SUDDILIVE || SHIVAMOGGA
ಎಸ್ಪಿ ಮತ್ತಿತರೆ ಅಧಿಕಾರಿಗಳಿಂದ ರನ್ ಫಾರ್ ಯೂನಿಟಿ-Run for Unity by SP and other officers
ಸರ್ದಾರ್ ವಲ್ಲಭಬಾಯ್ ಪಟೇಲ್ ರವರ 150ನೇ ಜನ್ಮದಿನೋತ್ಸವದ ಅಂಗವಾಗಿ, ರಾಷ್ಟ್ರೀಯ ಏಕತಾ ದಿನವನ್ನು ಆಚರಿಸಲಾಗುತ್ತಿದ್ದು, ಈ ಹಿನ್ನೆಲೆ ಯಲ್ಲಿ ಶಿವಮೊಗ್ಗ ಪೊಲೀಸ್ ವತಿಯಿಂದ ಡಿ.ಎ.ಆರ್ ಪೊಲೀಸ್ ಕವಾಯತು ಮೈದಾನದಿಂದ Run For Unity ಮ್ಯಾರಥಾನ್ ಅನ್ನು ಹಮ್ಮಿಕೊಳ್ಳಲಾಗಿತ್ತು.
ಮ್ಯಾರಥಾನ್ ನಲ್ಲಿ ಭಾಗವಹಿಸಿದವರಿಗೆ ಮೊದಲು ವಾರ್ಮ್ ಅಪ್ ವ್ಯಾಯಾಮ ಗಳನ್ನು ಮಾಡಿಸಿದ್ದು, ನಂತರ ಮಿಥುನ್ ಕುಮಾರ್ ಜಿ. ಕೆ. ಐಪಿಎಸ್ ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರು 2025ನೇ ಸಾಲಿನ ಗಣೇಶ ಹಾಗೂ ಈದ್ ಮಿಲಾದ್ ಬಂದೋಬಸ್ತ್ ಸಂದರ್ಭದಲ್ಲಿ ಉತ್ತಮ ಕರ್ತವ್ಯ ನಿರ್ವಹಿಸಿದ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂಧಿಗಳಿಗೆ ಪ್ರಶಂಸನಾ ಪತ್ರಗಳನ್ನು ವಿತರಣೆ ಮಾಡಿರುತ್ತಾರೆ.
ನಂತರ ರಾಷ್ಟ್ರೀಯ ಏಕತಾ ದಿನದ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಲಾಯಿತು. ನಂತರ ಪೊಲೀಸ್ ಅಧೀಕ್ಷಕರು ಮ್ಯಾರಥಾನ್ ಗೆ ಚಾಲನೆ ನೀಡಿದ್ದು, ಸದರಿ ಮ್ಯಾರಥಾನ್ ಅನ್ನು ಡಿಎಆರ್ ಪೊಲೀಸ್ ಮೈದಾನದಿಂದ ಪ್ರಾರಂಭಿಸಿ, ನಂತರ ಅಶೊಕ ವೃತ್ತ, ಗೋಪಿ ವೃತ್ತ, ಐ ಬಿ ವೃತ್ತ ದಿಂದ ಡಿಎಆರ್ ಪೊಲೀಸ್ ಮೈದಾನಕ್ಕೆ ಬಂದು ಮುಕ್ತಾಯ ಮಾಡಲಾಗಿರುತ್ತದೆ.
Run For unity ಮ್ಯಾರಥಾನ್ ನಲ್ಲಿ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂಧಿಗಳು ಮತ್ತು ಸಾರ್ವಜನಿಕರ ಭಾಗವಹಿಸಿದ್ದರು.
Run for Unity by SP and other officers
 


 
 
 
