SUDDILIVE || BHADRAVATHI
ಮುಳುಗುವ ಸೇತುವೆ ಮೇಲೆ ಅನೇಕ ದಿನಗಳಿಂದ ಬಿದ್ದಿರುವ 20 ಅಡಿ ಪೈಪ್, ವಾಹನ ಸಂಚಾರರ ಗೋಳು ಹೇಳೋರಿಲ್ಲ ಕೇಳೋರಿಲ್ಲ-A 20-foot pipe has been lying on a sinking bridge for days, causing no sound or noise to vehicular traffic.
ಭದ್ರಾವತಿಯಲ್ಲಿ ಅಧಿಕಾರಿಗಳನಿರ್ಲಕ್ಷ ಮುಂದುವರೆದಿದೆ. ಯಾವ ಜನಪರ ಕಾಳಜಿಗಳು ಇಲ್ಲದೆ ಇರುವುದು ಎದ್ದುಕಾಣುತ್ತಿದೆ. ಹಾಗಂತ ಶಿವಮೊಗ್ಗದಲ್ಲಿ ರಾಮರಾಜ್ಯವೇ ಧರೆಗಿಳಿದಿದೆ ಎಂದು ಹೇಳಲು ತಯಾರಿಲ್ಲ.
ನಿನ್ನೆ ತಾಲೂಕಿನ ಸಿಂಗನಮನೆ ಗ್ರಾಮಪಂಚಾಯತ್ ಮುಂದಿನ ರಸ್ತೆಯ ಗುಂಡಿಯ ಅವಾಂತರ ಸಾಮಾಜಿಕ ಜಾಲತಾಣಗಳಲ್ಲಿ ರಾರಾಜಿಸುತ್ತಿರುವ ಬೆನ್ಬಲ್ಲೇ ಭದ್ರಾವತಿಯ ಹೃದಯಭಾಗದಲ್ಲಿರುವ ಸೇತುವೆಯಲ್ಲಿ ಬಿದ್ದಿರುವ ಕಬ್ಬಿಣದ ಪೈಪ್ ನಿಂದ ಅಪಘಾತ ಸಂಭವಿಸುತ್ತಿದ್ದರೂ ನಗರಸಭೆ ಅಧಿಕಾರಿಗಳು ನಮಗೆ ಸಂಬಂಧವಿಲ್ಲವೆಂಬಂತೆ ಓಡಾಡುತ್ತಿದ್ದಾರೆ.
ಈ ಕಬ್ಬಿಣದ ಪೈಪ್ ಗಳಿಂದಾಗಿ ಇಂದು ಸ್ವಿಫ್ಟ್ ಕಾರೊಂದು ಹಾನಿಗೊಳಗಾಗಿದೆ. ಇಂದು ಮುಳುಗುವೆ ಸೇತುವೆಯ ಮೇಲೆ KSRTC ಬಸ್ ಚುಲಿಸುವಾಗ ಎದುರಿನಿಂದ ಬಂದ ಕಾರು ಸೇತುವೆ ಮೇಲೆ ನಿರುಪಯುಕ್ತವಾಗಿಟ್ಟಿರುವ 20 ಅಡಿಯ ಪೈಪ್ ಗೆ ಜಾಗವಿಲ್ಲದೆ ಡಿಕ್ಕಿ ಹೊಡೆದಿದೆ. ಇದರಿಂದ ಕಾರಿನ ವೀಲ್ ಜ್ಯಾಮ್ ಆಗಿದೆ.
ಈ ಬಾರಿಯ ಭದ್ರನದಿಯಲ್ಲಿ ಅಧಿಕ ನೀರು ಹರಿದು ಬಂದ ಪರಿಣಾಮ 20 ಅಡಿಯ ಪೈಪ್ ಕುತ್ತುಕೊಂಡು ಬಂದು ಬಹಳದಿನದಿಂದ ಹಾಗೆ ಸೇತುವೆ ಮೇಲೆ ಇರಿಸಲಾಗಿದೆ. ಇದು ಯಾವ ಪುರುಷಾರ್ಥಕ್ಕೆ ಇಡಲಾಗಿದೆ ಎಂಬುದು ಯಾರಿಗೂ ಗೊತ್ತಿಲ್ಲ. ಅನೇಕ ದಿನಗಳಿಂದ ಈ ಪೈಪ್ ವಾಹನ ಸಂಚಾರಕ್ಕೆ ತೊಡಕುಂಟಾಗುತ್ತಿದ್ದರೂ ಅಧಿಕರಿಗಳು ಕಣ್ಣುಮುಚ್ಚಿಕೊಂಡಿರುವುದು ಈ ಎಲ್ಲಾ ಸಮಸ್ಯೆಗೆ ಕಾರಣವಾಗಿದೆ ಎಂಬುದು ಸ್ಥಳೀಯರ ಆರೋಪವಾಗಿದೆ.
A 20-foot pipe has been lying on a sinking bridge for days

