ವಶೀಕರಣದ ಹೆಸರಿನಲ್ಲಿ ವಂಚನೆ-Fraud in the name of Enchantment

 SUDDILIVE || SHIVAMOGGA

ವಶೀಕರಣದ ಹೆಸರಿನಲ್ಲಿ ವಂಚನೆ-Fraud in the name of Enchantment

Enchantment, fraud


ವಶೀಕರಣದ ಹೆಸರಿನಲ್ಲಿ  ವಂಚನೆಯಾಗಿದೆ. ವಂಚನೆಗೊಳಗಾದ ಮಹಿಳೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸಾಹೇಬ್ ಸುಬಾನ್ ಎಂಬ ಜ್ಯೋತಿಷಿಯ ವಿರುದ್ಧ ವಂಚನೆಯ ಪ್ರಕರಣ ದಾಖಲಾಗಿದೆ

ದುರ್ಗಿಗುಡಿಯಲ್ಲಿ ಸಮಸ್ಯೆಗೊಳಗಾಗಿದ್ದ ಹೊಸಮನೆಯ ನಿವಾಸಿಗಳಾದ ದಂಪತಿಗಳು ದುರ್ಗಿಗುಡಿಯ ಅಪೋಲೋ ಫಾರ್ಮಸಿಯ ಬಿಲ್ಡಿಂಗ್ ನಲ್ಲಿರುವ 3 ನೇಮಹಡಿಯಲ್ಲಿ ಸಾಹೇಬ್ ಸುಬಾನ್ ಎಂಬುವರ ಬಳಿ ಬಂದು ವಶೀಕರಣದ ಪೂಜೆ ಮಾಡಿಸಿ ವಂಚನೆಗೊಳಗಾಗಿದ್ದಾರೆ. 61 ಗ್ರಾಂ ಚಿನ್ನಾಭರಣವನ್ನ ಹೊತ್ತುಕೊಂಡು ಜ್ಯೋತಿಷಿ ಜೂಟ್ ಆಗಿದ್ದಾನೆ.  ಮಾಟ, ಮಂತ್ರ ವಶೀಕರಣ, ದಂಪತಿಗಳ ಸಮಸ್ಯೆ, ಮಕ್ಕಳಾಗದವರಿಗೆ ಮಕ್ಕಳು ಮೊದಲಾದ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವುದಾಗಿ ಬೋರ್ಡ್ ಹಾಕಿಕೊಂಡಿದ್ದ ಜ್ಯೋತಿಷಿಯನ್ನ ನಂಬಿ ಮಹಿಳೆ ಮೋಸಹೋಗಿದ್ದಾರೆ. 

ಪತ್ನಿಯು ತನ್ನ ಪತಿಗೆ ಸಮಸ್ಯೆಯಿದೆ ಎಂದು ಈ ಜ್ಯೋತಿಷ್ಯಾಲಯಕ್ಕೆ ಭೇಟಿ ನೀಡಿದಾಗ ಸಾಹೇಬ್ ಸುಬಾನ್ ವಶೀಕರಣದ ಪೂಜೆ ಮಾಡಬೇಕು ಎಂದು 3500 ರೂ ಹಣವನ್ನ ತಮ್ಮ ಕಚೇರಿಯಲ್ಲಿ ಕೆಲಸ ಮಾಡುವ ಸಬ್ರೀನ್ ತಾಜ್ ಎಂಬ ಮಹಿಳೆಯ ಅಕೌಂಟ್ ಗೆ ಹಣ ಹಾಕಿಸಿಕೊಂಡಿದ್ದಾನೆ.

ಮರುದಿನ 61 ಗ್ರಾಂ ಬಂಗಾರ ತರಲು ಮಹಿಳೆಗೆ ಸೂಚಿಸಿದ್ದಾನೆ. ಮರುದಿನ 51 ಗ್ರಾಂ ಚಿನ್ನಾಭರಣವನ್ನ ಹೊಂದಿಸಿಕೊಂಡು ಹೋದ ಮಹಿಳೆಗೆ ಇಲ್ಲ 61 ಗ್ರಾಂ ಬಂಗಾರವೇ ಬೇಕು ಎಂದು ಸೂಚಿಸಿದ್ದರಿಂದ ಮಹಿಳೆ ತನ್ನ‌ಸ್ನೇಹಿತೆಯಿಂದ 10 ಗ್ರಾಂ ಬಂಗಾರವನ್ನ ಸಾಲ ಪಡೆದು ಹೊಂದಿಸಿಕೊಂಡು ಜ್ಯೋತಿಷಿ ಬಳಿ ಹೋಗಿದ್ದಾರೆ.  

ಬಂಗಾರವನ್ನ ಮತ್ತು ಜೋಡಿಫೋಟೊವನ್ನ ಮಡಿಕೆಯಲ್ಲಿ ಹಾಕಿ ಇದನ್ನ ಯಾರಿಗೂ ಕಾಣದ ಜಾಗದಲ್ಲಿಡು, ಪತಿಗೂ ತಿಳಿಸಬೇಡ. ಈ ಮಡಿಕೆಯನ್ನ ಐದು ದಿನ ಪೂಜೆ ಮಾಡಿ ಅ.28 ರಂದು ತೆಗೆಯಿರಿ ಎಂದು ಕೊಟ್ಟಿದ್ದಾನೆ. ಈ ಎಲ್ಲಾ ಪೂಜೆಗಳು ಅ.23 ರಂದು ನಡೆದಿರುತ್ತದೆ. ಆದರೆ ಅನುಮಾನ ಬಂದು ಮಹಿಳೆ ಅ.25 ಕ್ಕೆ ತೆಗೆದು ನೋಡಿದಾಗ ಮಡಿಕೆಯಲ್ಲಿ ಕೇವಲ ಮಣ್ಣಿನ ಪೀಸುಗಳು ಇರುವುದು ತಿಳಿದಿದೆ. 

ತಕ್ಷಣವೇ ಜ್ಯೋತಿಷ್ಯಾಲಯಕ್ಕೆ ಬಂದಾಗ ಸಾಹೇಬ್ ಸುಬಾನ್ ಜ್ಯೋತಿಷ್ಯಾಲಯದ ಬೀಗಹಾಕಿಕೊಂಡು ಹೋಗಿದ್ದಾನೆ.  ಕೆಲಸ ಮಾಡುವ ಸಬ್ರೀನ್ ತಾಜ್ ಅವರಿಗೆ ಮೆಸೇಜ್ ಮಾಡಿ ತಾನು ತನ್ನ ಊರಾದ ಭೂಪಾಲ್ ಗೆ ಹೋಗಿ ಅಲ್ಲಿಂದ ಲಕ್ನೋಗೆ ಹೋಗಿ 2-3 ದಿನಗಳಲ್ಲಿ ಬರುವುದಾಗಿ ಹೇಳಿ ಮೆಸೇಜ್ ಹಾಕಿದ್ದಾನೆ. ಈ ವಿಷಯ ಕುರಿತು ಪ್ರತಿಮ ಎಂಬುವರು ಮೊನ್ನೆ  ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 

Fraud in the name of Enchantment

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close