ad

ಶಿವಮೊಗ್ಗ ಸಂಸದರಿಗೆ ಸಚಿವ ಖರ್ಗೆ X ನಲ್ಲಿ ತಿರುಗೆಟು! Minister Kharge hits back at Shivamogga MP in X!

 SUDDILIVE || SHIVAMOGGA

ಶಿವಮೊಗ್ಗ ಸಂಸದರಿಗೆ ಸಚಿವ ಖರ್ಗೆ X ನಲ್ಲಿ ತಿರುಗೆಟು! Minister Kharge hits back at Shivamogga MP in X!

Kharge, Mp


ಶಿವಮೊಗ್ಗ ಸಂಸದರು ಕಾಂಗ್ರೆಸ್ ಪಕ್ಷ ಬಿಹಾರ ಚುನಾವಣೆಗೆ  ಅಧಿಕಾರಿಗಳಿಂದ ಸಂಗ್ರಹಿಸುತ್ತಿದ್ದಾರೆ ಎಂಬ ಹೇಳಿಕೆಗೆ ಸಚಿವ ಪ್ರಿಯಾಂಕ್ ಖರ್ಗೆ ಟ್ವೀಟರ್ ಮೂಲಕ ಅವರ ತಂದೆ ಮತ್ತು ದಿ ಅನಂತ ಕುಮಾರ ಅವರ ಸಂಭಾಷಣೆಯನ್ನ ಟ್ವೀಟ್ ಮಾಡುವ ಮೂಲಕ ತಿರುಗೇಟು ನೀಡಿದ್ದಾರೆ. 

ತಮ್ಮ ಎಕ್ಸ್ ಖಾತೆಯಲ್ಲಿ ಬಿಜೆಪಿ ಹೈಕಮಾಂಡಿಗೆ ₹1800 ಕೋಟಿ ಕಪ್ಪ ನೀಡಿದ್ದನ್ನು ಶ್ರೀ ಯಡಿಯೂರಪ್ಪನವರು ಹಾಗೂ ದಿ. ಶ್ರೀ ಅನಂತ್ ಕುಮಾರ್ ಅವರ ಸಂಭಾಷಣೆಯಲ್ಲಿ ಬಹಿರಂಗವಾಗಿದ್ದನ್ನು ಕರ್ನಾಟಕದ ಬಿಜೆಪಿ ನಾಯಕರು ಮರೆತಿದ್ದಾರೆಯೇ?

ಮರೆತಿದ್ದರೆ, ನಾವು ಮತ್ತೊಮ್ಮೆ ನೆನಪಿಸುತ್ತಿದ್ದೇವೆಂದು ಸಂಭಾಷಣೆಯ ತುಣಕನ್ನ ಹರಿಬಿಟ್ಟಿದ್ದಾರೆ. ಸಂಸದ ಬಿ.ವೈ ರಾಘವೇಂದ್ರರವರು ತಮ್ಮ ಪೂಜ್ಯ ತಂದೆಯವರ ಮಾತುಗಳನ್ನು ಒಮ್ಮೆ ಕಿವಿಗೊಟ್ಟು ಕೇಳಿಸಿಕೊಂಡು ನಂತರ ಮಾತನಾಡಿದರೆ ಉತ್ತಮ ಎಂದು ಎಚ್ಚರಿಸಿದ್ದಾರೆ. ಬಿಜೆಪಿಯಲ್ಲಿ ಮುಖ್ಯಮಂತ್ರಿ ಹುದ್ದೆಗೆ ₹2,500 ಕೊಡಬೇಕು ಎಂದಿದ್ದವರೂ ಬಿಜೆಪಿಯವರೇ, ಮಂತ್ರಿಗಿರಿಗೆ 60, 70 ಕೋಟಿ ಕೊಡಬೇಕು ಎಂದಿದ್ದವರೂ ಬಿಜೆಪಿಯವರೇ ಎಂದು ಕಾಲೆಳೆದಿದ್ದಾರೆ.


ಬಿಜೆಪಿ ಹೈಕಮಾಂಡ್ ಹುದ್ದೆಗಳನ್ನು ಮಾರಾಟಕ್ಕಿಟ್ಟು ವ್ಯಾಪಾರಕ್ಕೆ ಕುಳಿತಿತ್ತು ಎನ್ನುವುದನ್ನು ಬಿಜೆಪಿಯವರೇ ಬಹಿರಂಗಪಡಿಸಿದ್ದರು. ಕರ್ನಾಟಕದ ಸಂಪನ್ಮೂಲವನ್ನು ಹೈಕಮಾಂಡ್ ಸಮರ್ಪಣಾಮಸ್ತು ಮಾಡಿದ ಕೀರ್ತಿ ಬಿಜೆಪಿಯದ್ದೇ ಹೊರತು ಕಾಂಗ್ರೆಸ್ಸಿನದ್ದಲ್ಲ ಎಂದು ಬಿಜೆಪಿಗೆ ತಿರುಗೇಟು ನೀಡಿದ್ದಾರೆ. 

ಸಂಸದರ ಈ ಹೇಳಿಕೆಗೆ ಡಿಸಿಎಂ ಡಿಕೆ ಶಿವಕುಮಾರ್ ಸಹ ಸಂಸದರು ದಾಖಲೆ ಇದ್ದರೆ ಕೊಟ್ಟು ಮಾತಾಡಲಿ ಎಂದು ಸವಾಲೆಸಿದ್ದಾರೆ. ಇಷ್ಟುದಿನ  ಸಂಸದರು ಸ್ಥಳೀಯವಾಗಿ ವಿವಾದವನ್ನ ಮೈಮೇಲೆ ಎಳೆದುಕೊಳ್ಳದೆ ನಡೆಸುತ್ತಿದ್ದ ಸಂಸದರ ಹೆಸರು ದಿಡೀರ್ ಎಂದು ರಾಜ್ಯಮಟ್ಟದಲ್ಲಿ  ಹರಿದಾಡಲು ಆರಂಭಿಸಿದೆ.

Minister Kharge hits back at Shivamogga MP in X!

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close