ಕಸಾಪ ರಾಜ್ಯಾಧ್ಯಕ್ಷರ ವಿರುದ್ಧ 17 ಅಂಶದ ಆರೋಪಗಳು ಶೀಘ್ರವೇ ತನಿಖಾಧಿಕಾರಿಗಳ ಕೈಗೆ

SUDDILIVE || SHIVAMOGGA

ಕಸಾಪ ರಾಜ್ಯಾಧ್ಯಕ್ಷರ ವಿರುದ್ಧ 17 ಅಂಶದ ಆರೋಪಗಳು ಶೀಘ್ರವೇ ತನಿಖಾಧಿಕಾರಿಗಳ ಕೈಗೆ-17-point charges against Kasapa state president to be handed over to investigators soon


ಕನ್ನಡ ಸಾಹಿತ್ಯ ಪರಿಷತ್ ನ ರಾಜ್ಯಾಧ್ಯಕ್ಷ ಮಹೇಶ್ ಜೋಷಿಯವರಿಗೆ ಶಿವಮೊಗ್ಗ ವಿಷಯದಲ್ಲಿ ಮೂಗು ತೂರಿಸಿದ್ದೇ ಮುಳುವಾಗಿದೆ ಎಂದು ಜಿಲ್ಲಾ ಪರಿಷತ್ ನ ಅಧ್ಯಕ್ಷ ಡಿ.ಮಂಜುನಾಥ್ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಾಧ್ಯಕ್ಷರು ಕಂಡು ಕಾಣದಕ್ಕೆಲ್ಲ ಹಣ ಕರ್ಚು ಮಾಡಿದ್ದಾರೆ. ನಾನು ಅವರ ವಿರುದ್ಧ 17 ಅಂಶಗಳ ಆರೋಪ ಮಾಡಿದ್ದೆ. ತನಿಖಾಧಿಕಾರಿಗಳು 17 ಅಂಶದ ವಿವರಣೆ ಕೋರಿದ್ದಾರೆ. ನಿನ್ನೆ ತನಿಖಾಧಿಕಾರಿಗಳಿಗೆ ವಿವರಣೆ ನೀಡಲು ಸಮಯ ಕೇಳಿದ್ದೇನೆ ಎಂದರು.

ರಾಜ್ಯಾಧ್ಯಕ್ಷರು ಸಂಬಂಧಿಯ ಸಾವನ್ನ ಕಾಶಿಯಲ್ಲಿ ಆಚರಿಸಲಾಗುತ್ತಿದೆ ಎಂದು ಕಾಶಿಗೆ ಹೋಗಲು ಟ್ರೈನ್ ಟಿಕೇಟ್ ಮತ್ತು ಅಲ್ಲಿಂದ ಬೆಂಗಳೂರಿಗೆ ಬರಲು ವಿಮಾನದ ಟಿಕೇಟ್ ಮಾಡಿಸಲಾಗಿತ್ತು. ನಂತರ ರದ್ದುಮಾಡಿದ್ದರು. ಅದರ ಖರ್ಚನ್ನ ಹಾಕಿ ಹಣ ಪಡೆದಿದ್ದರು. ಅದನ್ನ ನ್ಯಾಯಾಲಯಕ್ಕೆ ಸಾಕ್ಷಿ ಸಮೇತ ನೀಡಿದ್ದೆವು. ಅದಕ್ಕೆ ಕೋರ್ಟ್ ಸಹ ಛೀಮಾರಿ ಹಾಕಿದೆ ಎಂದರು.

ಮಹೇಶ್ ಜೋಷಿಯವರನ್ನ ಈಗ ರಾಜ್ಯ ಸರ್ಕಾರ ರಾಜ್ಯಾಧ್ಯಕ್ಷ ಸ್ಥಾನದಿಂದ ತೆಗೆದುಹಾಕಿದೆ. ಅಡಳಿತಾಧಿಕಾರಿಗಳನ್ನ‌ ನೇಮಿಸಿದೆ ಎಂದರು.

ಸಪ್ತಾಹ ಕಾರ್ಯಕ್ರಮ

ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ  ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಹಾಗೂ ಕರ್ನಾಟಕ ಜಾನಪದ ಪರಿಷತ್ತು ಬೆಂಗಳೂರು ಇವರ ಸಹಯೋಗದಲ್ಲಿ ನವೆಂಬರ್ 24 ರಿಂದ ಕನ್ನಡ ರಾಜ್ಯೋತ್ಸವ ಸಪ್ತಾಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪರಿಷತ್ನ ಜಿಲ್ಲಾಧ್ಯಕ್ಷರಾದ ಡಿ ಮಂಜುನಾಥ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕನ್ನಡ ರಾಜ್ಯೋತ್ಸವದ ಅಂಗವಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ನವೆಂಬರ್ 24 ರಂದು ಸಂಜೆ  ಸಂಜೆ 6:30 ಕ್ಕ ಶಿವಮೊಗ್ಗದ ಸಾಹಿತ್ಯ ಗ್ರಾಮದಲ್ಲಿ ಈ ಕಾರ್ಯಕ್ರಮ ಉದ್ಘಾಟನೆಗೊಂಡು ನವೆಂಬರ್ 30 ರಂದು ಸಾಗರದಲ್ಲಿ ಕಾರ್ಯಕ್ರಮ ಮುಕ್ತಾಯವಾಗುತ್ತಿದೆ. ಇದರ ನಡುವೆ  ನಗರದಾದ್ಯಂತ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ   ಎಂದರು.

ಹಾಗೆಯೇ ಯಾರ ನಡುವೆ ಕುವೆಂಪು ರಚಿಸಿರುವ ನಾಡಗೀತೆಗೆ 100 ವರ್ಷ ತುಂಬಿರುವ ಹಿನ್ನೆಲೆ  ನವೆಂಬರ್ 26 ರಂದು 100 ಜನ ಗಾಯಕರಿಂದ ನಾಡಗೀತೆಯನ್ನು ಹಾಡಿಸುತ್ತಿದ್ದೇವೆ. ಈ ಕಾರ್ಯಕ್ರಮದಲ್ಲಿ ಎಲ್ಲಾ ವಯೋಮಾನದವರು ಭಾಗವಹಿಸಿ ನಾಡಗೀತೆಯನ್ನು  ಹಾಡುತ್ತಿದ್ದಾರೆ. ಹಾಗೆಯೇ ಇಂದು ಸಂಜೆ  ತೀರ್ಥಹಳ್ಳಿಯ ಕೊಪ್ಪ ಸರ್ಕಲ್ನಲ್ಲಿ ಕುವೆಂಪು ಪುತ್ಥಳಿ ಮುಂದೆ ಸಾಮೂಹಿಕ ನಾಡಗೀತೆ ಗಾಯನವನ್ನು ಹಾಡಲಿದ್ದಾರೆ ಎಂದರು.

17-point charges against Kasapa state president to be handed over to investigators soon

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close