ad

ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಬಿಗ್ ಟ್ವಿಸ್ಟ್- Big twist for the case of suicide

 SUDDILIVE || SHIVAMOGGA

ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಬಿಗ್ ಟ್ವಿಸ್ಟ್-Big twist for the case of suicide

Big, twist

ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕಣ ಈಗ ಟ್ವಿಸ್ಟ್ ಪಡೆದುಕೊಂಡಿದೆ. ಅಸ್ವಾಭಿಕ ಸಾವು ಎಂದು ದಾಖಲಾಗಿದ್ದ ಪ್ರಕರಣ ಸಾವಿಗೆ ಪ್ರಚೋದನೆ, ಕ್ರಿಮಿನಲ್ ಅತಿಕ್ರಮಣ ಪ್ರವೇಶ ಮೊದಲಾದ ಸೆಕ್ಷಬ್ ಅಡಿ ಎಫ್ಐಆರ್ ದಾಖಲಾಗಿದೆ. ಒಟ್ಟು 12 ಜನರ ವಿರುದ್ಧ ದೂರು ದಾಖಲಾಗಿದೆ. 

ದೇವಕ್ಯಾತಿಕೊಪ್ಪದ ಬೂತನಗುಡಿ ಕ್ಯಾಂಪ್ ನಲ್ಲಿ ಮಲ್ಲಿಕಮ್ಮನ ಮಗ ಪ್ರಕಾಶ್ ಎಂಬಾತ 14 ವರ್ಷದ ಹಿಂದೆ ಕವಿತಾ ಎಂಬುವರನ್ನ ಮದುವೆಯಾಗಿದ್ದು ಮದ್ಯಕ್ಕೆ ದಾಸನಾಗಿದ್ದನು. ಒಬ್ಬ ಮಗಳಿರುತ್ತಾಳೆ. ಮದ್ಯ ಬಿಡುವಂತೆ ಅನೇಕರು ಕಿವಿ ಮಾತನ್ನಾಡಿದ್ದರು. ಆದರೆ ಕೇಳಲು ಸಿದ್ದವಿರದ ಪ್ರಕಾಶ್ ಒಂದು ದಿನ ನಾಲ್ಕು ಮಕ್ಕಳಿರುವ ಚನ್ನಗಿರಿಯ ಮೇಲನಾಯಕನಹಟ್ಟಿ ನಿವಾಸಿಯಾದ ಲಕ್ಷ್ಮೀ ಎಂಬುವರನ್ನ ಮನೆಗೆ ಕರೆದುಕೊಂಡು ಬಂದಿದ್ದನು. 

ಕವಿತ ಮತ್ತು ಲಕ್ಷ್ಮೀ ಎಂಬುವರನ್ನ ಒಟ್ಟಿಗೆ ಮನೆಯಲ್ಲಿರುವಂತೆ ಮಾಡಿದ್ದ ಪ್ರಕಾಶ್ ಗೆ ಲಕ್ಚ್ಮೀ ಯನ್ನ ಬಿಡುವಂತೆ ಹೆಂಡತಿ ಮತ್ತು‌ತಾಯಿ‌ ಗ್ರಾಮಸ್ಥರು ಅನೇಕಬಾರಿ ತಿಳುವಳಿಕೆ ನೀಡಿದ್ದರೂ ಆಕೆಯನ್ನ‌ಬಿಡದ ಹಿನ್ನಲೆಯಲ್ಲಿ ಹೆಂಡತಿ ಕವಿತಾ ತನ್ನ ಅಣ್ಣನ‌ಮನೆಗೆ ಮತ್ತು ತಾಯಿ ದೊಡ್ಡಮಗಳ ಮನೆಗೆ ಹೋಗಿದ್ದರು. 

ಅ.2 ರಂದು ದಿಡೀರ್ ಎಂದು ಲಕ್ಷ್ಮೀಯ ಪತಿ ಮಂಜು ಮತ್ತು ಆತನ ಕಡೆಯ 12 ಜನರು ಮನೆಗೆ ಬಂದು ಪ್ರಕಾಶ್ ಗೆ ಹೊಡೆದು, ಹೆಂಡತಿ ವಿಷಯಕ್ಕೆ ಬಂದರೆ ಕೊಲೆ ಮಸಡುವುದಾಗಿ, ಸಾಯಿ ಎಂದು ಪ್ರಚೋದನೆ ನೀಡಿ ಹೋಗಿದ್ದರು‌ ಇದರಿಂದ ಮನನೊಂದ ಪ್ರಕಾಶ್ ಮನನೊಂದು ಮದ್ಯ ಸೇವಿಸಿ ಬಂದು ಮನೆಯ ಸೀಲಿಂಗ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದನು. 

ಈ ಪ್ರಕರಣ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಯುಡಿಆರ್ (ಅಸ್ವಭಾವಿಕ ಸಾವು) ಎಂದು ದೂರು ದಾಖಲಾಗಿತ್ತು. ಈಗ ಮೃತ‌ ಪ್ರಕಾಶ್ ನ‌ ತಾಯಿ ಇದು ಅಸ್ವಾಭಾವಿಕ ಸಾವಲ್ಲ ಇದೊಂದು ಪ್ರಚೋದಿತ ಕೊಲೆ ಎಂದು ಮಂಜು, ಮಂಜು ಆಂಟಿ, ವೆಂಕಟೇಶ್, ಮೇಸ್ತ್ರೀ ಸೇಳಿದಂತೆ ಇತರೆ 8 ಜನರ ವಿರುದ್ಧ ದೂರು ದಾಖಲಾಗಿದೆ. 

Big twist for the case of suicide


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close