ad

ಪಂದ್ಯ ಡ್ರಾ ಆದರೂ ಕರ್ನಾಟಕಕ್ಕೆ ಮೂರು ಅಂಕ-Three points for Karnataka despite a draw

 SUDDILIVE || SHIVAMOGGA

ಪಂದ್ಯ ಡ್ರಾ ಆದರೂ ಕರ್ನಾಟಕಕ್ಕೆ ಮೂರು ಅಂಕ-Three points for Karnataka despite a draw

Karnataka, points


ಇಲ್ಲಿನ ನವೋದಯ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆದ ಕರ್ನಾಟಕ ಮತ್ತು ಗೋವಾ ನಡುವಿನ ಪಂದ್ಯವು ಡ್ರಾದಲ್ಲಿ ಅಂತ್ಯಗೊಂಡರು ಸಹ ತಿನ್ನಿಸ್ ಮುನ್ನಡೆ ಗಳಿಸಿದ ಭಯಂಕ್ ಅಗ್ರವಾಲ್ ತಂಡಕ್ಕೆ ಮೂರು ಅಂಕಗಳು ಲಭಿಸಿದೆ.

ಆತಿಥೇಯ ವೇಗಿಗಳು ಅಂತಿಮ ದಿನದಾಟದ ಮೊದಲ ಒಂದು ಗಂಟೆಯಲ್ಲೇ ನಾಲ್ಕು ವಿಕೆಟ್ ಉರುಳಿಸಿದ್ದರಿಂದ ಗೋವಾ ಫಾಲೋ ಆನ್‌ಗೆ ಸಿಲುಕಿತು.ಎರಡನೇ ಇನಿಂಗ್ಸ್‌ನ 6ನೇ ಓವರ್‌ನ ಎರಡನೇ ಎಸೆತದಲ್ಲಿ ವೇಗಿ ವೈಶಾಖ್ ವಿಜಯಕುಮಾರ್, ಸುಯಶ್ ಪ್ರಭುದೇಸಾಯಿ (13; 15ಎ, 2ಬೌಂ) ವಿಕೆಟ್‌ ಉರುಳಿಸಿ ಕರ್ನಾಟಕದ ಪಾಳಯದಲ್ಲಿ ಗೆಲುವಿನ ಆಸೆ ಚಿಗುರಿಸಿದ್ದರು.

ಆರಂಭಿಕ ಆಟಗಾರ ಮಂಥನ್ ಖುತ್ಕರ್ (ಔಟಾಗದೆ 55; 135ಎ, 5ಬೌಂ) ಹಾಗೂ ಅಭಿನವ್ ತೇಜ್‌ರಾಣಾ (ಔಟಾಗದೆ 73; 126ಎ, 9ಬೌಂ) ಕರ್ನಾಟಕದ ಬೌಲರ್‌ಗಳನ್ನು ಕಾಡಿದರು. ಇವರು ಮುರಿಯದ ಎರಡನೇ ವಿಕೆಟ್ ಪಾಲುದಾರಿಕೆಯಲ್ಲಿ 244 ಎಸೆತಗಳಲ್ಲಿ 123ರನ್ ಗಳಿಸಿದರು.ಚಹಾ ವಿರಾಮದ ನಂತರವೂ ವಿಕೆಟ್ ಬೀಳುವ ಲಕ್ಷಣಗಳು ಗೋಚರಿಸಲಿಲ್ಲ. ಹೀಗಾಗಿ ಉಭಯ ತಂಡಗಳ ನಾಯಕರು ಡ್ರಾ ಮಾಡಿಕೊಳ್ಳಲು ಸಮ್ಮತಿಸಿದರು.


ಸಂಕ್ಷಿಪ್ತ ಸ್ಕೋರ್: ಕರ್ನಾಟಕ: ಮೊದಲ ಇನಿಂಗ್ಸ್; 110.1 ಓವರ್‌ಗಳಲ್ಲಿ 371.


ಗೋವಾ: ಮೊದಲ ಇನಿಂಗ್ಸ್; 87.2 ಓವರ್‌ಗಳಲ್ಲಿ 217 (ಅರ್ಜುನ್ ತೆಂಡೂಲ್ಕರ್ 47, ಮೋಹಿತ್ ರೆಡ್ಕರ್ 53; ವಿದ್ವತ್ ಕಾವೇರಪ್ಪ 51ಕ್ಕೆ5, ಅಭಿಲಾಷ್ ಶೆಟ್ಟಿ 74ಕ್ಕೆ3, ಯಶೋವರ್ಧನ್ ಪರಂತಾಪ್ 18ಕ್ಕೆ1, ವೈಶಾಖ್ ವಿಜಯಕುಮಾರ್ 53ಕ್ಕೆ1).ಗೋವಾ: ಎರಡನೇ ಇನಿಂಗ್ಸ್; 46 ಓವರ್‌ಗಳಲ್ಲಿ 1 ವಿಕೆಟ್‌ಗೆ 143 (ಮಂಥನ್ ಖುತ್ಕರ್ ಔಟಾಗದೆ 55, ಸುಯಶ್ ಪ್ರಭುದೇಸಾಯಿ 13, ಅಭಿನವ್ ತೇಜ್‌ರಾಣಾ ಔಟಾಗದೆ 73; ವೈಶಾಖ್ ವಿಜಯಕುಮಾರ್ 33ಕ್ಕೆ1).

Three points for Karnataka despite a draw

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close