ad

ನಾಳೆ ಉಮ್ಮೀದ್‌ ಪೋರ್ಟಲ್‌ ಕಾರ್ಯಾಗಾರ-UMEED portal workshop

SUDDILIVE || SHIVAMOGGA

ನಾಳೆ ಉಮ್ಮೀದ್‌ ಪೋರ್ಟಲ್‌ ಕಾರ್ಯಾಗಾರ-UMEED portal workshop

Umeed, workshop

ಶಿವಮೊಗ್ಗ ತಾಲ್ಲೂಕಿನ ಮುತವಲ್ಲಿಗಳಿಗೆ ಜಿಲ್ಲಾ ವಕ್ಫ್‌ ಕಾರ್ಯಾಲಯ ವತಿಯಿಂದ ಉಮ್ಮೀದ್‌ ಪೋರ್ಟಲ್‌ ಕಾರ್ಯಾಗಾರ ನಡೆಯಲಿದೆ ಎಂದು ಜಿಲ್ಲಾ ವಕ್ಫ್ ಅಧಿಕಾರಿ ಸೈಯದ್‌ ಮೆಹ್ತಾಬ್‌ ಸರ್ವರ್ ತಿಳಿಸಿದ್ದಾರೆ. 

ಭಾರತದ ಸಂಸತ್ತಿನಿಂದ ಅಂಗೀಕರಿಸಲ್ಪಟ್ಟ ವಕ್ಫ್‌ (ತಿದ್ದುಪಡಿ) ಕಾಯಿದೆ 2025 (UMEED) ಅಡಿಯಲ್ಲಿ ವಕ್ಫ್‌ ಆಸ್ತಿಗಳ ವಿವರಗಳನ್ನು ಪೋರ್ಟಲ್‌ನಲ್ಲಿ ಅಪ್ಲೋಡ್ ಮಾಡುವ ಕುರಿತು, ಶಿವಮೊಗ್ಗ ತಾಲ್ಲೂಕಿನ ಎಲ್ಲಾ ವಕ್ಫ್‌ ಸಂಸ್ಥೆಗಳ ಮುತವಲ್ಲಿಗಳಿಗಾಗಿ ಜಿಲ್ಲಾ ವಕ್ಫ್‌ ಕಾರ್ಯಾಲಯದಿಂದ ಅಕ್ಟೋಬರ್‌ 23 ರಂದು ಬೆಳಗ್ಗೆ 11.00 ಗಂಟೆಗೆ ನಗರದ ಮುಸ್ಲಿಂ ಹಾಸ್ಟೆಲ್‌ ಸಭಾಂಗಣದಲ್ಲಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಧಿಕಾರಿ ಸೈಯದ್‌ ಮೆಹ್ತಾಬ್‌ ಸರ್ವರ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಭಾರತದ ಸಂಸತ್ತು ವಕ್ಫ್‌ ಕಾಯಿದೆ 1995 ಅನ್ನು ತಿದ್ದುಪಡಿ ಮಾಡಿ “ವಕ್ಫ್‌ (ತಿದ್ದುಪಡಿ) ಕಾಯಿದೆ 2025 (ಉಮ್ಮೀದ್‌ – Unified Waqf Management, Empowerment, Efficiency and Development Act 2025)” ಅನ್ನು ಜಾರಿಗೊಳಿಸಿದೆ. ಈ ಕಾಯಿದೆಯ ವಿಧಿ 3B (1) ಪ್ರಕಾರ, ಪ್ರತಿ ವಕ್ಫ್‌ ಸಂಸ್ಥೆಯ ಮುತವಲ್ಲಿ, ಅಧ್ಯಕ್ಷರು, ಕಾರ್ಯದರ್ಶಿಗಳು, ಆಡಳಿತಾಧಿಕಾರಿಗಳು ಹಾಗೂ ಉಸ್ತುವಾರಿ ಅಧಿಕಾರಿಗಳು ತಮ್ಮ ವಕ್ಫ್‌ ಅಸ್ತಿಗಳ ಸಂಪೂರ್ಣ ವಿವರಗಳನ್ನು ಸರ್ಕಾರದ ನೂತನ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡುವುದು ಕಡ್ಡಾಯವಾಗಿದೆ.

ಈ ಕಾರ್ಯವನ್ನು 2025ರ ಡಿಸೆಂಬರ್‌ 5ರೊಳಗೆ ಪೂರ್ಣಗೊಳಿಸಬೇಕು. ನಿಗದಿತ ಸಮಯದ ಒಳಗೆ ಸಲ್ಲಿಸಲು ವಿಫಲರಾದರೆ ವಕ್ಫ್‌ ಟ್ರಿಬ್ಯೂನಲ್‌ಗೆ ಅರ್ಜಿ ಸಲ್ಲಿಸಿ ಹೆಚ್ಚುವರಿ ಆರು ತಿಂಗಳ ವಿಸ್ತರಣೆ ಪಡೆಯಬಹುದಾಗಿದೆ.

ಕಾರ್ಯಾಗಾರದಲ್ಲಿ ಉಮ್ಮೀದ್‌ ಪೋರ್ಟಲ್‌ನಲ್ಲಿ ವಕ್ಫ್‌ ಆಸ್ತಿಗಳ ನೋಂದಣಿ ವಿಧಾನ, ಲಾಗಿನ್‌ ಪ್ರಕ್ರಿಯೆ, ಅಗತ್ಯ ದಾಖಲೆಗಳು ಹಾಗೂ ಆಡಳಿತಾತ್ಮಕ ಮಾರ್ಗಸೂಚಿಗಳ ಕುರಿತು ಮಾಹಿತಿ ನೀಡಲಾಗುತ್ತದೆ.

ಪೋರ್ಟಲ್‌ ವಿಳಾಸ: https://umeed.minorityaffairs.gov.in/signin


ತಾಲ್ಲೂಕಿನ ಎಲ್ಲಾ ಮುತವಲ್ಲಿಗಳು, ಅಧ್ಯಕ್ಷರು ಹಾಗೂ ವ್ಯವಸ್ಥಾಪನಾ ಸಮಿತಿಗಳ ಪದಾಧಿಕಾರಿಗಳು ಹಾಗೂ ಸದಸ್ಯರು ಕಾರ್ಯಾಗಾರಕ್ಕೆ ಹಾಜರಾಗಿ ಮಾಹಿತಿಯನ್ನು ಪಡೆದುಕೊಳ್ಳುವಂತೆ ಜಿಲ್ಲಾ ವಕ್ಫ್‌ ಅಧಿಕಾರಿಗಳು ಮನವಿ ಮಾಡಿರುತ್ತಾರೆ.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವಕ್ಫ್‌ ಅಧಿಕಾರಿಗಳು, ಜಿಲ್ಲಾ ವಕ್ಫ್‌ ಕಚೇರಿ, ಶಿವಮೊಗ್ಗ ಇವರಿಗೆ ಸಂಪರ್ಕಿಸಬಹುದಾಗಿದೆ.

UMEED portal workshop

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close