ಆರ್ ಟಿ ಒ ಅಧಿಕಾರಿಗಳಿಗೆ ನಿಂದನೆ-ಕ್ರಮ ಜರುಗಿಸಿದ ಪೊಲೀಸರು-Police take action against RTO officials for abusing them

SUDDILIVE || SHIVAMOGGA

ಆರ್ ಟಿ ಒ ಅಧಿಕಾರಿಗಳಿಗೆ ನಿಂದನೆ-ಕ್ರಮ ಜರುಗಿಸಿದ ಪೊಲೀಸರು-Police take action against RTO officials for abusing them

Rto, police

ಆರ್ ಟಿಒ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವ್ಯಚ್ಯಶಬ್ದಗಳಿಂದ ನಿಂದಿಸಿದ ವಿಡಿಯೋ ಹರಿಬಿಟ್ಟಿದ ವ್ಯಕ್ತಿ ವಿರುದ್ಧ ದೊಡ್ಡಪೇಟೆ ಪೊಲೀಸರು ಕ್ರಮ ಜರುಗಿಸಿದ್ದಾರೆ. 

ಆರ್ ಟಿ ಒ ಇನ್ ಸ್ಪೆಕ್ಟರ್ ಪುರಂದರ ಎಂಬುವರು ಅ.11 ತಾರೀಕು ತೀರ್ಥಹಳ್ಳಿ ರಸ್ತೆಯಲ್ಪಿ ವಾಹನ ತಪಾಸಣೆ ಮಾಡುವ ಸಲುವಾಗಿ ಹೋಗುವಾಗ ಬೈಪಾಸ್ ನ ಹೋಟೆಲ್ ಮುಂಭಾಗ ಬಂದಿದ್ದಾರೆ. 

ಆ ವೇಳೆ ಕಾರೊಂದರಲ್ಲಿ ಫಾಲೋ ಮಾಡಿದ ನೂತನ ಎಂಬ ಯುವಕ ಬೈಪಾಸ್ ರಸ್ತೆಯಲ್ಲಿ ಆರ್ ಟಿ ಒ ಅಧಿಕಾರಿಗಳು ಬಂದಿದ್ದಾರೆ ಎಂದು ನಿಂದಿಸಿ ವಿಡಿಯೋವೊಂದನ್ನ ಹರಿಬಿಡಲಾಗಿತ್ತು. ಈ ಬಗ್ಗೆ ದೊಡ್ಡಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. 

ಈ ಬಗ್ಗೆ ಕ್ರಮ ಜರುಗಿಸಿದ ದೊಡ್ಡಪೇಟೆ ಪೊಲೀಸರು ಇನ್ ಸ್ಟಾಗ್ರಾಮ್ ನಲ್ಲಿ  ವಿಡಿಯೋವನ್ನ ಹರಿಬಿಟ್ಟ ವ್ಯಕ್ತಿಯನ್ನ ಪತ್ತೆಹಚ್ಚಿದ್ದಾರೆ. ನೂತನ ಎಂಬ ವ್ಯಕ್ತಿ ಈ ವಿಡಿಯೋ ಮಾಡಿ ಇನ್ ಸ್ಟಾದಲ್ಲಿ ಹರಿಬಿಟ್ಟಿದ್ದ ಆತನನ್ನ ಠಾಣೆಗೆ ಕರೆತಂದು ಮುಂದಿನ ಕ್ರಮ ಜರುಗಿಸಿದ್ದಾರೆ. ಆತನಿಂದಲೆ ಕ್ಷಮೆಯಾಚನೆಯ ವಿಡಿಯೋ ಮಾಡಿಸಿದ್ದಾರೆ. 

Police take action against RTO officials for abusing them

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close