೀಡಲಿದೆ‌ ಎಂದರು. 

ನಂತರ ಮಾತನ್ನ ಮುಂದುವರೆಸಿದ ಸಂಸದರು, ನಮ್ಮ ಪರಿವಾರದ ಬಗ್ಗೆ ಹಗುರವಾಗಿ ಮಾತನಾಡಲಾಗುತ್ತಿದೆ. ಈ ಬಗ್ಗೆ ನಾವೆಲ್ಲ ಧ್ಚನಿ ಎತ್ತಬೇಕಿದೆ. ನಿಮ್ಮ‌ಕುಟುಂಬ ಹುಟ್ಟುವುದಕ್ಕೂ ಮೊದಲು ಸಂಘ ಹುಟ್ಟಿತ್ತು. ಈ ಸಂಘದ ಶತಮಾನೋತ್ಸವ ನಡೆಯುತ್ತಿದೆ. ನಮ್ಮ ಜವಾಬ್ದಾರಿ ಹೆಚ್ಚಿದೆ ಎಂದರು.

ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಒಂದುವಾರದಿಂದ RSS ಬಗ್ಗೆ ಹಗೂರ ಮಾತುಗಳು ಕೇಳಿಬರುತ್ತಿದೆ, ಶಾಖೆಗೆ ನಿರ್ಬಂಧಿಸಾಗಿದೆ. ಈಗ ಎಲ್ಲ ಸಂಘ ಸಂಸ್ಥೆಗಳಿಗೆ ನಿರ್ಬಂಧ ಎನ್ನಲಾಗುತ್ತಿದೆ. ಇದು RSS ವಿರುದ್ಧ ಅವರಿಗೆ ಇರುವ ಭಯವೂ ಹೌದು. 

ಜಗದೀಶ್ ಶೆಟ್ಟರ್ ಸಿಎಂ ಆಗಿದ್ದಾಗ ಶಾಲೆಯೊಂದರಲ್ಲಿ ಕೋಳಿ ಕುರಿ ಊಟ ಹಾಕಲಾಗಿತ್ತು. ಅದನ್ನ ನಿರ್ಬಂಧಿಸಲು ಆದೇಶಿಸಲಾಗಿತ್ತು. ಅದನ್ನೇ ತಪ್ಪಾಗಿ ಬಿಂಬಿಸಿ RSSಗೆ ನಿರ್ಬಂಧಿಸಲು ಭೂ ನಿರ್ಬಂಧಿಸಲಾಗಿದೆ. ಕಲ್ಬುರ್ಗ ಚಿತ್ತಾಪುರದಲ್ಲಿ ಆರ್ ಎಸ್ ಎಸ್ 12 ಅಂಶದ ದಾಖಲಾತಿ ಕೇಳಲಾಗಿದೆ.  ನಾವೇನು ಜೀತದಾಳುಗಳಲ್ಲ ಎಂದು ಗುಟರ್ ಹಾಕಿದರು

ಸಚಿವ ಪ್ರಿಯಾಂಕ್ ಖರ್ಗೆಗೆ RSS ನಿರ್ಬಂಧಕ್ಕೆ  ಕ್ಯಾಬಿನೆಟ್ ನಲ್ಲಿ ಸಾಥ್ ಇಲ್ಲ ಎಂಬ ಮಾತು ಹೇಳಲಾಗುತ್ತಿದೆ ಇದರ ಬಗ್ಗೆ ಹೆಚ್ಚಿನ ಮಾಹಿತಿಯಿಲ್ಲ. ಸಿಎಂ ಗೆ ಸ್ಥಾನ ಪಲ್ಲಟವಾಗುವ ಹಿನ್ನಲೆಯಲ್ಲಿ, ಹರಿಪ್ರಸಾದ್ ಗೆ ಸಚಿವ ಸ್ಥಾನ ಪಡೆಯುವ ಬಯಕೆಯಲ್ಲಿ,  ಇನ್ನು ಇಳಿದವರಿಗೆ ಸ್ಥಾನ ಪಡೆಯಲು ಖರ್ಗೆ ಮೂಲಕ ಬಾಣ ಬಿಡಲಾಗುತ್ತಿದೆ. ಹೀಗೆ ಮಾಡಿಕೊಂಡು ಹೋಗುತ್ತಿವರ ಕಾಂಗ್ರೆಸ್ ಈಗ ಕೇವಲ ಎರಡು ಮೂರು ರಾಜ್ಯಗಳಲ್ಲಿ ಉಳಿದುಕೊಂಡಿದೆ. ಅದಕ್ಕೂ ಕೊನೆಯ ಮೊಳೆ ಹೊಡೆದುಕೊಳ್ಳಲಿದ್ದಾರೆ ಎಂದು ಭವಿಷ್ಯ ನುಡಿದರು. 

ರಸ್ತೆಯಲ್ಲಿ ಗುಂಡಿಗಳಿವೆ. ನಿಮ್ಮ ದುಸ್ಥಿತಿ ಮುಚ್ಚಿಕೊಳ್ಳುವ ಹಿನ್ನಲೆಯಲ್ಲಿ RSS ಗೆ ನಿರ್ಬಂಧವಹಿಸಲಾಗಿದೆ. ಸಚಿವ ಖರ್ಗೆ ಪತ್ರದಲ್ಲಿ ಕೈಯಲ್ಲಿರುವ ಲಾಠಿ, ರಾಷ್ಟ್ರೀಯತೆ ವಿರುದ್ಧ ಚಟುವಟಿಕೆ ಎಂದು ಉಲ್ಲೇಖಿಸಲಾಗಿದೆ. ಗಣವೇಧಾರಿ ಸ್ವಯಂಸೇವಕರು  ಅನ್ನಬಿಟ್ಟು ರಾಷ್ಟ್ರಸೇವೆ ಮಾಡಿದ್ದಾರೆ. ಟಿಫಿನ್ ಕ್ಯಾರಿಯರ್ ನಲ್ಲಿ ಬಾಂಬ್ ಸ್ಪೋಟಿಸಿದರೆ ಬ್ರದರ್ ಎನ್ನುವ ನಿಮಗೆ ರಾಷ್ಟ್ರೀಯತೆ ಯಾವುದು, ದೇಶದ್ರೋಹಿ ಚಟುವಟಿಕೆಯಾವುದು ಎಂಬುದು ಕಂಡು ಹಿಡಿಯಲು ಆಗುತ್ತಿಲ್ಲ. ರಾಜ್ಯ ಸರ್ಕಾರ ಗ್ಯಾರೆಂಟಿ ಹೆಸರಿನಲ್ಲಿ 40 ಸಾವಿರ ಕೋಟಿ ಹಣ ಕೆಪಿಟಿಸಿಎಲ್ ಬಿಲ್ ಬಾಕಿ ಉಳಿಸಿಕೊಂಡಿದೆ.  ಕಟ್ಟಕು ಆಗುತ್ತಿಲ್ಲ. ಇವನ್ನ ಸರಿಡಿಸಿ ಎಂದರೆ ಅಹಂಕಾರದ ಮಾತನ್ನಾಡುತ್ತಿದ್ದೀರಿ ಎಂದು ಆಗ್ರಹಿಸಿದರು. 

ಬಿಹಾರ್ ಚುನಾವಣೆಯ ನಂತರ ಎಲ್ಲದಕ್ಕೂ ಉತ್ತರಕೊಡಲಾಗಿವುದು. ನೀರಗಂಟಿ, ಆಶಾಕಾರ್ಯಕರ್ತರು ಸಂಬಳವಿಲ್ಲವೆಂದು ಆತ್ಮಹತ್ಯೆಯದಾರಿ ಹಿಡಿದಿದ್ದಾರೆ. ಡಿಸಿಎಂ ಡಿಕೆಶಿ ಅವರ ಸಂಪರ್ಕ ಸಭೆಯಲ್ಲಿ ಗೃಹಲಕ್ಷ್ಮಿ ಹಣ ಬಂದಿಲ್ಲ ಎಂದು ಸಾರ್ವಜನಿಕರು ಅಳಲು ತೋಡಿಕೊಂಡಿದ್ದಾರೆ ಗ್ಯಾರೆಂಟಿನೂ ಸರಿಯಾಗುತ್ತಿಲ್ಲ. ಅಭಿವೃದ್ದಿನೂ ಇಲ್ಲ ಆರ್ ಎಸ್ ಎಸ್ ಬಗ್ಗೆ ಮಾತನಾಡುಲಾಗುತ್ತಿದೆ.

ಸರ್ಕಾರಿ ಅಧಿಕಾರಿಗಳಿಗೆ ರಿನಿವಲ್ ಹೆಸರಿನಲ್ಲಿ ಹಣವಸೂಲಿ ಆಗುತ್ತಿದೆ. ಬಿಹಾರ್ ಚುನಾವಣೆ ಹೆಸರಿನಲ್ಲಿ ವಸೂಲಿ ಮಾಡಲಾಗುತ್ತಿದೆ. ಈ ಹಣ ಎಲ್ಲಿಗೆ ಹೋಗುತ್ತೋದೇವರಿಗೆಗೊತ್ತು ಎಂದು ವ್ಯಂಗ್ಯವಾಡಿದರು

MPs call for voices to be raised at Sarji's office inauguration

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close