SUDDILIVE || SHIVAMOGGA
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯನ್ನ ಹೇಗೆ ಮತ್ತು ಏಕೆ ಮಾಡಲಾಗುವುದರ ಬಗ್ಗೆ ಇಂಧನ ಸಚಿವರ ಸ್ಪಷ್ಟನೆ-Energy Minister clarifies how and why the Sharavati Pumped Storage project is being done
ರಾಜ್ಯದಲ್ಲಿ ಯಾವುದೇ ವಿದ್ಯುತ್ ಕೊರತೆಗಳಿಲ್ಲ ಎಂದು ಇಂಧನ ಸಚಿವ ಕೆಜೆ ಜಾರ್ಜ್ ಸಿಡಿಮಿಡಿಗೊಂಡಿದ್ದಾರೆ.
ಶಿವಮೊಗ್ಗದ ಬಿಆರ್ ಪಿ ಹೆಲಿಪ್ಯಾಡ್ ನಲ್ಲಿ ಮಾಧ್ಯಮಗಳ ಜೊತೆ ಮಾತನಾಡುವಾಗ ಮಾಧ್ಯಮಗಳು ವಿದ್ಯುತ್ ಕೊರತೆ ನೀಗಿಸಲು ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ಕೇಳಿದ ಪ್ರಶ್ನೆಗೆ ಸಿಡಿಮಿಡಿಗೊಂಡ ಸಚಿವರು ವಿದ್ಯುತ್ ಕೊರತೆ ಎಲ್ಲಿದೆ. ಯಾರು ಹೇಳಿದ್ದು. ಇದನ್ನ ನಿಮಗೆ ಕೇಳಿ ಕೇಳಿ ಅಭ್ಯಾಸವಾಗಿದೆ ಎಂದು ಸಿಡಿಮಿಡಿಗೊಂಡರು.
ಸದ್ಯ ಶರಾವತಿ ಜಲವಿದ್ಯುತ್ ಇಂದ ಒಂದು ಸಾವಿರ ಮೆಗಾ ವಿದ್ಯುತ್ ಉತ್ಪಾದಿಸುತ್ತಿದ್ದೇವೆ ಅದಕ್ಕೆ ಹೆಚ್ಚುವರಿಯಾಗಿ 2000 ಮೆಗ ವ್ಯಾಟ್ ಉತ್ಪಾದನೆಯನ್ನು ಮಾಡಲಾಗುತ್ತಿದೆ ಇದಕ್ಕೆ ಕೇಂದ್ರದ ಅನುಮತಿಯು ದೊರೆ ದೊರೆತಿದೆ ಎಂದರು.
ಶರಾವತಿ ಸ್ಟೋರೇಜ್ ಯೋಜನೆಗೆ 120 ಎಕರೆ ಭೂಮಿಯನ್ನ ಬಳಸಿಕೊಳ್ಳಲಾಗುತ್ತಿದೆ. ಹೆಚ್ಚುವರಿ ನೀರು ಸಹ ಬೇಡವಾಗಿದೆ ಹರಿಯುವ ನೀರನ್ನೇ ಬಳಸಿಕೊಂಡು ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ರಾಜ್ಯದಲ್ಲಿ ಸೋಲಾರ್ ವಿದ್ಯುತ್ ಹಗಲತ್ತು ವೇಸ್ಟ್ ಆಗುತ್ತಿದೆ. ಅದನ್ನ ಶರಾವತಿ ಪಂಪ್ಡ್ ಸ್ಟೋರೇಜ್ ಗೆ ಕಳುಹಿಸಿ ಅದರಿಂದ ಹೆಚ್ಚುವರಿ ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ ಎಂದು ವಿವರಿಸಿದರು.
ಬೆಳಿಗ್ಗೆ 6 ಗಂಟೆಯಿಂದ 8 ಗಂಟೆಯ ವರೆಗೆ ಮತ್ತು ಸಂಜೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಪೀಕ್ ಅವರ್ ಎಂದು ಪರಿಗಣಿಸಲಾಗಿದೆ. ಈ ವೇಳೆ ಅಧಿಕ ವಿದ್ಯುತ್ ಕರ್ಚಾಗುತ್ತದೆ. ಈ ಶರಾವತಿಪಂಪ್ಡ್ ಸ್ಟೋರೇಜ್ ನಿಂದ ಉತ್ಪಾದಿಸುವ ವಿದ್ಯುತ್ ನ್ನ ಆ ಪೀಕ್ ಅವರ್ ನಲ್ಲಿ ಬಳಸಿಕೊಳ್ಳಲಾಗುವುದು ಎಂದರು.
8 ಕುಟುಂಬಗಳ ಒಕ್ಕಲೆಬ್ಬಿಸುತ್ತಿರುವ ಬಗ್ಗೆ ಮತ್ತು 16 ಸಾವಿರ ಮರಗಳ ಕಡಿತಲೆಗಳಾಗುತ್ತಿರುವ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು. ಅದಕ್ಕೆ ಕಾನೂನು ಇದೆ. ಬದಲೀ ಭೂಮಿ ಪಡೆದು ಅಲ್ಲಿ ಒಂದು ಮರ ಕಡಿದರೆ 4 ಮರ ನೆಡುವ ಪರಿಹಾರವಿದೆ. ಹೈವೆ ರಸ್ತೆ ಮಾಡುವಾಗ ಮರಗಳನ್ನ ಕಡಿಯೊಲ್ವಾ ಎಂದು ಪ್ರಶ್ನಿಸಿದ ಸಚಿವರು ಇದನ್ನ ಕಾನೂನು ಬದ್ದವಾಗಿಯೇ ಕ್ರಮಜರುಗಿಸಲಾಗುವುದು ಎಂದರು.
ಇಲ್ಲಿ ಪೈಪ್ ಲೈನ್ ಒಳಗೆ ಹೋಗುವುದರಿಂದ ಮೇಲೆಯೇ ಮತ್ತೆ ಮರಗಿಡಗಳನ್ನ ನೆಡುವ ಅವಕಾಶವಿದೆ. ಪ್ರತಿಯೊಂದು ಯೋಜನೆಗೆ ವಿರೋಧವಿದ್ದೇ ಇರುತ್ತದೆ. ಅದಕ್ಕೆ ಹೆದರಲಾಗದು. ಇಲ್ಲಿ ಯಾವುದೇ ಮುಳುಗಡೆಯಾಗಲ್ಲ. ಇಲ್ಲಿ ಉತ್ಪಾದನೆ ಆದ ವಿದ್ಯುತ್ ನ್ನ ಹಾಲಿಯಿರುವ ತಂತಿಗಳ ಮೂಲಕವೇ ತೆಗೆದುಕೊಂಡು ಹೋಗಲಾಗುತ್ತಿದೆ. ಅದಕ್ಕೆ ನಮ್ಮ ಅಧಿಕಾರಿಗಳು ಡಿಪಿಆರ್ ರೆಡಿ ಮಾಡ್ತಾಯಿದ್ದಾರೆ ಎಂದರು.
ಮನೆಗಳಿಗೆ ಅಳವಡಿಸುವ ಮೀಟರ್ ದರವನ್ನ ಹೆಚ್ಚಿಸುಇರುವಬಗ್ಗೆ ನನಗೆ ಮಾಹಿತಿಯಲ್ಲ. ಅಧಿಕಾರಿಗಳ ಜೊತೆ ಚರ್ಚಿಸುವುದಾಗಿ ಚಾರ್ಜ್ ತಿಳಿಸಿದ್ದಾರೆ.
Energy Minister clarifies