SUDDILIVE || SHIVAMOGGA
ಹೃದಯಾಘಾತಕ್ಕೆ ಕಾರ್ಮಿಕ ಬಲಿ-Worker dies of heart attack
ಹೃದಯಾಘಾತದಿಂದ ಕಾರ್ಮಿಕನೋರ್ವ ಬಲಿಯಾಗಿದ್ದಾನೆ. ಕೋವಿಡ್ ನಂತರ ಸಣ್ಣ ವಯಸ್ಸಿನ ವ್ಯಕ್ತಿಗಳು ಹೃದಯಾಘಾತಕ್ಕೆ ಬಲಿಯಾಗುತ್ತಿರುವುದರಿಂದ ಈ. ಘಟನೆ ಮಹತ್ವ ಪಡೆದುಕೊಂಡಿದೆ.
ಕಳೆದ ಮೂರು ವರ್ಷದಿಂದ ಮಾಚೇನಹಳ್ಳಿಯ ಈಶ್ವರ್ ಇಂಡಸ್ಟ್ರಿಯಲ್ ನಲ್ಲಿ ಗ್ಯಾಸ್ ಕಟ್ಟಿಂಗ್ ಕೆಲಸ ಮಾಡುತ್ತಿದ್ದ ಪ್ರಕಾಶ್ (47) ಎಂಬುವರು ಇಂದು ಕೆಲಸ ಮಾಡುತ್ತಿದ್ದ ಕೈಗಾರಿಕೆಯಲ್ಲೇ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಕುಸಿದು ಬಿದ್ದಿದ್ದಾರೆ.
ತಕ್ಷಣವೇ ಅವರನ್ನ ಹತ್ತಿರದ ಖಾಸಗಿ ಆಸ್ಪತ್ರೆಗೆ ತೆಗೆದುಕೊಂಡು ಹೋದ ವೇಳೆ ವೈದ್ಯರು ಪ್ರಕಾಶ್ ಸಾವನ್ನ ದೃಢಪಡಿಸಿದ್ದಾರೆ. ಪ್ರಕಾಶ್ ಮದುವೆಯಾಗಿ ಮಕ್ಕಳಿದ್ದರು. ಹುತ್ತ ಕಾಲೋನಿಯ ನಿವಾಸಿಯಾಗಿದ್ದಾರೆ. ಈಗ ಮಧ್ಯಾಹ್ನದ ನಂತರ ಅವರ ಶವವನ್ನ ಭದ್ರಾವತಿ ಸಾರ್ವಜನಿಕ ಆಸ್ಪತ್ರೆಗೆ ತಂದಿರಿಸಲಾಗಿದೆ.
Worker dies of heart attack