SUDDILIVE || SHIVAMOGGA
ಅವರು ಕೇವಲ ನಾಯಿಪ್ರಿಯರು, ಪ್ರಾಣಿಪ್ರಿಯರಲ್ಲ ಶೃಂಗೇರಿ ಶ್ರೀಗಳು ಹೀಗೆ ಹೇಳಲು ಕಾರಣವೇನು?-They are not animal lovers, just dog lovers- Sringeri Sri
ದೇಶದಲ್ಲಿ ಗೋಹತ್ಯೆ ನಡೆಯುತ್ತಿದ್ದರೂ ಪ್ರಾಣಿಪ್ರಿಯರು ತುಟಿಬಿಚ್ಚದೆ ಇರುವುದು ಕಳವಳ ಮೂಡಿಸುತ್ತದೆ. ಇವರು ಪ್ರಾಣಿ ಪ್ರಿಯರು ಎನ್ನುವುದಕ್ಕಿಂತ ಕೇವಲನಿರ್ದಿಷ್ಟ ಪ್ರಾಣಿಯ ಪ್ರಿಯರು ಎಂದು ಕರೆಯಬಹುದು ಎಂದು ಶೃಂಗೇರಿಯ ಜಗದ್ಗುರು ಶ್ರೀ ವಿಧುಶೇಖರಭಾರತೀ ಸ್ವಾಮೀಜಿ ಅಭಿಪ್ರಾಯಪಟ್ಟರು
ಅವರು ಅಲ್ಲಮ ಪ್ರಭು ಫ್ರೀಡಂ ಪಾರ್ಕ್ ನಲ್ಲಿ ಗೋವರ್ಧನ ಟ್ರಸ್ಟ್ ಉದ್ಘಾಟನೆ ಮತ್ತು ಶೋಭಾಯಾತ್ರೆಯ ದಿವ್ಯ ಸಾನಿಧ್ಯವಹಿಸಿ ಮಾತನಾಡಿದರು. ಇವರು ನಾಯಿಗಳಿಗೆ ತೊಂದರೆ ಆಗುತ್ತಿದೆ ಎಂದಾಗ ಬೀದಿಗೆ ಇಳಿಯುತ್ತಾರೆ. ಆದರೆ ಗೋಹತ್ಯೆ ನಡೆಯುತ್ತಿದ್ದರೂ ಇವರಿಗೆ ಏನೂ ಅನಿಸದೆ ಇರುವುದು ಅಚ್ಚರಿಮೂಡಿಸುತ್ತದೆ. ಇವರು ಕೇವಲ ಶ್ವಾನಪ್ರಿಯರೆ ವಿನಃ ಪ್ರಾಣಿಪ್ರಿಯರಾಗಲು ಸಾಧ್ಯವಿಲ್ಲ ಎಂದರು.
ಗೋವಿನ ಹತ್ಯೆ ನಡೆಯುತ್ತಿದ್ದರೆ ಜನ ಸುಖವಾಗಿರಲು ಸಾಧ್ಯವಿಲ್ಲ. ಗೋವಿಗೆ ರಾಷ್ಟ್ರೀಯ ಪ್ರಾಣಿಯ ಸ್ಥಾನ ಸಿಗಬೇಕು. ಆಗ ಮಾತ್ರ ಗೋವಿನ ರಕ್ಷಣೆಯಾಗಬಹುದು ಎನಿಸುತ್ತದೆ. ಈ ನಿಟ್ಟಿನಲ್ಲಿ ಚಿಂತನೆಗಳು ನಡೆಯಲಿ ಎಂದ ಅವರು ತಾಯಿ ನಂತರ ಯಾರನ್ನ ಮಾತೆ ಎಂದು ಕರೆಯುತ್ತೀರಿ ಎಂದರೆ ಗೋವಿಗೆ ಎಂದು ಶಂಕರಾಚಾರ್ಯರು ಪ್ರಶ್ನೋಥಕ ಪುಸ್ತಕದಲ್ಲಿ ಬರೆದಿದ್ದಾರೆ. ಉಪನಿಷತ್ ನಲ್ಲೂ ತಾಯಿಯನ್ನ ದೇವರಂತೆ ನೋಡಬೇಕೆಂದು ಎಂದಿದೆ ಎಂದರು.
ಧಾರ್ಮಿಕವಾಗಿ ಮತ್ತು ಲೌಕಿಕವಾಗಿ ಕಂಡರೂ ಗೋವನ್ನ ಗೌರವಿಸಬೇಕಿದೆ. ಗೋವಿದ್ದರೆನೇ ವ್ಯವಸಾಯ, ವ್ಯವಸಾಯವಿದ್ದರೇನೆ ಮನುಷ್ಯರಿಗೆ ಆಹಾರ ಸಿಗಲಿದೆ. ಮನೆಯಲ್ಲಿ ಗೋವುಗಳನ್ನ ಪ್ರಾಣಿಯಂತೆ ಹಿಂದಿನಿಂದ ನೋಡಿಕೊಂಡು ಬಂದಿಲ್ಲ. ಅದನ್ನ ದೇವರಂತೆ ಕಾಣಲಾಗುತ್ತಿತ್ತು. ಇತ್ತೀಚಿನ ದಿನಗಳಲ್ಲಿ ಆಧುನಿಕತೆಯಿಂತ ಕೃಷಿಯಿಂದಾಗಿ ಗೋವಿನ ಪರಂಪರೆಯನ್ನ ಬಿಡಲಾಗುತ್ತಿದೆ. ಅದನ್ನ ಬಿಡಬಾರದು ಎಂದು ಕರೆ ನೀಡಿದರು.
ಮಹಾಪುರುಷರೆಲ್ಲ ತಾಯಿಯನ್ನ ಅತ್ಯಂತ ಗೌರವದಿಂದ ಕಂಡಿದ್ದಾರೆ. ಅದರಂತೆ ಗೋವನ್ನ ತಾಯಿಯಂತೆ ಕಾಣ್ತೀವಿ. ಗೋವಿಗೆ ಬಿಟ್ಟರೆ ಬೇರೆಯಾರಿಗೂ ಮಾತೇ ಎನ್ನುವುದಿಲ್ಲ.
ಉಪಕಾರವನ್ನ ನೆನಪಿಸಿಕೊಳ್ಳುವುದು ಸುಸಂಸ್ಕೃತಿ ಎನಿಸಿಕೊಳ್ಳುತ್ತದೆ. ಮನುಷ್ಯನ ಬಳಿ ಶಕ್ತಿಯಿಲ್ಲದೆ ಇರಬಹುದು ಆದರೆ ಹಿಂದೂ ಸಮಾಜಕ್ಕೆ ಕಾಪಾಡಿಕೊಳ್ಳುವ ಶಕ್ತಿಯಿಲ್ಲವೇ ಎಂದು ಪ್ರಶ್ನಿಸಿದ ಅವರು, ಗೋಹತ್ಯೆ ನಿಲ್ಲಬೇಕು. ಅದಕ್ಕೆ ಕಾನೂನು ಅವಶ್ಯಕವಾಗಿದೆ ಎಂದರು.
ಗೋಹತ್ಯೆ ಎಷ್ಟು ಪಾಪ ಎಂದರೆ ಗೋದವರಿ ನದಿಯ ಉದಹರಣೆ ನೀಡಿದ ಶ್ರೀಗಳು ಷಡ್ಯಂತರ ರೀತಿಯಲ್ಲಿ ಗೋವಿನಹತ್ಯೆಯನ್ನ ಗೌತಮ ಮಹರ್ಷಿಗಳು ನಡೆಸಿದಾಗ ಪಾಪವನ್ನ ತೊಳೆದುಕೊಳ್ಳುತ್ತಾರೆ. ಸುಳ್ಳಿನ ಷಡ್ಯಂತರ ನಡೆದರೂ ಸಹ ಗೌತಮ ಮಹರ್ಷಿಗಳು ಗಂಗೆಯನ್ನ ಮಹಾರಾಷ್ಟ್ರದಲ್ಲಿ ಗೋದಾವರಿಯಲ್ಲಿ ಹರಿಸಿದ್ದಾರೆ ಎಂದರು.
ಗೋಶಾಲೆಗಳನ್ನ ನಡೆಸುತ್ತಿರುವವರ ಪರಿಶ್ರಮ ಸುಲಭವಾಗಿಲ್ಲ. ಲಾಭದಿಂದ ನಡೆಸುವ ಗೋಶಾಲೆಗಳಿವೆ. ಲಾಭವಿಲ್ಲದೆ ನಡೆಸುವವರಿದ್ದಾರೆ. ಆ ಕಾಯಕದಲ್ಲಿ ಪಾಲ್ಗೊಂಡರೆ ಅದರ ಕಷ್ಟಗೊತ್ತಾಗುತ್ತದೆ. ಗೋವಿನ ಸೇವಕರು ಸಹ ಸಂರಕ್ಷಣ ವೇಳೆ ಪ್ರಾಣವನ್ನ ಪಣಕ್ಕಿಟ್ಟು ರಕ್ಷಿಸುತ್ತಿದ್ದಾರೆ ಎಂದರು.
They are not animal lovers, just dog lovers- Sringeri Sri