SUDDILIVE|| HONNALI
ಮರಳು ಸಾಗಿಸುವಾಗ ತೆಪ್ಪ ಮಗುಚಿಕೊಂಡು ಇಬ್ಬರು ಸಾವು-Two die after raft capsizes while transporting sand
ಪಟ್ಟಣದ ಹೊರಭಾಗದ ತುಂಗಾ ಭದ್ರ ನದಿಯಲ್ಲಿ ಸೋಮವಾರ ತೆಪ್ಪ ಮೊಗಚಿ ಇಬ್ಬರು ಮೃತಪಟ್ಟಿರುವ ಘಟನೆ ವರದಿಯಾಗಿದೆ.
ಮೀನು ಹಿಡಿಯುವ ತೆಪ್ಪದಲ್ಲಿ ಮರಳು ಸಾಗಿಸಲು ಮುಂದಾಗಿದ್ದ ಇಬ್ವರು ಯುವಕರು ಸಾವುಕಂಡಿದ್ದು, ಸಾವನ್ನಪ್ಪಿದವರನ್ನ ಹೊನ್ನಾಳಿ ಪಟ್ಟಣದ ತಿಪ್ಪೇಶ್ 25 ವರ್ಷ ಹಾಗೂ ಮುಕ್ತಿಯ 19 ವರ್ಷ ದ ಯುವಕರು ಎಂದು ಗುರುತಿಸಲಾಗಿದೆ.
ತೆಪ್ಪದಲ್ಲಿದ್ದ ಇನ್ನಿಬ್ಬರು ಬದುಕು ಉಳಿದಿದ್ದಾರೆ ನದಿಯಿಂದ ಮರಳು ತೆಗೆದು ದಡಕ್ಕೆ ಸಾಗಿಸುವಾಗ ನಿಯಂತ್ರಣ ಕಳೆದುಕೊಂಡಿದ್ದ ತೆಪ್ಪ ಮಗುಚಿ ಕೊಂಡಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ ಮೃತದೇಹಗಳಿಗೆ ಅಗ್ನಿಶಾಮಕ ಮತ್ತು ತುರ್ತು ಸೇವಾ ಠಾಣೆಯ ಸಿಬ್ಬಂದಿಗಳು ಹುಡುಕಾಟ ನಡೆಸಿದ್ದರು.
Two die after raft capsizes while transporting sand