ಅನಧಿಕೃತ ಪಟಾಕಿ ಮಾರಾಟ ಮಳಿಗೆಯ ಮೇಲೆ ತಹಶೀಲ್ದಾರ್ ನೇತೃತ್ವದಲ್ಲಿ ದಾಳಿ-Tahsildar leads raid on unauthorized firecracker shop

 SUDDILIVE || SHIVAMOGGA

ಅನಧಿಕೃತ ಪಟಾಕಿ ಮಾರಾಟ ಮಳಿಗೆಯ ಮೇಲೆ ತಹಶೀಲ್ದಾರ್ ನೇತೃತ್ವದಲ್ಲಿ ದಾಳಿ-Tahsildar leads raid on unauthorized firecracker shop

Raid, tahasildar
ಸಾಂಧರ್ಭಿಕ ಚಿತ್ರ


ಪರವಾನಗಿಯಿಲ್ಲದೆ ಪಟಾಕಿ ಮಾರಾಟ ಮಾಡುತ್ತಿದ್ದ ಅಂಗಡಿಯ ಮೇಲೆ ತಹಶೀಲ್ದಾರ್ ನೇತೃತ್ವದಲ್ಲಿ ಕಂದಾಯ, ಮತ್ತು ಮಾಲಿನ್ಯ ಮಂಡಳಿ ಅಧಿಕಾರಿಗಳು ದಾಳಿ ನಡೆಸಿ ಲಕ್ಷಾಂತರ ರೂ ಮೌಲ್ಯದ ಪಟಾಕಿಯನ್ನ ಮಲ್ಲಿಗೇನ ಹಳ್ಳಿತ ಜ್ಞಾನೇಶ್ವರ ಎಂಬುವರಿಗೆ ಸೇರಿದ ಗೋದಾಮಿನಲ್ಲಿರಿಸಲಾಗಿದೆ. 

ಗಾಂಧಿ ಬಜಾರ್ ನ ಬಸವೇಶ್ವರ ದೇವಸ್ಥಾನದ ಬಳಿಯಿರುವ ರಮೇಶ್ ಎಂಟರ್ಪ್ರೈಸಸ್ ನಲ್ಲಿ ಅನಧಿಕೃತ ಪಟಾಕಿ ಮಾರಾಟ ಮಾಡುತ್ತಿರುವ ಬಗ್ಗೆ ತಹಶೀಲ್ದಾರ್ ಕಚೇರಿಗೆ ದೂರು ಬಂದಿದೆ. ದೂರು ಆಧಾರದ ಮೇರೆಗೆ ತಹಶೀಲ್ದಾರ್ ರಾಜೀವ್ ನೇತೃತ್ವದಲ್ಲಿ ದಾಳಿ ನಡೆದಿದೆ. 

ಪಟಾಕಿ ಸಂಗ್ರಹಿಸಿ ಮಾರಾಟ ಮಾಡಲು ಪರವಾನಗಿ ಇದೆಯೇ ಎಂಬ ಪ್ರಶ್ನೆಗೆ ಮಾಲೀಕರ ಬಳಿ ದಾಖಲಾತಿ ಇಲ್ಲದ ಕಾರಣ ಅಂಗಡಿಯನ್ನ ತಹಶೀಲ್ದಾರ್ ಸೀಜ್ ಮಾಡಿ ಪಟಾಕಿಯನ್ನ ಮಲ್ಲಿಗೇನ ಹಳ್ಳಿಯಲ್ಲಿರುವ ಗೋದಾಮಿಗೆ ರವಾನಿಸಿದ್ದಾರೆ. ಮಾಲೀಕ ರಮೇಶ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 

Tahsildar leads raid on unauthorized firecracker shop

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close