SUDDILIVE || SHIVAMOGGA
ದಾರಿತಪ್ಪಿದ ರಾಜಕಾರಣ-ಡಿ.ಎಸ್ ಅರುಣ್ ಕಳವಳ- Misguided politics - DS Arun's concern
ಸುಸಂಸ್ಕೃತಿಯನ್ನ ಬೆಳೆಸಿಕೊಂಡು ಬರುತ್ತಿರುವ ಶಿವಮೊಗ್ಗ ಜಿಲ್ಲೆಯಲ್ಲಿ ರಾಜಕೀಯ ದೃಷ್ಠಿಯಿಂದ ನೋಡಿದರೆ ದಾರಿತಪ್ಪುವಂತಾಗಿದೆ ಎಂದು ಎಂಎಲ್ ಸಿ ಡಿ.ಎಸ್ ಅರುಣ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಚಿವ ಮಧು ಬಂಗಾರಪ್ಪ, ಸಂತೋಷ ಲಾಡ್ ಮತ್ತಿತರ ಹೇಳಿಕೆ ಬೇಸರ ತರಲಿದೆ. ಚರ್ಚೆಗೆ ಕೂರೋಣ ಬನ್ನಿ ಎಙದರೆ ಬಾರದೆ ಕೇವಲ ಆರೋಗಳನ್ನ ಕೆಳಮಟ್ಟದ ಭಾಷೆ ಬಳಸಿ ಆರೋಪಿಸುತ್ತಿರುವುದು ದುರದೃಷ್ಠಕರವೆಂದರು.
ಶಿವಮೊಗ್ಗ ಅಭಿವೃದ್ಧಿಯ ಬಗ್ಗೆ ಚರ್ಚಿಸೋಣ ಎಂದು ಈ ಹಿಂದೆ ಬಿಜೆಪಿ ಶಿಕ್ಷಣ ಸಚಿವರನ್ನ ಆಹ್ವಾನಿಸಿದ್ದೇವು. ಶಿಕ್ಷಣ ಸಚಿವರು ಅಂದರೆ ಏನು ಎಂಬುದನ್ನ ಕೇಳಿದ್ದೆ. ಗೋವಿಂದೇಗೌಡ, ಸುರೇಶ್ ಕುಮಾರ್, ಬಿಸಿ ನಾಗೇಶ್ ಕಾಗೇರಿ, ವಿಶ್ವನಾಥ ಅವರು ಶಿಕ್ಷಣ ಸಚಿವರಾಗಿದ್ದಾರೆ. ಇವರೆಲ್ಲ ಪ್ರೇರಣೆ ಆದವರು. ಆದರೆ ನಮ್ಮ ಉಸ್ತುವಾರಿ ಸಚಿವರ ಭಾಷೆಯೇ ಬೇರೆಯಿದೆ.
ಶಿಕ್ಷಣ ಸಚಿವರ ಪದಗಳು ಇತರರಿಗೆ ಸ್ಪೂರ್ತಿಯಾಗದಿರಲಿ ಎಂದ ಎಂಎಲ್ ಸಿ ಲೂಸ್ ಎಂಬುದು ಅವರಿಗೆ ಶೋಭತರಲ್ಲ. ಬಿಎಸ್ ವೈ ವಿರುದ್ಧ ಹಗೂರವಾದ ಮಾತನಾಡುತ್ತಾರೆ. ಎಂಪಿ ಆರೋಪಗಳನ್ನ ವೈಯುಕ್ತಿಕವಾಗಿ ನೋಡುವ ಸ್ಥಿತಿಗೆ ಶಿಕ್ಷಣ ಸಚಿವರು ಬಂದಿದ್ದಾರೆ. ಡೈರಕ್ಟಾಗಿ ಎಂಪಿ ಆಗಿದ್ದಾರೆ ಎಂದು ನೇರವಾಗಿ ವಾಗ್ದಾಳಿ ನಡೆಸುತ್ತಾರೆ. ಹಾಗಾದರೆ ನೇರವಾಗಿ ಜನಪ್ರತಿ ಆಗುವುದು ತಪ್ಪಾ ಎಂದು ಪ್ರಶ್ನಿಸಿದರು.
ಪ್ರಧಾನಿ ಮೋದಿ ನೇರವಾಗಿ ಸಿಎಂ ಆಗಿ ಪ್ರಧಾನಿ ಆದವರು. ಸಂಸದ ರಾಘವೇಂದ್ರ ಪುರಸಭೆ ಸದಸ್ಯರಾಗಿ ನಂತರ ಎಂಪಿ ಆದರು. ತಾಪಂ ಜಿಪಂ ಚುನಾವಣೆ ನಡೆಸಲು, ಪಾಲಿಕೆ ಚುನಾವಣೆ ನಡೆಸದ ಸರ್ಕಾರದ ಬಗ್ಗೆ ಮಾತನಾಡದ ಸಚಿವರು ಪ್ರಪ್ರಥಮ ಬಾರಿಗೆ ಚುನಾವಣೆ ರಾಜಕೀಯಕ್ಕೆ ಪ್ರವೇಶಿಸಿದ್ದೆ ಬಿಜೆಪಿ ಗುರುತಿನಲ್ಲಿ ಎಂಬುದನ್ನ ಮರೆಯ ಬಾರದು ಎಂದರು.
ಅಂಬ್ಯುಲೆನ್ಸ್ ನಲ್ಲಿ, ಪೊಲೀಸ್ ಜೀಪ್ ನಲ್ಲಿ ಹಣ ಕಳುಹಿಸಿದ್ದಾರೆವೆನ್ನುವ ಸಚಿವರು ನಿಮ್ಮದೆ ಸರ್ಕಾರವಿದೆ. ನೀವೆ ತನಿಖೆ ಮಾಡಿ ಕ್ರಮ ಜರುಗಿಸಿ. ಇದನ್ನಬಿಟ್ಟು ಅವರ ಇಂತಹ ಹೇಳಿಕೆ ಇಲ್ಲಿಗೆ ನಿಲ್ಲಬೇಕು. ಇಂತಿಂಥಹ ಕೆಲಸ ಮಾಡಿ ನಾವು ಬಿಜೆಪಿ ಗಿಂತ ಬೆಟರ್ ಎಂಬುದನ್ನ ತೋರಿಸಲಿ ಎಂದು ಸವಾಲು ಹಾಕಿದರು.
ಬಸ್, ಶೆಲ್ಟರ್, ಹಕ್ಕುಪತ್ರ ನೀಡಿರುವ ಬಗ್ಗೆ ಚರ್ಚಿಸಲಿ. ಈಗ ಜಿಎಸ್ ಟಿ ವಿರುದ್ಧ ಸಚಿವರು ಮಾತನಾಡಿದ್ದಾರೆ. ಜಿಎಸ್ ಟಿ ಪ್ರಪೋಸಲ್ ಮಾಡಿದ್ದು, ಆಧಾರ್ , ಒಂದು ನೇಷನ್ ಒನ್ ಎಲೆಕ್ಷನ್, ಫುಡ್ ಸೆಕ್ಯೂರಿಟಿ ಆಕ್ಟ್, ಜಿಎಸ್ ಟಿಗಳೆಲ್ಲಾ ಕಾಂಗ್ರೆಸ್ ನವರ ಯೋಜನೆಯಾಗಿದೆ. ಆದರೆ ಜಾರಿಗೆ ತಾರದೆ ಕೇವಲಪೇಪರ್ ನಲ್ಲಿ ಉಳಿಸಿದ್ದ ಕಾಂಗ್ರೆಸ್ ಯೋಜನೆಯನ್ನ ಜಾರಿಗೊಳಿಸಿದ್ದು ಬಿಜೆಪಿ ಸರ್ಕಾರವಾಗಿದೆ. ಯಾವ ಜಿಎಸ್ ಟಿ ಸಭೆಗೆ ಹೋಗದ ಸಿಎಂ ರಾಜ್ಯಕ್ಕೆ ಅನ್ಯಾಯಾವಾಗಿದೆ ಎನ್ನುತ್ತಾರೆ. ಅದರೆದೇ ಆದ ಕೋರ್ಟ್ ಇದೆ ಅಲ್ಲಿ ಹೋಗಿ ಅನುದಾನ ಕೇಳಲಿ. ಅದನ್ನಬಿಟ್ಟು ಕೇವಲ ಸ್ಟೇಟ್ ಮೆಂಟ್ ಮಾಡಬೇಡಿ ಎಂದು ತಿಳಿಹೇಳಿದರು.
ಸಂಸದರು ಬ್ರಿಡ್ಜ್, ರೈಲ್ವೆ, ವಿಮಾನ ನಿಲ್ದಾಣ ಮಾಡಿದ್ದಾರೆ. ಕೇಂದ್ರ ಸರ್ಕಾರ ಏಷ್ಟು ಬರಬೇಕೋ ಅಷ್ಟು ರಾಜ್ಯ ಸರ್ಕಾರಕ್ಕೆ ಅನುದಾನ ಸಿಗಲಿದೆ. ಜಿಎಸ್ ಟಿ ಅಲ್ಲಿ ಕಡಿಮೆಯಾಗಿರುವುದಕ್ಕೆ ಜನಕ್ಕೆ ಅನುಕೂಲವಾಗಲಿದೆ. ಸಚಿವರು ಒಮ್ಮೆಯಾದರೂ ಮಾರುಕಟ್ಟೆಗೆ ಹೋಗಿ ಖರೀದಿ ಮಾಡಿದ್ದರೆ ತಿಳಿಯುತ್ತಿತ್ತು ಎಂದ ಅವರು ಬಿಸಿ ನಾಗೇಶ್ ಅವರು ಶಿಕ್ಷಣ ಸಚಿವರಾಗಿದ್ದಾಗ 26 ಸಾವಿರ ಶಿಕ್ಷಕರ ನೇಮಕಾತಿಗೆ ಚಾಲನೆ ದೊರೆಯಿತು. ಇನ್ನೂ ಎರಡುವರೆ ವರ್ಷ ಕಳೆದರೂ ಆ ನೇಮಕಾತಿಯನ್ನ ಪೂರ್ಣಗೊಳಿಸದೆ ಪಂಚವಾರ್ಷಿಕ ಯೋಜನೆ ಮಾಡಿಕೊಂಡಿದ್ದೀರಿ ಎಂದು ತಿರುಗೇಟು ನೀಡಿದರು.
ವಿಮಾನ ನಿಲ್ದಾಣ್ಬನೈಟ್ ಲ್ಯಾಂಡ್ ಆರಂಭಕ್ಕೆ ಬೇಕಾದ ಮೂರು ಕೋಟಿ ವೆಚ್ಚ ಮಾಡಿ ಆರಂಭಿಸಲು ಎರಡು ವರೆ ವರ್ಷ ಬೇಕಾಯಿತು. ನಿಮ್ಮ ಗ್ಯಾರೆಂಟಿಯನ್ನ ಸಂಸದರು ಮತ್ತು ಬಿಜೆಪಿ ರಾಜ್ಯಾಧ್ಯಕ್ಷರ ಕಾರು ಚಾಲಕರು ಪಡೆದುಕೊಂಡಿದ್ದಾರೆ ಎನ್ನುವ ನೀವು ನಮ್ಮ ಸರ್ಕಾರ ನೀಡಿದ ಲಸಿಕೆ ಪಡೆದುಕೊಳ್ಳಲಿಲ್ಲವಾ? ಸರ್ಕಾರದ ಯೋಜನೆ ಎಲ್ಲರಿಗೂ ಸಿಗಬೇಕು. ಹಾಗೆ ಆಡಳಿತ ನಡೆಸಬೇಕು ಎಂದು ಬುದ್ದಿವಾದ ಹೇಳಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರದ ನಡುವಿನ ಸಂಬಂಧದಮೇಲೆ ಅನುದಾನ ತರಲಾಗುತ್ತದೆ.ತುಮಕೂರು ಮತ್ತು ಶಿವಮೊಗ್ಗದ ನಡುವಿನ ರಸ್ತೆ ಭೂಸ್ವಾಧೀನ 18 ಕಡೆ ಆಗಿಲ್ಲ. ರಾಜ್ಯ ಸರ್ಕಾರ ಬಿಟ್ಟುಕೊಡಲು ಸಿದ್ದವಿರದ ಕಾರಣ ಆ ಯೋಜನೆ ಪೂರ್ಣಗೊಳ್ಳುತ್ತಿಲ್ಲ ಎಂದು ದೂರಿದರು.
Misguided politics - DS Arun's concern