alt="ad" />

ನಾಳೆ ಆಯನೂರು ಮಂಜುನಾಥ್ ರವರ 71 ಹುಟ್ಟುಹಬ್ಬ- Tomorrow is Ayanur Manjunath's 71st birthday

 SUDDILIVE || SHIVAMOGGA

ನಾಳೆ ಆಯನೂರು ಮಂಜುನಾಥ್ ರವರ 71 ಹುಟ್ಟುಹಬ್ಬ- Tomorrow is Ayanur Manjunath's 71st birthday   

Ayanuru, birthday

ಮಾಜಿ ಸಂಸದ ಹಾಗೂ ಕಾಂಗ್ರೆಸ್ ಪಕ್ಷದ ರಾಜ್ಯ ವಕ್ತಾರ ಆಯನೂರು ಮಂಜುನಾಥ್‌ ಅವರ 71ನೇ ಜನ್ಮದಿನ ನ.14ರಂದು ವಿಶಿಷ್ಟವಾಗಿ ನಡೆಯಲಿದೆ ಎಂದು ಆಯನೂರು ಮಂಜುನಾಥ್ ಅಭಿಮಾನಿಗಳ ಬಳಗದ ಪರವಾಗಿ ಪಾಲಿಕೆ ಮಾಜಿ ಸದಸ್ಯ ಧೀರರಾಜ್ ಹೊನ್ನವಿಲೆ ತಿಳಿಸಿದರು.

ಮಥುರಾ ಹೊಟೇಲ್‌ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬೆಳಗ್ಗೆ 11 ಗಂಟೆಗೆ ಜ್ಯೂಯಲ್ ರಾಕ್ ಹೊಟೇಲ್‌ ಸಮೀಪ ಪಂಚಮುಖಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಅಭಿಮಾನಿಗಳಿಂದ ದೇವರಿಗೆ ವಿಶೇಷಪೂಜೆ, ಬೆಳಗ್ಗೆ 11.30ಕ್ಕೆ ಕಾಂಗ್ರೆಸ್ ಕಛೇರಿಯಲ್ಲಿ ವಿಶೇಷ ಅಭಿನಂದನಾ ಕಾರ್ಯಕ್ರಮ, ಮಧ್ಯಾಹ್ನ 12.30ಕ್ಕೆ ಶಾರದಾದೇವಿ ಅಂಧರ ವಿಕಾಸ ಕೇಂದ್ರದಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆ ಎಂದರು.

ಮಧ್ಯಾಹ್ನ 1 ಗಂಟೆಗೆ ಮಿಷನ್ ಕಾಂಪೌಂಡ್‌ನಲ್ಲಿರುವ ಅವರ ಮನೆಯ ಮುಂಭಾಗ ಅಭಿಮಾನಿಗಳಿಂದ ಸಭಾ ಕಾರ್ಯಕ್ರಮ ನಡೆಯಲಿದ್ದು, ಅವರನ್ನು ಅಭಿನಂದಿಸುವ ಕಾರ್ಯಕ್ರಮಕ್ಕೆ ಎಲ್ಲಾ ಅಭಿಮಾನಿಗಳು ಮತ್ತು ಸಾರ್ವಜನಿಕರು ಭಾಗವಹಿಸುವಂತೆ ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ಲಕ್ಷ್ಮಣಪ್ಪ, ಆಯನೂರು ಸಂತೋಷ್, ಜಿ. ಪದ್ಮನಾಭ್, ಶಿಜು ಪಾಷಾ, ಹಿರಣ್ಣಯ್ಯ, ಎಸ್.ಪಿ. ಪಾಟೀಲ್, ಕೃಷ್ಣ, ಲೋಕೇಶ್, ಭೋಜರಾಜ್, ರಾಘವೇಂದ್ರ ಮತ್ತಿತರರಿದ್ದರು.

Tomorrow is Ayanur Manjunath's 71st birthday

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close