ಜಮೀನಿನಲ್ಲಿ ಗಾಂಜಾ ಬೆಳೆ, ಪೊಲೀಸ್ ದಾಳಿ-Police raid marijuana crop on farm

SUDDILIVE || SHIVAMOGGA

ಜಮೀನಿನಲ್ಲಿ ಗಾಂಜಾ ಬೆಳೆ, ಪೊಲೀಸ್ ದಾಳಿ-Police raid marijuana crop on farm

Marijuana, police

ಜಮೀನಿನಲ್ಲಿ ಗಾಂಜಾ ಬೆಳೆದ ಆರೋಪದ ಮೇಲೆ ವ್ಯಕ್ತಿಯೋರ್ವನನ್ನ‌ ಶಿಕಾರಿಪುರ ಗ್ರಾಮಾಂತರ ಪೊಲೀಸರು ವಶಕ್ಕೆ ಪಡೆದಿದ್ದಾರೆ. 

ದಿನಾಂಕ: 17-10-2025 ರಂದು ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ದಿಂಡದಹಳ್ಳಿ ಗ್ರಾಮದಲ್ಲಿನ ಜಮೀನಿನಲ್ಲಿ ಅಕ್ರಮವಾಗಿ ಗಾಂಜಾ ಗಿಡಗಳನ್ನ ಬೆಳೆದಿರುವ ಬಗ್ಗೆ  ಖಚಿತ ಮಾಹಿತಿಯ ಬಂದ ಮೇರೆಗೆ, ಎಸ್ಪಿ  ಮಿಥುನ್ ಕುಮಾರ್ ಜಿ.ಕೆ, ಅಡಿಷನಲ್ ಎಸ್ಪಿ ಕಾರಿಯಪ್ಪ ಎ.ಜಿ ಮತ್ತು ರಮೇಶ್ ಕುಮಾರ್  ಮಾರ್ಗದರ್ಶನದಲ್ಲಿ  ಶಿಕಾರಿಪುರ ಡಿವೈಎಸ್ಪಿ ಕೇಶವ್, ಮೇಲ್ವಿಚಾರಣೆಯಲ್ಲಿ,    ಪಿಐ ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಯ ಪಿಐ ಆರ್ ಆರ್ ಪಾಟೀಲರ ನೇತೃತ್ವದಲ್ಲಿ, ಸಿಬ್ಬಂಧಿಗಳನ್ನೊಳಗೊಂಡ ತಂಡವು ಸ್ಥಳಕ್ಕೆ ಹೋಗಿ ದಾಳಿ ನಡೆಸಿದೆ. 

ಅಂದಾಜು ಮೌಲ್ಯ 35,000/-  ರೂಗಳ 13 ಕೆಜಿ ತೂಕದ  ಒಟ್ಟು 28 ಹಸಿ ಗಾಂಜಾ ಗಿಡಗಳನ್ನು ಅಮಾನತ್ತು ಪಡಿಸಿಕೊಂಡು,  ಆರೋಪಿ ಬಸವರಾಜ್, 34 ವರ್ಷ ದಿಂಡದ ಹಳ್ಳಿ, ಈತನನ್ನು ದಸ್ತಗಿರಿ ಮಾಡಿ, ಆರೋಪಿಯ ವಿರುದ್ಧ ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆ ಗುನ್ನೆ ಸಂಖ್ಯೆಃ 301/2025  ಕಲಂ 8C, 20 (a) (i) NDPS ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 

Police raid marijuana crop on farm

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close