ವಿಜೇಂದ್ರ ಇನ್ನೂ ಬಚ್ಚಾ, ಜಾತಿಗಣತಿಯಲ್ಲಿ ಬಿಜೆಪಿ ಜನ ದಿಕ್ಕಾರಹಾಕಿದ್ದಾರೆ-ಮಧು ಬಂಗಾರಪ್ಪ- Vijendra is still alive, BJP has misled people in caste census - Madhu Bangarappa

SUDDILIVE || SHIVAMOGGA

ವಿಜೇಂದ್ರ ಇನ್ನೂ ಬಚ್ಚಾ, ಜಾತಿಗಣತಿಯಲ್ಲಿ ಬಿಜೆಪಿ ಜನ ದಿಕ್ಕಾರಹಾಕಿದ್ದಾರೆ-ಮಧು ಬಂಗಾರಪ್ಪ-Vijendra is still alive, BJP has misled people in caste census - Madhu Bangarappa

Vijendra, baccha


ನೆಹರೂ ಅವರು 1961 ರಲ್ಲಿಯೇ ತಿದ್ದುಪಡಿ ಮಾಡಿ ರಾಜ್ಯ ಸರ್ಕಾರಕ್ಕೆ ಜಾತಿಗಣತಿಗೆ ಅಧಿಕಾರ ನೀಡಿದ್ದಾರೆ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು. 

ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಪಂ ನತ್ತು ತಾಪಂ ಚುನಾವಣೆಯಲ್ಲಿ ಕೋರ್ಟ್ ಜಾತಿವಾರು ಕೇಳಲಿದೆ. ಇಡಬ್ಲುಎಸ್ ಗೆ ಆಕ್ಷೇಪವಿರಲಿಲ್ಲ ಇದಕ್ಕೆ ಯಾಕೆ ಆಕ್ಷೇಪ ಎಂದ ಅವರು ಸುಪ್ರೀಂಕೋರ್ಟ್ ಜಾತಿ ಗಣತಿಯನ್ನ ವಿರೋಧಿಸುವವರ ವಿರುದ್ಧ ಸುಮೋಟೋ ಪ್ರಕರಣ ಹಾಕಬೇಕು ಎಂದು ಗುಡುಗಿದರು.

ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ವಿಪಕ್ಷ ನಾಯಕ ಆರ್ ಅಶೋಕ್ ವಿಜೇಂದ್ರ ಇದನ್ನ ವಿರೋಧಿಸಿದ್ದಾರೆ. ಅಶೋಕ್ ಸಮೀಕ್ಷೆಯಲ್ಲಿ ಭಾಗಿಯಾದವರ ಡೇಟಾ ಕದಿಯಲಾಗುತ್ತೆ ಎಂದು ಹೇಳುತ್ತಿದ್ದಾರೆ. ಯಾವ ಸಂದೇಶ ಕಳುಹಿಸುತ್ತಿದ್ದೀರಿ. ಅದಾನಿ ಮತ್ತು ಅಂಬಾನಿಗೆ ಇದೇ ಬಿಜೆಪಿ ಸರ್ಕಾರ ಕದ್ದು ನೀಡಿದ್ದಾರೆ ಎಂದು ದೂರಿದರು. 

ವಿಜೇಂದ್ರ ಇನ್ನೂ ಬಚ್ಚಾ. ಯಡಿಯೂರಪ್ಪನವರು, ದೇವೇಗೌಡರು ಎಲ್ಲೂ ಮಾತನಾಡಿಲ್ಲ‌ಕಾರಣ ಅವರಿಗೆ ಅರ್ಥವಾಗಿದೆ. ವಿಜೇಂದ್ರ ಇನ್ಬೂ ಬಚ್ಚಾ. ಅವರಿಗೆ ಸಮೀಕ್ಷೆಯಲ್ಲಿ ಭಾಗಿಯಾಗಬೇಡಿ ಎಂದಿದ್ದಾರೆ. ಸಚಿವ ಪ್ರಹ್ಲಾದ್ ಜೋಷಿ ತಮ್ಮ ಮಾತನ್ನ ವಾಪಾಸ್ ಪಡೆಯಿರಿ. ಮೋದಿ ಸರ್ಕಾರ ನಡೆಸಿದರೆ ಡೇಟಾ ಕದಿಯಲ್ಲವಾ? ಎಂದು ಪ್ರಶ್ನಿಸಿದರು. ಸಂವಿಧಾನದಲ್ಲಿ ಪ್ರತಿ 10 ವರ್ಷಕ್ಕೆ ಒಮ್ಮೆ ಜಾತಿಗಣತಿ ನಡೆಯಬೇಕು. ಇದನ್ನ ಕೇಂದ್ರ ಮಾಡಿಲ್ಲ. ಅದನ್ನ ಪ್ರಶ್ನಿಸೋದೆ ಕಾಂಗ್ರೆಸ್ ಕೆಲಸ ಎಂದರು. 

ಸಮೀಕ್ಷೆ 56.6% ಮುಗಿದಿದೆ. 1.5 ಲಕ್ಷ ಶಿಕ್ಷಕರು ಸರ್ವೆಯಲ್ಲಿ ಭಾಗಿಯಾಗಿದ್ದಾರೆ. ಸನ್ಮಾನ ಮಾಡಿರುವ ಬಗ್ಗೆ ಗೌರವವಿದೆ. ತಾಂತ್ರಿಕ ದೋಷವಿದೆ. ಸಂಸದರು ನೆಟ್ ವರ್ಕ್ ಕೊಡ್ತಿವಿ ಎಂದು ಟವರ್ ಮೇಲೆ ಕುಳಿತಿದ್ದಾರೆ. ಕೂಲಿ ಮಾಡುವ ಜನಕ್ಕೆ ಸಮೀಕ್ಷೆ ಬೇಕು. ಸಮೀಕ್ಷೆಯನ್ನ‌ ವಿರೋಧಿಸುತ್ತಿರುವರೆ ಬಿಜೆಪಿಗರು, ಇವರೆ  ದೇಶದ್ರೋಹಿಗಳು ಎಂದರು. 

ಪ್ರನಾಳಿಕೆ ಉಪಾಧ್ಯಕ್ಷ ನಾನು, ಸಮೀಕ್ಷೆ ನಡೆಸುವುದಾಗಿ ಹೇಳಿದ್ವಿ, ನಡೆಸಿದ್ದೇವೆ.  ನಮ್ಮ ದೇಶದಲ್ಲಿ ಯಾರೂ ಮಾಡಿಲ್ಲದ ಕೆಲಸವನ್ನ ಸಿದ್ದರಾಮಯ್ಯನವರು ಸಿಎಂ ಆಗಿ ಮಾಡಿದ್ದಾರೆ. ಅದನ್ನೇ ಕೇಂದ್ರದವರು ಕಾಪಿ ಮಾಡ್ತಾರೆ ನೋಡ್ತಾಯಿರಿ. ಶಿವಮೊಗ್ಗ ಜಿಲ್ಲೆಯಲ್ಲಿ 63.46% ಶಿಕಾರಿಪುರದಲ್ಲಿ 70% ಸೊರಬ 77% ತೀರ್ಥಹಳ್ಳಿಯಲ್ಲಿ ಕಡಿಮೆಯಿದೆ. ಭದ್ರಾವತಿಯಲ್ಲಿ 64%,  ಸಾಗರದಲ್ಲಿ 62%, ಶಿವಮೊಗ್ಗ ತಾಲೂಕಿನಲ್ಲಿ 56 ನೆಟ್ ವರ್ಕ್ ಸಮಸ್ಯೆಯಿಂದಾಗಿ ಕಡಿನೆಯಾಗಿದೆ. ಇದರಿಂದ ಜನ ಬಿಜೆಪಿಯನ್ನ ಜನ ವಿರೋಧವಿದ್ದಾರೆ. ದಿಕ್ಕರಿಸಿದ್ದಾರೆ ಎಂದರು.

ಡಿಜಿಟಲಿ ರೆಕಾರ್ಡ್ ಆಗಿದೆ. ಗ್ಯಾರೆಂಟಿಯನ್ನ ವಿರೋಧಿಸುವ ಬಿಜೆಪಿ ಈಗ ಅದನ್ನೇ ಫಾಲೋ ಮಾಡಿದ್ದಾರೆ. ಇದೇ ಕಾಂಗ್ರೆಸ್ ನ ಬದ್ಧತೆಯಾಗಿದೆ. ವೋಟ್ ಚೋರಿ ಪ್ರಜಾಪ್ರಭುತ್ವದ ಮರ್ಡರ್ ಆಗಿದೆ. ಇದನ್ನೂ ಕಾಂಗ್ರೆಸ್ ಸವಾಲಾಗಿ ತೆಗೆದುಕೊಂಡಿದೆ  ಎಂದರು. 

ಶಿವಮೊಗ್ಗ ಸೇರಿದಂತೆ ನಾಲ್ಕುಕಡೆ ನಾನು ದಸರಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೆ. ಸೊರಬ, ಸಾಗರ ತೀರ್ಥಹಲ್ಳಿಯಲ್ಲೂ ವಿಜೃಂಭಣೆಯ ದಸರಾ ನಡೆದಿದೆ. ಶಿವಣ್ಣ, ಶರಣ್, ಗಾಯಕ ಹೇಮಂತ್ ಭೇಟಿಯಾಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು ಸಂತೋಷ ತಂದಿದೆ ಎಂದರು. 

ಇಂದು ಶಿಕ್ಷಕರು ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸರ್ವೆಯಲ್ಲಿ ಭಾಗಿಯಾಗಿ ಯಶಸ್ವಿಗೊಳಿಸಿದ್ದು ಅವರನ್ಬ ಸನ್ಮಾನಿಸಲಾಗಿದೆ ಎಂದರು. 

Vijendra is still alive, BJP has misled people in caste census - Madhu Bangarappa

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close