SUDDILIVE || SHIVAMOGGA
ಕ್ಷುಲ್ಲಕ ಕಾರಣಕ್ಕೆ ವಿಚಾರಣ ಖೈದಿಗಳಿಂದ ಸಜಾಬಂದಿಯ ಮೇಲೆ ಹಲ್ಲೆ,, ವಿಚಾರಣ ಖೈದಿಯ ಬಳಿ ಬ್ಲೇಡ್ ಪತ್ತೆ-Prisoners under investigation attack convict prisoner over trivial matter, blade found in prisoner under investigation
ಶಿವಮೊಗ್ಗ ಜೈಲಿನಲ್ಲಿ ವಿಚಾರಣ ಬಂದಿಯಿಂದ ಶಿಕ್ಷಾ ಬಂಧಿಗೆ ಹಲ್ಲೆ ನಡೆದಿದ್ದು ವಿಚಾರಣಾ ಬಂದಿ ಬಳಿ ನಿಷೇಧಿತಾ ವಸ್ತುಗಳಾದ ಬ್ಲೇಡ್ ಪತ್ತೆಯಾಗಿರುವ ಘಟನೆ ವರದಿಯಾಗಿದೆ.
ವಿಚಾರಣಾ ಬಂದಿ ಎಂದರೆ ನ್ಯಾಯಾಲಯದಲ್ಲಿ ಇವರ ಪ್ರಕರಣ ವಿಚಾರಣ ಹಂತದಲ್ಲಿದ್ದು, ಇವರಿನ್ನೂ ಆರೋಪಿಗಳಾಗಿರುತ್ತಾರೆ. ಶಿಕ್ಷಾ ಬಂಧಿ ಎಂದರೆ ನ್ಯಾಯಾಲಯ ಇವರನ್ನ ಶಿಕ್ಷೆಗೆ ಒಳಪಡಿಸಿರುವುದರಿಂದ ಇವರನ್ನ ಶಿಕ್ಷಾ ಬಂದಿ ಅಥವಾ ಸಜಾಬಂದಿ ಎಂದು ಗುರುತಿಸಲಾಗಿರುತ್ತದೆ.
ಕುಮಧ್ವತಿ ವಾರ್ಡ್ ನ 20,21 ಹಾಗೂ 35 ನೇ ಕೊಠಡಿಯಲ್ಲಿದ್ದ ವಿಚಾರಣಾ ಬಂದಿ ನಿರಂಜನ್ ನಾಯ್ಕ್ ಯಾನೆ ನಿರಂಜನ್, ರುದ್ರೇಶ್ ನಾಯ್ಕ್ ಹಾಗೂ ರಾಜೇಶ್ ಎಂಬವರು ಅ.19 ರಂದು ಶನಿವಾರ ಮಧ್ಯಾಹ್ನದ ಊಟ ಬಡಿಸುವಾಗ ಭದ್ರಾ ವಿಭಾಗದ ಕೊಠಡಿ ಸಂಖ್ಯೆ 28 ರಲ್ಲಿದ್ದ ಶಿಕ್ಷಾ ಬಂಧಿ ಮಾರಪ್ಪ ಎಂಬುವನ ಮೇಲೆ ದಾಳಿ ನಡೆಸಿ ಹರಿತವಾದ ಆಯುಧದಿಂದ ಎಡಗಣ್ಣಿನ ಮೇಲೆ ದಾಳಿ ನಡೆಸಿದ್ದಾರೆ.
ಮಾರಪ್ಪನಿಗೆ ಜೈಲಿನಲ್ಲೇ ಇರುವ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ನಂತರ ಆರೋಪಿಗಳಾದ ಮೂವರನ್ನ ತಪಾಸಣೆಗೊಳಪಡಿದಿದಾಗ ನಿರಂಜನ ನಾಯ್ಕನ ಬಳಿ ಬ್ಲೇಡ್ ಪತ್ತೆಯಾಗಿದೆ. ಜೈಲಿನಲ್ಲಿ ಈ ವಸ್ತುಗಳು ನಿಷೇಧವಾದುದರಿಂದ ಆತನ ಮೇಲೆ ಜೈಲ್ ಸೂಪರಿಂಟೆಂಡೆಂಟ್ ರಂಗನಾಥ ದೂರು ದಾಖಲಿಸಿದ್ದಾರೆ. ಕ್ಷುಲ್ಲಕ ಕಾರಣಕ್ಕೆ ಶಿಕ್ಷಾ ಬಂದಿ ಮಾರಪ್ಪನ ಮೇಲೆ ಹಲ್ಲೆ ನಡೆಸಿರುವುದಾಗಿ ತುಂಗನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
attack convict prisoner over trivial matter