ಶಾಸಕರಿಗೆ ಆಶ್ವಾಸನೆ ನೀಡಿದ 24 ಗಂಟೆಯ ಒಳಗೆ ಆರೋಪಿಯ ಹೆಡೆಮುರಿಕಟ್ಟಿದ ದೊಡ್ಡಪೇಟೆ ಪೊಲೀಸರು-Doddapete police nabbed the accused

 SUDDILIVE || SHIVAMOGGA

ಶಾಸಕರಿಗೆ ಆಶ್ವಾಸನೆ ನೀಡಿದ 24 ಗಂಟೆಯ ಒಳಗೆ ಆರೋಪಿಯ ಹೆಡೆಮುರಿಕಟ್ಟಿದ ದೊಡ್ಡಪೇಟೆ ಪೊಲೀಸರು-Doddapete police nabbed the accused within 24 hours of giving assurance to the MLA.

Doddapete, police


ನಿನ್ನೆ ಆರ್ ಎಂಎಲ್ ನಗರದಲ್ಲಿ ಹರೀಶ್ ಎಂಬ ವ್ಯಕ್ತಿಯ ಮೇಲೆ ಜಾತಿಕೇಳಿ ರಾಬರಿ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ದೊಡ್ಡಪೇಟೆ ಪೊಲೀಸರು ಓರ್ವನನ್ನ ಬಂಧಿಸಿದ್ದಾರೆ. 

ಶನಿವಾರ ರಾತ್ರಿ ಹರೀಶ್ ಸಂಬಂಧಿಕರನ್ನ ಬಸ್ ನಿಲ್ದಾಣಕ್ಕೆ ಬಿಟ್ಟು ಆರ್ ಎಂ ಎಲ್ ನಗರದಲ್ಲಿರುವ ಮನೆಗೆ ತೆರಳುವಾಗ ಮೂವರು ಅಪರಿಚಿತರು ಅಡ್ಡಹಾಕಿ ಧರ್ಮದ ಹೆಸರು ಕೇಳಿ ರಾಬರಿ ಮಾಡಲು ಯತ್ನಿಸಿ ಹರೀಶ್ ಮೇಲೆ ಹಲ್ಲೆ ನಡೆಸಿದ್ದರು. ಈ ಘಟನೆಸೋಮವಾರದ ಹೊತ್ತಿಗೆ ಸಂಚಲನ ಮೂಡಿಸಿತ್ತು. ಶಾಸಕ ಚೆನ್ನಬಸಪ್ಪನವರ ಕಣ್ಣು ಕೆಂಪಗಾಗಿಸಿತ್ತು.

ಆರ್ ಎಂಎಲ್ ಮತ್ತು ಮಾರ್ನಮಿ ಬೈಲಿನಲ್ಲಿ ಹೆಂಗಸರು ಮಕ್ಕಳು ಓಡಾಡದ ಹಾಗೆ ಕೆಲ ದುಷ್ಕರ್ಮಿಗಳು ಅಟ್ಟಹಾಸ ಮೆರೆಯುತ್ತಿದ್ದಾರೆ. ಪೊಲೀಸ್ ಇಲಾಖೆ ನಿರ್ಲಕ್ಷ ಮಾಡುತ್ತಿದೆ. ಧರ್ಮದ ಹೆಸರು ಕೇಳಿ ಹಲ್ಲೆ ಮಾಡಲಾಗುತ್ತಿದೆ. ಇಲಾಖೆ ನಿದ್ದೆಗೆ ಜಾರಿದೆ ಎಂದು ಶಾಸಕರು ಖುದ್ದಾಗಿ ದೊಡ್ಡಪೇಟೆ ಪೊಲೀಸ್ ಠಾಣೆಗೆ ತೆರಳಿ ಪೊಲೀಸರಿಗೆ ಬೆಂಡೆತ್ತಿದ್ದರು.

ಡಿವೈಎಸ್ಪಿ ಬಾಬು ಅಂಜನಪ್ಪ ಶಾಸಕರನ್ನ ಸಮಾಧಾನ ಗೊಳಿಸಿ ಪೊಲೀಸ್ ಇಲಾಖೆ ಖಡಕ್ ಕಾರ್ಯಾಚರಣೆ ಮಾಡಲಿದೆ ಎಂಬ ಆಶ್ವಾಸನೆ ನೀಡಿದ್ದರು. ಈ ಎಲ್ಲಾ ಘಟನಾವಳಿ ನಡೆದ 24 ಗಂಟೆಯ ಒಳಗೆ ದೊಡ್ಡಪೇಟೆ ಪೊಲೀಸರು ಆರೋಪಿಯನ್ನ ಹಿಡಿದುಕೊಂಡು ಬಂದು ಹೆಡೆಮುರಿ ಕಟ್ಟಿದ್ದಾರೆ.

ಅರ್ಮಾನ್ ಅಲಿಯಾಸ್ ಅಡ್ಡು  ಎಂಬ ಯುವಕನನ್ನ ಬಂಧಿಸಿರುವ ಪೊಲೀಸರು ಮುಂದಿನ ಕಾರ್ಯಾಚರಣೆ ನಡೆಸಿದ್ದಾರೆ. ಚರಣ್ ಮತ್ತು ಬೆಕ್ಕು ಎಂಬ ಇಬ್ಬರು ಆರೋಪಿಗಳು ಕಣ್ಮರೆಯಾಗಿದ್ದು ಅವರಿಗೂ ಬಲೆ ಬೀಸಿದ್ದಾರೆ. 

Doddapete police nabbed the accused

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close