ad

ಶಿವಮೊಗ್ಗದ ಎರಡು ರೂಪಾಯಿ ಡಾಕ್ಟರ್ ಇನ್ನಿಲ್ಲ-The two-rupee doctor of Shivamogga is no more

SUDDILIVE ||SHIVAMOGGA

ಶಿವಮೊಗ್ಗದ ಎರಡು ರೂಪಾಯಿ ಡಾಕ್ಟರ್ ಇನ್ನಿಲ್ಲ-The two-rupee doctor of Shivamogga is no more    

Tworupees, Doctror


ಎರಡು ರುಪಾಯಿ ಡಾಕ್ಟರ್  ಎಂದೇ ಖ್ಯಾತರಾಗಿದ್ದ ಡಾ. ಬಿ.ಎಲ್.ಸುರೇಶ್‌ ತಲ್ಯಾಳ (72) ನಿಧನರಾಗಿದ್ದಾರೆ. ಜ್ಯೋತಿನಗರದ ಮನೆಯಲ್ಲಿ ಕಳೆದ ರಾತ್ರಿ ಹೃದಯಾಘಾತ ಸಂಭವಿಸಿತ್ತು.

ಹರಿಗೆ, ಒಡ್ಡಿನಕೊಪ್ಪ, ಮಲವಗೊಪ್ಪ, ಜ್ಯೋತಿನಗರ, ವಿದ್ಯಾನಗರ ಸೇರಿದಂತೆ ವಿವಿಧೆಡೆಯ ಜನರು ಡಾ. ಸುರೇಶ್‌ ತಲ್ಯಾಳ ಅವರ ಅಂತಿಮ ದರ್ಶನ ಪಡೆದರು. ಜ್ಯೋತಿನಗರದಲ್ಲಿ ಪಾರ್ವತಿ ಕ್ಲಿನಿಕ್‌ ನಡೆಸುತ್ತಿದ್ದ ಡಾ. ಸುರೇಶ್ ತಲ್ಯಾಳ ಅವರು ಎರಡು ರುಪಾಯಿ ಡಾಕ್ಟರ್‌ ಎಂದೇ ಖ್ಯಾತರಾಗಿದ್ದರು. ಹರಿಗೆ ಮತ್ತು ಸುತ್ತಮುತ್ತಲ ಭಾಗದ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದರು. ಕೆಲವು ವರ್ಷದಿಂದ ಹಣವನ್ನೇ ಪಡೆಯದೆ ಚಿಕಿತ್ಸೆ ನೀಡುತ್ತಿದ್ದರು.

ಹಲವು ಜನಪ್ರತಿನಿಧಿಗಳು, ಸುತ್ತಮುತ್ತಲ ಬಡಾವಣೆ ನಿವಾಸಿಗಳು ವೈದ್ಯರಿಗೆ ಅಂತಿಮ ನಮನ ಸಲ್ಲಿಸಿದರು. ಡಾ. ಸುರೇಶ್‌ ತಲ್ಯಾಳ ಅವರ ಅಂತ್ಯಕ್ರಿಯೆ ಇಂದು ಮಧ್ಯಾಹ್ನ ನೆರವೇರಿತು.

The two-rupee doctor of Shivamogga is no more

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close