SUDDILIVE || SHIVAMOGGA
ಕುಂಸಿಯಲ್ಲಿ ವೃದ್ಧೆಯ ಹತ್ಯೆ-Murder of an old woman in Kumsi
ಶಿವಮೊಗ್ಗ ತಾಲೂಕು ಕುಂಸಿಯ್ಲಿ ವೃದ್ಧೆಯೊಬ್ಬರನ್ನ ಹತ್ಯೆಯಾಗಿರುವ ಬಗ್ಗೆ ವರದಿಯಾಗಿದೆ. ನಿನ್ನೆ ನಡೆದಿರುವ ಘಟನೆಯಲ್ಲಿ 65 ವರ್ಷದ ವೃದ್ಧೆ ಬಸಮ್ಮ ಎಂಬವರನ್ನ ಇರಿದು ಹತ್ಯೆ ಮಾಡಲಾಗಿದೆ.
ಕುಂಸಿಯ ರಥಬೀದಿಯಲ್ಲಿನ ಮನೆಯಲ್ಲಿ ಘಟನೆ ನಡೆದಿದೆ. ಮಹಿಳೆ ಮನೆಯಲ್ಲಿ ಒಬ್ಬಂಟಿಯಾಗಿ ವಾಸವಿದ್ದರು. ನಿನ್ನೆ ಗುರುವಾರ ಇವರ ಪುತ್ರ ಮನೆಗೆ ಬಂದ ಸಂದರ್ಭದಲ್ಲಿ ನಡೆದ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಕುಂಸಿ ಪೊಲೀಸ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿದ್ದು ತನಿಖೆ ನಡೆಸ್ತಿದ್ದಾರೆ.
ಬಸಮ್ಮಳಿಗೆ ಮೂವರು ಮಕ್ಕಳಿದ್ದು ಮೂರವರೂ ಶಿವಮೊಗ್ಗದಲ್ಲಿ ವಾಸವಾಗಿದ್ದರು. ಇಬ್ವರು ಹೆಣ್ಣು ಮಕ್ಕಳಿಗೆ ಮದುವೆಯಾಗಿ ಶಿವಮೊಗ್ಗದಲ್ಲಿ ಗಂಡನ ಮನೆಯಲ್ಲಿ ವಾಸವಾಗಿದ್ದರೆ, ಓರ್ವ ಗಂಡು ಮಗನೂ ಸಹ ಶಿವಮೊಗ್ಗದಲ್ಲಿ ವಾಸವಾಗಿದ್ದಾರೆ. ಮಗ ತಾಯಿ ಮನೆಗೆ ಬಂದ ನಂತರ ಈ ಘಟನೆ ನಡೆದಿದೆ ಎನ್ನಲಾಗಿದೆ.
Murder of an old woman in Kumsi

