SUDDILIVE || SHIVAMOGGA
ಶಿವಮೊಗ್ಗದಲ್ಲಿರುವ ದಾವಣಗೆರೆ ಅಧಿಕಾರಿಯ ಮನೆಯ ಮೇಲೂ ಲೋಕಾ ದಾಳಿ-Lokayukta raid of Davanagere officer in shivamogga
ರಾಜ್ಯದ ವಿವಿಧೆಡೆ 12 ಅಧಿಕಾರಿಗಳ ಮನೆಗಳ ಮೇಲೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾವಣಗೆರೆ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಯೊಬ್ಬರ ಶಿವಮೊಗ್ಗದ ಮನೆಯ ಮೇಲು ದಾಳಿಯಾಗಿದೆ.
ದಾವಣಗೆರೆಯ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಯಮಿತದ ಎಇಇ ಜಗದೀಶ್ ನಾಯ್ಕ್ ಅವರ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ. ಶಿವಮೊಗ್ಗದ ಸವಳಂಗ ರಸ್ತೆಯ ಶಿವಬಸವ ನಗರದ ಇಂದಿರಾ ಗಾಂಧಿ ಬಡಾವಣೆಯಲ್ಲಿರುವ ಅವರ ಮನೆ ಮೇಲು ದಾಳಿಯಾಗಿದೆ.
ದಾವಣಗೆರೆಯಿಂದ ಎರಡು ಜೀಪುಗಳಲ್ಲಿ ಆಗಮಿಸಿರುವ ಲೋಕಾಯುಕ್ತ ಅಧಿಕಾರಿಗಳ ದಾಳಿಯಲ್ಲಿ ಪಾಲ್ಗೊಂಡಿದ್ದಾರೆ.
ಎಲ್ಲೆಲ್ಲಿ ದಾಳಿ
ಜ್ಯೋತಿ ಮೇರಿ - ಪ್ರಥಮ ದರ್ಜೆ ಸಹಾಯಕಕಿ (ಎಫ್‌ಡಿಎ), ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ಹಾಸನ)
ಧೂಳಪ್ಪ- ಸಹಾಯಕ ನಿರ್ದೇಶಕ, ಕೃಷಿ ಇಲಾಖೆ (ಕಲಬುರಗಿ)
ಚಂದ್ರಕುಮಾರ್- ಸಹಾಯಕ ನಿರ್ದೇಶಕ, ಕೃಷಿ ಇಲಾಖೆ (ಚಿತ್ರದುರ್ಗ)
ಲಕ್ಷ್ಮೀನಾರಾಯಣ ಪಿ. ನಾಯಕ್ - ಪ್ರಾದೇಶಿಕ ಸಾರಿಗೆ ಅಧಿಕಾರಿ (ಆರ್‌ಟಿಒ), ಸಾರಿಗೆ ಇಲಾಖೆ (ಉಡುಪಿ)
ಮಂಜುನಾಥ ಜಿ. – ವೈದ್ಯಾಧಿಕಾರಿ, ಮಲ್ಲಸಂದ್ರ ಹೆರಿಗೆ ಆಸ್ಪತ್ರೆ (ಬೆಂಗಳೂರು ನಗರ)
ಅಶೋಕ - ಕಂದಾಯ ನಿರೀಕ್ಷಕ ಹಾಗೂ ಗ್ರಾಮ ಲೆಕ್ಕಾಧಿಕಾರಿ (ವಿಎಒ), ರಾಣೇಬೆನ್ನೂರು (ಹಾವೇರಿ)
ಬಸವೇಶ್ – ಪ್ರಭಾರ ಕಾರ್ಯನಿರ್ವಾಹಕ ಅಧಿಕಾರಿ, ತಾಲೂಕು ಪಂಚಾಯಿತಿ, ಸವಣೂರು (ಹಾವೇರಿ)
ಚೇತನ್- ಕಿರಿಯ ಇಂಜಿನಿಯರ್, ಆಲಮಟ್ಟಿ ಬಲದಂಡೆ ಕಾಲುವೆ ಕಚೇರಿ, (ಬಾಗಲಕೋಟೆ)
ವಿ. ಸುಮಂಗಳಾ- ನಿರ್ದೇಶಕಿ, ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ (ಬೆಂಗಳೂರು ನಗರ)
ಬಿ.ಎಸ್. ನಡುವಿನಮನಿ – ಕಿರಿಯ ಇಂಜಿನಿಯರ್, ಆಹಾರ ಮತ್ತು ನಾಗರಿಕ ಸರಬರಾಜು ನಿಗಮ (ದಾವಣಗೆರೆ)
ಎನ್. ಕೆ. ಗಂಗಾಮರಿ ಗೌಡ- ಮೋಜಣಿದಾರ, ವಿಶೇಷ ಭೂಸ್ವಾಧೀನ ಕಚೇರಿ-2, ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬೆಂಗಳೂರು)
Lokayukta raid of Davanagere officer in shivamogga