SUDDILIVE || THIRTHAHALLI
ಕೈಮರ ಬಳಿ ಕೆರೆಗೆ ಬಿದ್ದು ಕಾಡುಕೋಣ ಸಾವು-Wild buffalo dies after falling into lake
ಕಾಡುಕೋಣವೊಂದು ಕೆರೆಗೆ ಬಿದ್ದು ಸಾವನ್ನಪ್ಪಿರುವ ಘಟನೆ ತೀರ್ಥಹಳ್ಳಿ ತಾಲೂಕಿನ ಕೈಮರ ಸಮೀಪ ಶನಿವಾರ ನಡೆದಿದೆ.
ಕಾಡುಕೋಣ ಸಾವನ್ನಪ್ಪಿರುವ ಬಗ್ಗೆ ಹಲವು ಅನುಮಾನ ಸಹ ವ್ಯಕ್ತವಾಗಿದ್ದು, ನೀರಿನಲ್ಲಿ ಕಾಡುಕೋಣ ಸಾವನ್ನಪ್ಪಿದ್ದು ಹೇಗೆ? ಯಾರಾದರೂ ಸಾಯಿಸಿ ಕೆರೆಗೆ ಹಾಕಿದ್ರಾ? ಎಂಬ ಅನುಮಾನವನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ.
ವಿಷಯ ತಿಳಿದ ಮೇಗರವಳ್ಳಿ ಅರಣ್ಯ ಇಲಾಖೆ ಸಿಬ್ಬಂದಿಗಳು ಕೆರೆಯಿಂದ ಕಾಡುಕೋಣದ ಮೃತದೇಹ ತೆಗೆದಿದ್ದಾರೆ. ಶಿವಮೊಗ್ಗ ಸುದ್ದಿ ಜೊತೆಗೆ ಮಾತನಾಡಿದ ಮೇಗರವಳ್ಳಿ ಅರಣ್ಯ ಇಲಾಖೆಯ ಅಧಿಕಾರಿಗಳು ಕಾಡುಕೋಣ ಹೇಗೆ ಸಾವನ್ನಪ್ಪಿದೆ ಎಂಬದು ತಿಳಿದಿಲ್ಲ. ಕೆರೆಯಿಂದ ಹೊರತೆಗೆಯಲಾಗಿದೆ. ಪರೀಕ್ಷೆಗೆ ಒಳಪಡಿಸಲಾಗುತ್ತದೆ ಆ ನಂತರ ಹೇಗೆ ಕಾಡುಕೋಣ ಸಾವ್ವನ್ನಪಿದೆ ಎಂದು ತಿಳಿಯಲಿದೆ ಎಂದು ತಿಳಿಸಿದ್ದಾರೆ.
Wild buffalo dies after falling into lake

