SUDDILIVE || SHIVAMOGGA
ಬಸ್ ಸೀಟು ಹಿಡಿಯಲು ಮುಂದಾದ ವೃದ್ದೆಗೆ ಶಾಕ್-Shock for oldlady who tried to catch bus
ಮಗಳನ್ನು ನೋಡಲು ಮೈಸೂರಿಗೆ ಹೊರಟಿದ್ದ ಶಿವಮೊಗ್ಗದ ವೃದ್ದೆಗೆ ಶಾಕ್ ಆಗಿದೆ. ಶಿವಮೊಗ್ಗದ KSRTC ಬಸ್ ನಿಲ್ದಾಣದಲ್ಲಿ ಮಧ್ಯರಾತ್ರಿಯಲ್ಲಿ ಬಸ್ ನಲ್ಲಿ ಸೀಟು ಹಿಡಿಯಲು ಹೋಗುವಾಗ 40 ಗ್ರಾಂ ಮೌಲ್ಯದ ಮಾಂಗಲ್ಯ ಸರವನ್ನು ಕಳೆದುಕೊಂಡಿದ್ದಾರೆ.
ಈ ಘಟನೆ ಅಕ್ಟೋಬರ್ 4ರಂದು ನಡೆದಿದ್ದು ನೆನ್ನೆ ಎಫ್ಐಆರ್ ಆಗಿದೆ. ಅಕ್ಟೋಬರ್ 4ರಂದು ಮೈಸೂರಿನಲ್ಲಿರುವ ಮಗಳನ್ನು ಶಿವಮೊಗ್ಗದ ನಿವಾಸಿ ಗೀತಾ ಕೆ ಭಟ್ (63) ಎಂಬುವರು ಮೈಸೂರಿಗೆ ಪ್ರಯಾಣಿಸುವಾಗ ಬಸ್ ರಶ್ ಆಗಿತ್ತು.
ರಶ್ ನಲ್ಲಿಯೂ ಸೀಟು ಹಿಡಿಯಲು ಮುಂದೆ ಸಾಗಿದ್ದ ವೃದ್ಧೆಗೆ ತನ್ನ ಕೊರಳಲ್ಲಿದ್ದ ೪೦ ಗ್ರಾಂ ಮಾಂಗಲ್ಯ ಸರವನ್ನು ಕಳೆದುಕೊಂಡಿದ್ದಾರೆ. ಸೀಟು ಹಿಡಿದು ರಾತ್ರಿಯ ಪ್ರಯಾಣ ಚಳಿಯಾಗುತ್ತದೆ ಎಂದು ಶಾಲು ಹೊದ್ದುಕೊಳ್ಳುವಾಗ ವೃದ್ದೆಗೆ ಮಾಂಗಲ್ಯ ಸರ ಕಳೆದುಕೊಂಡಿರುವುದು ಗಮನಕ್ಕೆ ಬಂದಿದೆ. ಪ್ರಕರಣ ದೊಡ್ಡ ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Shock for oldlady who tried to catch bus