SUDDILIVE || SHIVAMOGGA
21 ವರ್ಷದ ಯುವತಿ, 22 ವರ್ಷದ ಯುವಕ ನಾಪತ್ತೆ-21-year-old woman, 22-year-old man missing
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾ. ಮಾಳೂರು ಗ್ರಾಮದ ಹೆಗಲತ್ತಿ ವಾಸಿ ಗುರುಪ್ರಸಾದರವರ ಮಗಳು 21 ವರ್ಷದ ನಾಗಶ್ರೀ ಎಂಬುವವರು ಅ.11 ರಂದು ರಾತ್ರಿ ಮನೆಯಿಂದ ಹೋದವರು ಈವರೆಗೂ ವಾಪಾಸ್ಸಾಗಿರುವುದಿಲ್ಲ. ಈಕೆಯ ಚಹರೆ 5 ಅಡಿ ಎತ್ತರ, ದುಂಡುಮುಖ, ಗೋಧಿ ಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ಮನೆಯಿಂದ ಹೋಗುವಾಗ ಲೈಟ್ ಪಿಂಕ್ ಟೀಶರ್ಟ್ ಕಪ್ಪು ಜೀನ್ಸ್ ಪ್ಯಾಂಟ್ ಧರಿಸಿರುತ್ತಾರೆ.
ಇನ್ನೊಂದು ಪ್ರಕರಣದಲ್ಲಿ ಕೀಗಡಿ ಸುಬ್ರಮಣ್ಯರವರ ಮಗ 22 ವರ್ಷದ ಸುದೀಪ್ ಎಂಬುವವರು ಅ. 11 ರಂದು ರಾತ್ರಿ ಮನೆಯಲ್ಲಿ ಯಾರಿಗೂ ಹೇಳದೆ ಹೊರಗೆ ಹೋದವರು ಈವರೆಗೂ ವಾಪಾಸ್ಸಾಗಿರುವುದಿಲ್ಲ. ಈತನ ಚಹರೆ 5.5 ಅಡಿ ಎತ್ತರ, ದುಂಡುಮುಖ, ಎಣ್ಣೆಕಪ್ಪು ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ಕಾಫಿ ಬಣ್ಣದ ಟೀಶರ್ಟ್ ಮತ್ತು ಕಪ್ಪು ಬಣ್ಣದ ನೈಟ್ ಪ್ಯಾಂಟ್ ಧರಿಸಿರುತ್ತಾರೆ.
ಈ ಇಬ್ಬರು ಕಾಣೆಯಾದ ವ್ಯಕ್ತಿಗಳ ಬಗ್ಗೆ ಸುಳಿವು ದೊರೆತಲ್ಲಿ ಮಾಳೂರು ಪೊಲೀಸ್ ಠಾಣೆ ದೂ. ಸಂ.: 08181-235142/9480803353/08181-228310/9480803333/08182-261413/ 9480803300 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.
21-year-old woman, 22-year-old man missing
