ಪಂಚ ಗ್ಯಾರೆಂಟಿಗೆ ತೊಂದರೆಯಾಗಿಲ್ಲ-ಬೇಳೂರು ಸ್ಪಷ್ಟನೆ-There is no problem with Pancha Guarantee - Belur clarifies

 SUDDILIVE || SHIVAMOGGA

ಪಂಚ ಗ್ಯಾರೆಂಟಿಗೆ ತೊಂದರೆಯಾಗಿಲ್ಲ-ಬೇಳೂರು ಸ್ಪಷ್ಟನೆ-There is no problem with Pancha Guarantee - Belur clarifies


 
  

Guarantee, beluru


ಸಿಎಂ ಕುರ್ಚಿ ಗುದ್ದಾಟದಲ್ಲಿ ಪಂಚ ಗ್ಯಾರೆಂಟಿ ಜನರಿಗೆ ತಲುಪಿತ್ತಿಲ್ಲ ಎಂಬುದು ಸತ್ಯಕ್ಕೆ ದೂರವಾದುದ್ದು, ಮೂಲಕೊರತೆಯಾಗಿಲ್ಲ ಎಂದು  ಶಾಸಕ ಗೋಪಾಲಕೃಷ್ಣ‌ಬೇಳೂರು ಸ್ಪಷ್ಟಪಡಿಸಿದರು.

ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಒಂದು ಮತ್ತು ಎರಡು ತಿಂಗಳು ಗೃಹಲಕ್ಷ್ಮಿ ಹಣ ಬಂದಿಲ್ಲದೆ ತೊಂದರೆಯಾಗಿರಬಹುದು. ಮೂರುವರ್ಷದಲ್ಲಿ 60 ಸಾವಿರ ಹಣ ಬರುವ ಜಾಗದಲ್ಲಿ 40 ಸಾವಿರ ಗೃಹಲಕ್ಷ್ಮೀ ಹಣ ಬಂದಿದೆ ಎಂಬುದೆಲ್ಲಾ ಸುಳ್ಳು. ಸರಿಯಾಗಿ ಜನರಿಗೆ ಹಣ ಹೋಗಿದೆ. ನಮ್ಮಲ್ಲಿ ಸೂಕ್ತ ದಾಖಲೆಯಿದೆ ಎಂದರು. 

ಸಚಿವ ಸಂಪುಟ ವಿಸ್ತರಣೆಗೆ ಸಿಎಂ‌ ಬದಲಾವಣೆ ಸುದ್ದಿ ಯಲ್ಲಿ ಕೊಂಚ ವಿಳಂಬವಾಗಿದೆ. ಕೇಂದ್ರ ನಾಯಕರ ಕೈಯಲ್ಲಿ ಇದು ಇದೆ. ಜನರಲ್ಲಿ ಗೊಂದಲ ಉಂಟಾಗಿದೆ. ಪಕ್ಷಕ್ಕೆ ಮುಜುಗರವಾಗಿದೆ. ಸಚಿವ ಸ್ಥಾನ ಖಾಲಿಯಿದೆ. ನಾನು ಒಬ್ಬ ಆಕಾಂಕ್ಷಿಯಾಗಿರುವೆ. ಸಚಿವ ಸ್ಥಾನ ಕೊಡೋದು ರಾಜ್ಯ ಮತ್ತು ದೆಹಲಿ ನಾಯಕರಿಗೆ ಬಿಟ್ಟಿದ್ದು ಎಂದರು. 

ಸಹಿ ಸಂಗ್ರಹಕ್ಕೆ ನನ್ನನ್ನ ಯಾರೂ ಸಂಪರ್ಕಿಸಿಲ್ಲ. 136 ಜನ ಕಾಂಗ್ರೆಸ್ ರಿಗೆ ಜನ ಆಶೀರ್ವದಿಸಿದ್ದಾರೆ.  ರಾಜ್ಯದಲ್ಲಿ ಒಳ್ಳೆಯ ಕೆಲಸ ಆದರೆ ಜನ ಮತ್ತೆ ನಮಗೆ ಅಧಿಕಾರ ನೀಡುತ್ತಾರೆ. ಬಿಹಾರದಲ್ಲಿ ಜನ ಆಶೀರ್ವದಿಸಿದಂತೆ ರಾಜ್ಯದ ಜನ ನಮಗೆ ಆಶೀರ್ವದಿಸುತ್ತಾರೆ.  ಹಾಗಾಗಿ ಕೇಂದ್ರ ನಾಯಕರು ಗೊಂದಲ ಬಗೆಹರಿಸಬೇಕು. ಇದು ಮುಂದುವರೆಯಬಾರದು ಎಂದರು.

ನಾನು ಯಾವ ಬಣದ ಸದಸ್ನೂ ಅಲ್ಲ, ನಾನು ಕಾಂಗ್ರೆಸ್ ಪಕ್ಷದ ಬಣ ಇದನ್ನ‌ಬಿಟ್ಟು ಬೇರೆ ಯಾವ ಬಣವಿಲ್ಲ ಎಂದ ಅವರು, ಚಿನ್ನಯ್ಯನಿಗೆ ಬೇಲ್ ಆದರೂ ಬೇಲ್ ವಿಳಂಬವಿದೆ ಅವರನ್ನ ರಕ್ಷಿಸುವ ಪ್ರಶ್ನೆಯೇ ಇಲ್ಲ. ಸರ್ಕಾರಕ್ಕೆ ರಕ್ಷಣೆ ಕೊಡಲು ಆಸಕ್ತಿಯಿಲ್ವಾ ಎಂಬ ಪ್ರಶ್ನೆಗೆ ಉತ್ತರಿಸಿದ ಬೇಳೂರು ಇದು ನ್ಯಾಯಾಲಯದ ಪ್ರಕ್ರಿಯೆ ಅದರಲ್ಲಿ ಸರ್ಕಾರದ ತೀರ್ಮಾನವಿರಲ್ಲ ಎಂದರು.

There is no problem with Pancha Guarantee - Belur clarifies 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close