ad

ಚಲಿಸುತ್ತಿದ್ದ ವಾಹನದಿಂದ ಬಿದ್ದು ಹಮಾಲಿ ಸಾವು- Porter dies after falling from vehicle

 SUDDILIVE || SHIVAMOGGA

ಚಲಿಸುತ್ತಿದ್ದ ವಾಹನದಿಂದ ಬಿದ್ದು ಹಮಾಲಿ ಸಾವು- Porter dies after falling from vehicle   

Vehicle, porter


ಗಾಡಿಗೆ ಅಡ್ಡಬಂದ ಪ್ರಾಣಿಯನ್ನ ತಪ್ಪಿಸಲು ಹೋಗಿ ಅಡ್ಡದಿಡ್ಡಿ ವಾಹನ ಚಲಿಸಿದ ಪರಿಣಾಮ ಚಲಿಸುತ್ತಿದ್ದ ವಾಹನದಿಂದ ಹಮಾಲಿಯೋರ್ವನು ಕೆಳಗೆ ಬಿದ್ದು ಸಾವುಕಂಡಿರುವ ಘಟನೆ ಹೊಳೆಹೊನ್ನೂರು ಪೋಲೀಸ್ ಠಾಣೆ ವ್ಯಪ್ತಿಯಲ್ಲಿ ನಡೆದಿದೆ.

ದಾವಣಗೆರೆಯಿಂದ ರಮೇಶ ಎಂಬಾತ 35 ವರ್ಷದ ಹಮಾಲಿ ಕೆಎ 17 ಎಬಿ 0839 ಕ್ರಮ ಸಂಖ್ಯೆಯ ವಾಹನದಲ್ಲಿ ದಿನಸಿ ಐಟಂ ಹಾಕಿಕೊಂಡು ಡೆಲವರಿಗೆ ತೆರಳಿದ್ದಾನೆ. ದಾವಣಗೆರೆ, ಚನ್ನಗಿರಿ ಮೂಲಕ ಶಿವಮೊಗ್ಗ್ಕೆ ಬರುತ್ತಿದ್ದ ವಾಹನಕ್ಕೆ ಅಗರದಹಳ್ಳಿ ಕ್ಯಾಂಪ್ ಬಳಿ ನಾಯಿಯೊಂದು ಅಡ್ಡ ಬಂದಿದೆ.

ಅಡ್ಡ ಬಂದ ನಾಯಿಯನ್ನ ತಪ್ಪಿಸಲು ಹೋಗಿ ಚಾಲಕ ಅಡ್ಡದಿಡ್ಡಿ ಚಲಿಸಿದ ಪರಿಣಾಮ ರಮೇಶ್ ವಾಹನದಿಂದ ಕೆಳಗೆ ಬಿದ್ದಿದ್ದಾನೆ. ಆತನನ್ನ ಶಿವಮೊಗ್ಗ ಮೆಗ್ಗಾನ್ ಗೆ ಕರೆತಂದು ನಂತರ ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ರಮೇಶ್ ಸಾವುಕಂಡಿದ್ದಾನೆ. 

ಪ್ರಕರಣ ಕುರಿತಂತೆ ಕೆಎ 17 ಎಬಿ 0839 ಕ್ರಮ ಸಂಖ್ಯೆಯ ವಾಹನದ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ.ರಮೇಶ್ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಗೌಡಿಕಟ್ಟೆಯ ನಿವಾಸಿಯಾಗಿದ್ದಾನೆ. 

Porter dies after falling from vehicle 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close