SUDDILIVE || SHIVAMOGGA
ಡಿವೈಎಸ್ಪಿ ಮತ್ತು ಪಿಐಗಳ ವರ್ಗಾವಣೆ-Transfer of DySP and PI
ರಾಜ್ಯಾದ್ಯಂತ 35 ಪಿಎಸ್ಐ ಗಳ ವರ್ಗಾವಣೆ ಬೆನ್ನಲ್ಲೇ 27 ಡಿವೈಎಸ್ಪಿಗಳನ್ನ ಮತ್ತು ವಿವಿಧ ಠಾಣೆಗಳ 131 ಪೊಲೀಸ್ ಇನ್ ಸ್ಪೆಕ್ಟರ್ ಗಳನ್ನ ವರ್ಗಾವಣೆಗೊಳಿಸಿ ಮಹಾನಿರ್ದೇಶಕರು ಮತ್ತು ಆರಕ್ಷಕ ಮಹಾನಿರೀಕ್ಷಕರಾದ ಸೌಮೇಂದು ಮುಖರ್ಜಿ ಐಪಿಎಸ್ ಅವರು ಆದೇಶಿದ್ದಾರೆ.
ಮೊದಲಿಗೆ ಭದ್ರಾವತಿಯ ಡಿವೈಎಸ್ಪಿ ನಾಗರಾಜ್ ಕೆ.ಆರ್ ಅವರನ್ನ ವರ್ಗಾಯಿಸಲಾಗಿದ್ದು ಅವರ ಜಾಗಕ್ಕೆ ಯಾರನ್ನೂ ನಿಯೂಕ್ತಿಗೊಳಿಸಿಲ್ಲ. ನಾಗರಾಜ್ ಕೆ.ಆರ್ ಅವರನ್ನ ಚಿಕ್ಕಮಗಳೂರಿನ ಉಪವಿಭಾಗಕ್ಕೆ ವರ್ಗಾಯಿಸಿ ಆದೇಶಿಸಲಾಗಿದೆ.
ಅದರಂತೆ ಪೊಲೀಸ್ ಇನ್ ಸ್ಪೆಕ್ಟರ್ ಗಳನ್ನ ವಿವಿಧ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ. ಜಿಲ್ಲೆಯಲ್ಲಿ ಭದ್ರಾವತಿ ಗ್ರಾಮಾಂತರ ಪೊಲೀದ್ ಠಾಣೆಯ ಪಿಐ ಜಗದೀಶ್ ಸಿ.ಹಂಚಿನಾಳ ಅವರನ್ನ ಶಿವಮೊಗ್ಗದ ಡಿಸಿಬಿಗೆ ವರ್ಗಾಯಿಸಲಾಗಿದ್ದು ಶಿವಮೊಗ್ಗ ಡಿಸಿಬಿ ಪಿಐ ಆಗಿದ್ದ ಅಣ್ಣಯ್ಯ ಕೆ.ಟಿ ಅವರನ್ನ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ.
ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯ ಪಿಐ ಸ್ಥಾನಕ್ಕೆ ಆಂತರಿಕ ಭದ್ರತಾ ವಿಭಾಗದಲ್ಲಿದ್ದ ಚಿದಾನಂದ ಅವರನ್ನ ವರ್ಗಾಯಿಸಲಾಗಿದೆ. ಹಾವೇರಿ ಡಿಸಿಬಿಯಲ್ಲಿದ್ದ ಪಿಐ ಮುತ್ತನ ಗೌಡ ಐ ಗೌಡಪ್ಪಗೌಡರ್ ಅವರನ್ನ ಹೊಸನಗರ ವೃತ್ತಕ್ಕೆ ಸಿಪಿಐಆಗಿ ನಿಯೋಜಿಸಲಾಗಿದೆ. ಹೊಸನಗರ ವೃತ್ತ ನಿರೀಕ್ಷಕರಾಗಿದ್ದ ಗುರಣ್ಣ ಎಸ್ ಹೆಬ್ಬಾಳೆ ಅವರನ್ನ ಕರ್ನಾಟಕಬಲೋಕಾಯುಕ್ತಕ್ಕೆ ವರ್ಗಾಯಿಸಲಾಗಿದೆ.
ಸೊರಬದ ವೃತ್ತ ನಿರೀಕ್ಷಕರಾಗಿದ್ದ ರಾಜಶೇಖರಯ್ಯ ಎಲ್ ಅವರನ್ನ ಲೋಕಾಯುಕ್ತಗೆ, ಹಾವೇರಿ ಜಿಲ್ಲೆ ಬ್ಯಾಡಗಿ ವೃತ್ತ ನಿರೀಕ್ಚಕರಾಗಿದ್ದ ಮಹಂತೇಶ್ ಕೆ. ಲಂಬಿ ಅವರನ್ನ ಸೊರಬ ವೃತ್ತ ನಿರೀಕ್ಷಕರಾಗಿ ವರ್ಗಾಯಿಸಲಾಗಿದೆ.
Transfer of DySP and PI