ರೈಲುಗೇಟಿನ ತಪಾಸಣೆ-ಪರ್ಯಾಯಮಾರ್ಗ ಸೂಚನೆ- Railway gate inspection-alternative route notice

 SUDDILIVE || SAGARA

ರೈಲುಗೇಟಿನ ತಪಾಸಣೆ-ಪರ್ಯಾಯಮಾರ್ಗ ಸೂಚನೆ-Railway gate inspection-alternative route notice

Railway, gate


ರೈಲ್ವೆ ಗೇಟಿನ ಪರಿಶೀಲನೆ ಮತ್ತು ತಪಾಸಣೆ ಹಿನ್ನಲೆಯಲ್ಲಿ ಐದು ಗೇಟುಗಳನ್ನ ಮುಚ್ಚಿ ತಪಾಸಣೆ ನಡೆಸಲು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಸೂಚಿಸಿದ್ದಾರೆ. 

ಅ.13 ರ ಬೆಳಗ್ಗೆ 7 ಗಂಟೆಯಿಂದ ಅ.14 ರ ಸಂಜೆ 6 ರವರೆಗೆ ತರೀಕೆರೆ ರಸ್ತೆ ಮುಖಾಂತರ ಶಿವಾನಿ ಕ್ರಾಸ್ ರೈಲ್ವೆ ಗೇಟ್ ನಂಬರ್ 30ರಲ್ಲಿ ಪರಿಶೀಲಿನೆ ಇರುವುದರಿಂದ ಈ ಮಾರಕ್ಕೆ  ಮಾರ್ಗ ಗೌರಪುರ ಹಳ್ಳಿ, ಅಂತರಗಂಗೆ ಕುಣಿ ನರಸೀಪುರ ಮಾರ್ಗ ದಿಂದ ಭದ್ರಾವತಿ ಮತ್ತು ಮಾರುತಿ ನಗರ ಹಾಗೂ ಶಿವಾನಿ ಕ್ರಾಸ್ ನಡುವೆ ಪ್ರಮುಖ ಮಾರ್ಗಗಳಲ್ಲಿ ಲಘು ವಾಹನಗಳ ಸಂಚಾರಕ್ಕೆ ಪರ್ಯಾಯಮಾರ್ಗ ರೂಪಿಸಲಾಗಿದೆ.

ಅದೇ ದಿನ ಕಾಗೋಡು ಮಂಡಗಳಲ್ಲಿ ರಸ್ತೆಯಲ್ಲಿರುವ ರೈಲ್ವೆ ಗೇಟಿನ ಪರಿಶೀಲನೆ ಇದ್ದು ಈ ಮಾರ್ಗದಲ್ಲಿ ಸಾಗುವ ವಾಹನಗಳು ಗುಡ್ಡೆ ಮನೆಯಿಂದ ಮಂಡಗಳ್ಳಲೇ ಕಾಗೋಡು ಮಾರ್ಗವಾಗಿ ಪರ್ಯಾಯ ಮಾರ್ಗ ಸೂಚಿಸಲಾಗಿದೆ. ಅ.15 ರಂದು ಬೆಳಿಗ್ಗೆ 7 ರಿಂದ ಅ.16 ರ ಸಂಜೆ 6 ರವರೆಗೆ  ಕೊನಗವಳ್ಳಿ ರಸ್ತೆಯಲ್ಲಿರುವ ರೈಲ್ವೆ ಗೇಟು 67 ಪರಿಶೀಲನೆ ಇರುವುದರಿಂದ ತ್ಯಾಜುವಳ್ಳಿ, ಮುದುವಾಲದಿಂದ ಹಾರನಹಳ್ಳಿ ರಸ್ತೆಗೆ ಸಂಚರಿಸಬಹುದಾಗಿದೆ. 

ಅ.18 ರಂದು ಬೆಳಿಗ್ಗೆ 7 ರಿಂದ ಅ.19 ರಂದು ಸಂಜೆ 6 ಗಂಟೆಯವರೆಗೆ ಶಿವಮೊಗ್ಗದಿಂದ ಸಾಗರಕ್ಕೆ ಚಲಿಸುವ ವಾಹನಗಳು ಚೋರಡಿ, ಶೆಟ್ಟಿಕೊಪ್ಪ, ಸೂಡೂರು, ಆಯನೂರು ಮಾರ್ಗವಾಗಿ, ಎಲ್ ಸಿ 73 ರ ಚಲಿಸುವ ರೈಲ್ವೆ ಮಾರ್ಗದ ಮೂಲಕ ಬಾಳೆಕೊಪ್ಪ, ಚಿಕ್ಕಮರಸ, ಕುಂಸಿಗೆ ಪರ್ಯಾಯ ಮಾರ್ಗದಲ್ಲಿ ಸಂಚರಿಸಬಹುದಾಗಿತ್ತು. ಈ ರಸ್ತೆಯಲ್ಲಿ ಭಾರಿವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ.

ಅ.23 ರಂದು ಬೆಳಿಗ್ಗೆ 7 ಗಂಟೆಯಿಂದ ಅ.24 ರ ಸಂಜೆ 6 ಗಂಟೆಯ ವರೆಗೆ ರಿಪ್ಪನ್ ಪೇಟೆಯಿಂದ ಗರ್ತಿಕೆರೆ ಮೂಲಕ ಮೂಗುಡ್ತಿಗೆ ಹೋಗುವರು ಆಯನೂರು, ಹಾರೇಹಳ್ಳಿ, ಗುಳಿಗುಳಿಶಂಕರ, ಬೆಳೂರು, ಮೂಗುಡ್ತಿ ಮೂಲಕ ರಿಪ್ಪನ್ ಪೇಟೆ ಗೆ ಸಂಚರಿಸಬಹುದಾಗಿದೆ. 

ಅ.25 ರಂದು ಬೆಳಿಗ್ಗೆ 7 ಗಂಟೆಯಿಂದ ಅ.26 ರಂದು ಸಂಜೆ 6 ಗಂಟೆಯ ವರೆಗೆ ಎಲ್ ಸಿ 88 ರಲ್ಲಿ ರಿಪ್ಪನ್ ಪೇಟೆಯಿಂದ ರಾಜ್ಯಹೆದ್ದಾರಿಯಲ್ಲಿ ಆಯನೂರಿಗೆ ಹೋಗುವವರು ಆಯನೂರಿನಿಂದ ಯಡೆಹಳ್ಳಿ ಸರ್ಕಲ್ ಮೂಲಕ ರಿಪ್ಪನ ಪೇಟೆಗೆ ಸಂಚರಿಸಬಹುದಾಗಿದೆ. ಇನ್ನೊಂದು ಆಯನೂರಿನಿಂದ ಚೋರಡಿ ಅರಸಾಳು ಮೂಲಕ ಸಂಚರಿಸಬಹುದಾಗಿದೆ. 

Railway gate inspection-alternative route notice

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close