ಬಗುರ್ ಹುಕುಂ ಸಾಗುವಳಿದಾರರನ್ನ ಒಕ್ಕಲೆಬ್ಬಿಸುವುದನ್ನ ವಿರೋಧಿಸಿ ಅರಣ್ಯ ಇಲಾಖೆಗೆ ಮನವಿ- Appeal to the Forest Department opposing the eviction of Bagur Hukum cultivators

 SUDDILIVE || SHIKARIPURA

ಬಗುರ್ ಹುಕುಂ ಸಾಗುವಳಿದಾರರನ್ನ ಒಕ್ಕಲೆಬ್ಬಿಸುವುದನ್ನ ವಿರೋಧಿಸಿ ಅರಣ್ಯ ಇಲಾಖೆಗೆ ಮನವಿ-Appeal to the Forest Department opposing the eviction of Bagur Hukum cultivators

Eviction, forest



ಬಗುರ್ ಹುಕುಂ ಸಾಗುವಳಿದಾರನನ್ನ ಒಕ್ಕಲೆಬ್ಬಿಸುವುದನ್ನ ವಿರೋಧಿಸಿ ಇಂದು ಸಂಸದರ ನೇತೃತ್ವದಲ್ಲಿ ಬಿಜೆಪಿ ತಾಲೂಕು ಅರಣ್ಯ ಇಲಾಖೆಗೆ ಮನವಿ ಸಲ್ಲಿಸಲಾಯಿತು. 

ಶಿಕಾರಿಪುರ ತಾಲೂಕಿನ ಅಂಬಳಿಗೋಳ ಅರಣ್ಯ ವ್ಯಾಪ್ತಿಯ ಎರೆಕೊಪ್ಪ ಗ್ರಾಮದಲ್ಲಿ ಇಂದು ಬೆಳಿಗ್ಗೆ ಅರಣ್ಯ ಇಲಾಖೆಯವರು ಗ್ರಾಮದ ಕಲ್ಲೇಶಪ್ಪ, ಗಿರಿಯಪ್ಪ ಮತ್ತು ಇತರ ರೈತರು ಬಗರ್‌ಹುಕುಂ ಸಾಗುವಳಿ ಮಾಡಿದ ಜಮೀನಿಗೆ ಕಂದಕ ತೆಗೆದು ಸಾಗುವಳಿದಾರರನ್ನು ತೆರವುಗೊಳಿಸಲು ಪ್ರಯತ್ನಿಸಿದ್ದರು. 

ಇದನ್ನು ತೀವ್ರವಾಗಿ ಪ್ರತಿಭಟಿಸಿ, ಸಂತ್ರಸ್ತರು ಶಿಕಾರಿಪುರದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ACF) ಕಚೇರಿಗೆ ಭೇಟಿ ನೀಡಿ, ತಮ್ಮ ಜಮೀನುಗಳಿಗೆ ಕಂದಕ ತೆಗೆದು ತೆರವುಗೊಳಿಸುವುದನ್ನು ತಕ್ಷಣವೇ ನಿಲ್ಲಿಸಬೇಕೆಂದು ಬಲವಾಗಿ ಒತ್ತಾಯ ಮಾಡಿದರು. ಈ ಸಂದರ್ಭದಲ್ಲಿ ಪಕ್ಷದ ಪ್ರಮುಖ ಮುಖಂಡರು ಮತ್ತು ಹಿರಿಯರು ಜೊತೆಗಿದ್ದರು.

Appeal to the Forest Department opposing the eviction of Bagur Hukum cultivators

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close