ಮರ್ಮಾಂಗಕ್ಕೆ ಕುತ್ತು- A stab to the testicle

 SUDDILIVE || SHIVAMOGGA

ಮರ್ಮಾಂಗಕ್ಕೆ ಕುತ್ತು- A stab to the testicle  

Testicle, stab

ಮರಕಟ್ ಮಾಡುವಾಗ ಕಟಿಂಗ್ ಯಂತ್ರವು ಕಾರ್ಮಿಕನ ವೃಷಣವನ್ನೇ ರಕ್ತಗಾಯ ಮಾಡಿರುವ ಘಟನೆ ಗೋಪಾಳದ ಪ್ರೆಸ್ ಕಾಲೋನಿಯ ಬಳಿ ನಡೆದಿದೆ. 

ಪ್ರೆಸ್ ಕಾಲೋನಿಯಲ್ಲಿರುವ ಸುರೇಶ್ ಎಂಬುವರ ಮನೆಯ ಬಳಿಯಿದ್ದ ಮರನ್ನ ಕತ್ತರಿಸಲು ಮೇಸ್ತ್ರಿ ಅಶೋಕ್ ತಮ್ಮ ಬಳಿ 30 ವರ್ಷದಿಂದ ಕೆಲಸ ಮಾಡುತ್ತಿದ್ದ ಹನುಮಂತಪ್ಪರಿಗೆ ಕರೆಮಾಡಿ ಆಕಾಶನೊಂದಿಗೆ ಬರಲು ಹೇಳಿದ್ದರು. ಮರ ಕಟ್ ಮಾಡಲು ಬರುವುದಿಲ್ಲ ಎಂದು ಹನುಮಂತಪ್ಪ ನಿರಾಕರಿಸಿದ್ದಾರೆ.

ಭಾನುವಾರವಾದುದರಿಂದ ಗಾರೆ ಕೆಲಸದವರು ಸಿಗಲ್ಲ ಹಾರೆ ಪಿಕಾಸೆ ಹಿಡಿದುಕೊಂಡು ಬನ್ನಿ ಎಂದು ಅಶೋಕ್ ಹೇಳಿದ್ದಾರೆ. ಒಲ್ಲದ ಮನಸ್ಸಿನಿಂದ ಹೊರಟ ಹನುಮಂತಪ್ಪ ಮತ್ತು ಆಕಾಶ ಸುರೇಶ್ ಅವರ ಮನೆಯ ಬಳಿ ಹಾರೆ ಪಿಕಾಸೆ ಹಿಡಿದು ಬಂದಿದ್ದಾರೆ. ಮರ ಹಾರೆ ಪಿಕಾಸೆಗೆ ಅಲ್ಲಾಡದಿರುವ ಕಾರಣ ಹನುಮಂತಪ್ಪನವರು ಟೈಲ್ಸ್ ಕತ್ತರಿಸುವ ಮಿಷನ್ ಹಿಡಿದು ಕೆಲಸಕ್ಕೆ ಮುಂದಾಗಿದ್ದಾರೆ. 

ಅನುಭವವಿಲ್ಲದ ಕಾರಣ ಅದು ಅವರ ವೃಷಣವನ್ನೇ ಗಾಯಪಡಿಸಿದೆ. ತಕ್ಷಣವೇ ಅವರನ್ನ ಮೆಗ್ಗಾನ್ ಗೆ ಕರೆದೊಯ್ಯಲಾಗಿದೆ. ನಂತರ ಸರ್ಜಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆಲಸ ಗೊತ್ತಿಲ್ಲದಿದ್ದರೂ ಬಲವಂತವಾಗಿ ಮೇಸ್ತ್ರ್ತಿ ಮತ್ತು ಮನೆ ಮಾಲೀಕರ ಬಲವಂತದಿಂದ ಕೆಲಸ ಮಾಡಲು ಒಪ್ಪಿ ಹನುಮಂತಪ್ಪನವರು ಮರ್ಮಾಂಗವನ್ನೇ ಗಾಯಮಾಡಿಕೊಂಡಿದ್ದಾರೆ. ಹೆಚ್ಚು ಕಮ್ಮಿಯಾಗಿದ್ದರೆ ಅವರ ಜೀವಕ್ಕೆ ಕುತ್ತು ಉಂಟಾಗುತ್ತಿತ್ತು. 

ಮುಂಜಾಗೃತ ಕ್ರಮ ವಹಿಸದೆ ಬಲವಂತವಾಗಿ ಕೆಲಸ ಮಾಡಿಸಿಕೊಳ್ಳು ಮುಂದಾದ ಮನೆಯ ಮಾಲೀಕ ಸುರೇಶ್ ಮತ್ತು ಮೇಸ್ತ್ರಿ ಅಶೋಕ್ ವಿರುದ್ಧ ತುಂಗನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close