ಮಗಳಿಗೆ ಹತ್ಯೆ ಮಾಡಿ ತಾಯಿ ನೇಣಿಗೆ ಶರಣು-Mother hangs herself after killing daughter

SUDDILIVE || SHIVAMOGGA

ಮಗಳಿಗೆ ಹತ್ಯೆ ಮಾಡಿ ತಾಯಿ ನೇಣಿಗೆ ಶರಣು-Mother hangs herself after killing daughter

Mother, hangs



ಮಗಳನ್ನ ಕೊಲೆ ಮಾಡಿ ತಾಯಿಯೂ ನೇಣಿಗೆ ಶರಣಾದ ಘಟನೆ ಶಿವಮೊಗ್ಗದ  ಮೆಗ್ಗಾನ್  ಜಿಲ್ಲಾಸ್ಪತ್ರೆಯ  ಕ್ವಾರ್ಟರ್ಸ್ ನಲ್ಲಿ ನಡೆದ ಘಟನೆ .

ಶರಾವತಿ ನಗರದಲ್ಲಿರುವ ಆದಿಚಂಚನಗಿರಿ ಶಾಲೆಯ ಎದುರು ಇರುವ ಕ್ವಾರ್ಟರ್ಸ್ ನ ಎಫ್ 2 ಬ್ಲಾಕ್ ನಲ್ಲಿರುವ ಕ್ವಾಟ್ರಸ್ ನಲ್ಲಿ ಘಟನೆ ನಡೆದಿದೆ. 

ಪೂರ್ವೀಕಾ (12) 6 ನೇ ಕ್ಲಾಸ್ ಓದುತ್ತಿದ್ದ  ಮಗಳ ಕೊಲೆ ಮಾಡಿದ ತಾಯಿ ಶೃತಿ(35) ಬಳಿಕ ನೇಣು ಬಿಇದುಕೊಂಡಿರುವುದಾಗಿ ತಿಳಿದುಬಂದಿದೆ. ಪತಿ ರಾಮಣ್ಣ ಮೆಗ್ಗಾನ್ ನ ಖಾಯಂ ಲ್ಯಾಬ್ ಟೆಕ್ನಿಷಿಯನ್ ನೌಕರರಾಗಿದ್ದು ನೈಟ್ ಡ್ಯೂಟಿಗೆ ಹೋದಾಗ ಈ ಘಟನೆ ನಡೆದಿದೆ. 

ರಾಮಣ್ಣನವರು ರಾತ್ರಿ 8 ಗಂಟೆಗೆ ತೆರಳಿದಾಗ ಮಗಳು ಪೂರ್ವಿಕ ಕರೆ ಮಾಡಿ ಮನೆಗೆ ಬಾ ಅಪ್ಪ ಅಮ್ಮ ಕೂಗಾಡುತ್ತಿದ್ದಾಳೆ ಎಂದು ತಿಳಿಸಿದ್ದು, ಕರ್ತವ್ಯಕ್ಕೆ ಈಗ ಬಂದಿರುವೆ ಬೆಳಿಗ್ಗೆ ಬರುವೆ ಎಂದು ತಂದೆ ಹೇಳಿದ್ದಾರೆ. ಬೆಳಿಗ್ಗೆ 8 ಗಂಟೆಗೆ ಬಂದಾಗ   ಮನೆಯ ಬಾಗಿಲು ತೆಗೆಯದಿಲ್ಲ. ನಂತರ ಹಿಂಬದಿಯಲ್ಲಿ ಕಿಟಕಿಯಲ್ಲಿ ನೋಡಿದಾಗ ಶೃತಿ ನೇಣು ಬಿಗಿದುಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. 

ಈ ನಡುವೆ   ಮಗುವಿನ  ಹತ್ಯೆ ಮಾಡಿದ ತಾಯಿ ಗೆ ಮಾನಸಿಕ  ಅಸ್ವಸ್ಥೆಳಾಗಿದ್ದು ಚಿಕಿತ್ಸೆ  ಪಡೆಯುತ್ತಿದ್ದರು ಎಂಬ ಮಾಹಿತಿ ಸ್ಥಳೀಯವಾಗಿ ಲಭ್ಯವಾಗಿದೆ. ದೊಡ್ಡಪೇಟೆ  ಪೋಲೀಸ್  ಠಾಣೆ ಯಲ್ಲಿ ಕೇಸ್ ದಾಖಲಾಗಿದೆ. 

Mother hangs herself after killing daughter

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close