ಕುರುಬರನ್ನ ಎಸ್ಟಿಗೆ ಸೇರಿಸಬೇಕೋ ಬೇಡವೋ ಎಂಬುದನ್ನ ಸಿಎಂ ಸ್ಪಷ್ಟಡಿಸಲಿ-ಈಶ್ವರಪ್ಪ- CM should clarify whether Kurubas should be included in ST or not - Eshwarappa

 SUDDILIVE || SHIVAMOGGA


ಕುರುಬರನ್ನ ಎಸ್ಟಿಗೆ ಸೇರಿಸಬೇಕೋ ಬೇಡವೋ ಎಂಬುದನ್ನ ಸಿಎಂ ಸ್ಪಷ್ಟಡಿಸಲಿ-ಈಶ್ವರಪ್ಪ-CM should clarify whether Kurubas should be included in ST or not - Eshwarappa   

Eshwarappa, kuruba


ಕುರುಬರನ್ನ ಎಸ್ಟಿಗೆ ಸೇರಿಸಬೇಕೋ ಬೇಡವೋ ಎಂಬುದನ್ನ ಸಿಎಂ ಸ್ಪಷ್ಟಪಡಿಸಲಿ ಎಂದು ಮಾಜಿ ಡಿಸಿಎಂ ಸವಾಲು ಹಾಕಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಾಮಿ ಈಶ್ವರಾನಂದ ಸ್ವಾಮಿಗಳ ನೇತೃತ್ವದಲ್ಲಿ ಮುಕುಟಪ್ಪನವರೊಂದಿಗೆ ನಾನು ನೇರವಾಗಿ ಕುರುಬರನ್ನ ಎಸ್ಟಿಗೆ ಸೇರಿಸುವ ಹೋರಾಟದಲ್ಲಿ ಭಾಗಿಯಾಗಿದ್ದೆ. ನನ್ನ ಮಗ ಖಜಾಂಚಿ ಆಗಿದ್ದಾನೆ.

ಕುಲಶಾಸ್ತ್ರ ಅಧ್ಯಾಯದಲ್ಲಿ ಎಸ್ಟಿಯಲ್ಲಿರುವ ಯಾವ ಸಮಾಜಕ್ಕೂ ಅನ್ಯಾಯವಾಗದೆ ಕುರುಬರನ್ನ ಎಸ್ಟಿಗೆ ಸೇರಿಸಬೇಕು ಎಂಬುದು ನನ್ನ ಅಭಿಲಾಶೆ ಎಂದರು 

ಉತ್ತರ ಕರ್ನಾಟಕದಲ್ಲಿ ಕುರುಬರು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ದುಸ್ಥಿತಿಯಲ್ಲಿದ್ದಾರೆ. ಬೆಂಗಳೂರಿನ ಸಮಾವೇಶದಲ್ಲಿ 10 ಲಕ್ಷ ಜನರನ್ನ ಸೇರಿಸಿದ್ವಿ. ಆಗ ಸಿದ್ದರಾಮಯ್ಯನವರು ಬರಲಿಲ್ಲ. ಈಗ ಅವರು ಸ್ಪಷ್ಟಪಡಿಸಲಿ. ನಮ್ಮ ಹೋರಾಟ ವಾಲ್ಮೀಖಿ ಸಮಾಜದ ವಿರುದ್ಧವಲ್ಲ. ಈಗಿರುವ ಎಸ್ಟಿ ಮೀಸಲು 13% ಇದೆ ಅದನ್ನ 20% ಗೆ ಏರಿಸಿ ಕುರುಬರನ್ನ ಸೇರಿಸಬೇಕು . ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿಗೆ ಸೇರಿಸಿ ಎಂದು ಒತ್ತಾಯಿಸಿದರು.

ವಾಲ್ಮೀಖಿ ಸಮಾವೇಶದಲ್ಲಿ ಉಗ್ರಪ್ಪ ಎಸ್ಟಿಗೆ ಕುರುಬರನ್ನ ಸೇರಿಸಬೇಡಿ ಎಂದಿದ್ದಾರೆ. ಇದಕ್ಕೆ ಸಿಎಂ ಸಿದ್ದರಾಮಯ್ಯ ನಾನು ಅಲ್ಲ ಮಿಸ್ಟರ್ ಈಶ್ವರಪ್ಪ ಎಸ್ಟಿಗೆ ಸೇರಿಸಲು ಪ್ರಯತ್ನಿಸಿರೋದು ಎಂದಿದ್ದಾರೆ. ಮೇಲ್ನೋಟಕ್ಕೆ ಕುರುಬರ ಜನಾಂಗದಲ್ಲಿರುವವರಿಗೆ ಸೌಲಭ್ಯ ವಂಚಿತರಾಗಿದ್ದಾರೆ. ನನಗೆ ಮತ್ತು ಸಿದ್ದರಾಮಯ್ಯರಿಗೆ ಸವಲತ್ತು ಬೇಡ. ಆದರೆ ದುಸ್ಥಿತಿಯಲ್ಲಿರುವ ಕುರುಬರಿಗೆ ಈ ಮೀಸಲು ಬೇಕು. ಬೀದರ್ ಯಾದಗಿರಿ ಕಲ್ಬುರ್ಗಿಯಲ್ಲಿ ಕುರುಬರಿಗೆ ಎಸ್ಟಿ ಮೀಸಲಿತ್ತು. ಆದರೆ ಸ್ಪಷ್ಟತೆಯಿರಲಿಲ್ಲ. ಎಲ್ಲಾ ಜಿಲ್ಲೆಯ ಕುರುಬರನ್ನ ಸೇರಿಸಿ ಬೊಮ್ಮಾಯಿ ಸರ್ಕಾರವಿದ್ದಾಗ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಈಗ ಕೇಂದ್ರ ಸ್ಪಷ್ಟನೆ ಕೇಳಿ ಪತ್ರ ಬರೆದಿದೆ. ಅದಕ್ಕೆ ಸಿಎಂ ಅವರ ನೇತೃತ್ವದಲ್ಲಿ ಸಭೆ ನಡೆದು ಕುರುಬರಿಗೆ ಇನ್ನೇನು ಎಸ್ಟಿ ಮೀಸಲು ಸಿಕ್ಕೇಬಿಡ್ತು ಎಂಬಂತೆ ಬಿಂಬಸಲಾಯಿತು. 

ಮಿ.ಈಶ್ವರಪ್ಪನವರು ಹೋರಾಟ ಮಾಡಿದ್ದರು ಎಂದು ಉಗ್ರಪ್ಪನವರಿಗೆ ಉತ್ತರಿಸಿದ್ದಾರೆ. ಸಿಎಂ ಉಗ್ರಪ್ಪನವರಿಗೆ ಹೆದರುಕೊಂಡು ಈ ಉತ್ತರ ನೀಡಿದಂತೆ ಕಾಣುತ್ತಿದೆ ಎಂದ ಈಶ್ವರಪ್ಪ ನಮ್ಮ‌ ಹೋರಾಟವನ್ನ ಗಮನಿಸಿದ ಬೊಮ್ಮಾಯಿ ಸರ್ಕಾರ ಕೆಲ ಜಿಲ್ಲೆಗೆ ಸೀಮಿತವಾಗಿದ್ದ ಕುರುಬರ ಎಸ್ಟಿ ಮೀಸಲನ್ನ ಸಮಗ್ರ ಸಮಾಜಕ್ಕೆ ಸೇರಿಸಿ ಪ್ರಸ್ತಾವನೆಯನ್ನ ಕೇಂದ್ರಕ್ಕೆ ಸಲ್ಲಿಸಲಾಗಿದೆ. 

ಎಸ್ಟಿಯಲ್ಲಿರುವ ಮೀಸಲು 7% ಇದೆ ಅದನ್ನ ಮುಟ್ಟದೆ 3 ಎನಲ್ಲಿರುವ ಕುರುಬರ ಮೀಸಲನ್ನ ತೆಗೆದು ಎಸ್ಟಿಗೆ ಸೇರಿಸಲಿ ಎಂಬುದು ನಮ್ಮ ಒತ್ತಾಯ ಎಂದರು. 

ಗೋವರ್ಧನ ಟ್ರಸ್ಟ್ ಆರಂಭವಾಗಿ ಎರಡು ತಿಂಗಳಾಗಿದೆ. 4000 ಕ್ಕೂ ಹೆಚ್ಚು ಗೋಪ್ರೇಮಿಗಳು 100 ರೂನೊಂದಿಗೆ ನೋಂದಣಿಯಾಗಿದ್ದಾರೆ. ಶೃಂಗೇರಿ ಮಠವು 3 ಲಕ್ಷ ರೂ.ವನ್ನ ದೇಣಿಗೆ ನೀಡಿದ್ದಾರೆ. ಹುಂಚ ಜಗದ್ಗುರುಗಳು ಚಟ್ನಳ್ಳಿಯಲ್ಲಿ 6 ಎಕರೆಯಲ್ಲಿ ಮೇವು ಬೆಳೆಯಲು ಎರಡು ಲಕ್ಷ ರೂ. ದೇಣಿಗೆ ನೀಡಿದ್ದಾರೆ. ದೇಣಿಗೆ ನೀಡಲು ಬಯಸುವವರು ರಾಷ್ಟ್ರಭಕ್ತರ ಬಳಗದ ಉಮೇಶ್ ಆರಾಧ್ಯ-9886177311, ಎಸ್ಕೆ ಶೇಷಾಚಲ-9448131575, ಸ್ವರೂಪ್ 94464586181 ಸಂಪರ್ಕಿಸ ಬಹುದು ಎಂದು ಮಾಜಿ ಡಿಸಿಎಂ ಹೇಳಿದರು. 

CM should clarify whether Kurubas should be included in ST or not - Eshwarappa 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close