ಚೀಟಿ ಹಣ ಸಂಗ್ರಹಿಸಿಕೊಂಡು ಬರುವುದಾಗಿ ಮನೆಯಿಂದ ಹೊರ ಹೋದ 26 ವರ್ಷದ ಯುವಕ ನಾಪತ್ತೆ-A 26-year-old man who left home to collect lottery money has gone missing

SUDDILIVE || SHIVAMOGGA

ಚೀಟಿ ಹಣ ಸಂಗ್ರಹಿಸಿಕೊಂಡು ಬರುವುದಾಗಿ ಮನೆಯಿಂದ ಹೊರ ಹೋದ 26 ವರ್ಷದ ಯುವಕ ನಾಪತ್ತೆ-A 26-year-old man who left home to collect lottery money has gone missing

Lottery, money



ಭದ್ರಾವತಿಯಲ್ಲಿ ಗಾಂಜಾ, ಮಟ್ಕಾ, ಅಕ್ರಮ ಮದ್ಯ ಮಾರಾಟದ ಹಾವಳಿಯ ನಡುವೆ ಮತ್ತೊಂದು ಸಮಸ್ಯೆ ತಲೆದೋರಿದೆ. ಈ ಮೂರು ಸಮಸ್ಯೆಯನ್ನ ನಿನ್ನೆ ರಾಜ್ಯ ಮಹಿಳ ಅಧ್ಯಕ್ಷೆ‌ ಡಾ.ನಾಗಲಕ್ಷ್ಮಿ ಚೌಧರಿ ಕಾನೂನು ಬಾಹಿರ ಚಟುವಟಿಕೆಗಳನ್ನ ಬಂದ್ ಮಾಡುವಂತೆ ಸೂಚಿಸಿದ ಬೆನ್ನಲ್ಲೇ ಚೀಟಿ ಹಣ ವಸೂಲಿಗೆ ತೆರಳಿದ್ದ ಯುವಕ ನಾಪತ್ತೆಯಾಗಿದ್ದಾನೆ.

26 ವರ್ಷದ ಸತೀಶ್ ಎಂಬಾತ ಚೀಟಿ ಹಣ ಕೊಡುವುದಿದೆ ಪಡೆದುಕೊಂಡು ಬರುತ್ತೇನೆ ಎಂದು ಮಂಜುನಾಥ್ ನವರ ಜೊತೆ ಮನೆಯಿಂದ ಹೊಗೆ ಹೋದವನು ಎರಡು ದಿನವಾದರೂ ಮನೆಗೆ ವಾಪಾಸಾಗಿಲ್ಲ. ಹಳೇನಗರ ಪೊಲೀಸ್ ಠಾಣೆ ವ್ಯಾಪ್ತಿಯ ಮಾರುತಿ ನಗರದ 1 ನೇ ತಿರುವಿನಲ್ಲಿರವ ಸತೀಶ್ ಮನೆಯಿಂದ ಹೊರಹೋಗಿದ್ದಾನೆ. 

ಸೆಲ್ವಿ ಮತ್ತು ಮಂಜು ಎಂಬುವರ ಪುತ್ರ ಸತೀಶ್ ಮನೆಯಿಂದ ಹೊರ ಹೋಗುವಾಗ ತಾಯಿ ಎಪಿಎಂಸಿಯಲ್ಲಿ ತರಕಾರಿ ಮಾರುತ್ತಿದ್ದರು. ಕೈಗೆ ಬಂದ ಯುವಕ ಹೀಗೆ ನಾಪತ್ತೆಯಾಗಲು ಕಾರಣವೇನು? ಮತ್ತೆ ಭದ್ರಾವತಿಯಲ್ಲಿ ತಲೆದೋರಿರುವ ಕಾನೂನು ಬಾಹಿರ ಚಟುವಟಿಕೆಯ ವರ್ತುಲದಲ್ಲಿ ಸಿಲುಕಿ ನಾಪತ್ತೆಯಾಗಿದ್ದಾನ ಎಂಬ ಅನುಮಾನಗಳು ಹೊರಬೀಳುತ್ತಿವೆ. 

ಏನೇ ಇರಲಿ ಶಿವಮೊಗ್ಗದ ಅದರಲ್ಲೂ ಭದ್ರಾವತಿಯ ಯುವಕರು ಇಂತಹ ನಿಗೂಡ ನಾಪತ್ತೆಯಿಂದ ಹೊರಬರಬೇಕಿದೆ. ಸತೀಶ್ 5 ಅಡಿ ಎತ್ತರವಿದ್ದು ಗುಂಡು ಮುಖ ಹೊಂದಿದ್ದಾನೆ. ಕೈಮೇಲೆ ಉಷಾ ಎಂಬ ಹಚ್ಚೆ ಹಾಕಿಸಿಕೊಂಡಿದ್ದಾನೆ. ಹಳೆನಗರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯುವಕನ‌ಬಗ್ಗೆ ತಿಳಿದು ಬಂದಲ್ಲಿ ಅವರ ತಾಯಿ ಸೆಲ್ವಿಯವರಿಗೆ (9972955373) ಅಥವ ಹಳೆ ನಗರ ಠಾಣೆಗೆ ಮಾಹಿತಿ ಕೊಡುವಂತೆ ಕೋರಲಾಗಿದೆ. 

A 26-year-old man who left home to collect lottery money has gone missing    

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close