ಆಟೋ ಕಳುವು-ಬಂಧನ-Auto theft-arrest

 SUDDILIVE || SHIVAMOGGA

ಆಟೋ ಕಳುವು-ಬಂಧನ-Auto theft-arrest 


ಸಾಗರ ತಾಲೂಕಿನ ಆಚಾಪುರದಲ್ಲಿ ಗೂಡ್ಸ್ ಆಟೋ ಕಳವು ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಶಿವಮೊಗ್ಗದ ಗುರುಪುರ ಬಡಾವಣೆ ನಿವಾಸಿಯೋರ್ವರನ್ನು ಆನಂದಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಪೈಟಿಂಗ್ ಕೆಲಸ ಮಾಡಿ ಜೀವನ ಸಾಗಿಸುವ ಅಶೋಕ (22) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಗೂಡ್ಸ್ ಆಟೋ ವಶಕ್ಕೆ ಪಡೆಯಲಾಗಿದ್ದು, ಆರೋಪಿಯನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸ್ ಇಲಾಖೆ ನವೆಂಬರ್ 18 ರಂದು ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.

ಶೇಕ್ ಮಿರಾನ್ ಎಂಬುವರಿಗೆ ಸದರಿ ಆಟೋ ಸೇರಿದ್ದಾಗಿದೆ. ನ. 12 ರ ರಾತ್ರಿ ಆಚಾಪುರ ಗ್ರಾಮದ ಬಸ್ ನಿಲ್ದಾಣದ ಸಮೀಪ ಆಟೋ ನಿಲ್ಲಿಸಿದ್ದು, ಬೆಳಿಗ್ಗೆ ನೋಡಿದಾಗ ಆಟೋ ಕಳುವಾಗಿರುವುದು ಬೆಳಕಿಗೆ ಬಂದಿತ್ತು. ಈ ಕುರಿತಂತೆ ಆನಂದಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಸಾಗರ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಕೇಶವ ಕೆ ಇ, ಗ್ರಾಮಾಂತರ ಸರ್ಕಲ್ ಇನ್ಸ್’ಪೆಕ್ಟರ್ ಸಂತೋಷ್ ಶೆಟ್ಟಿರವರ ಮಾರ್ಗದರ್ಶನದಲ್ಲಿ ಸಬ್ ಇನ್ಸ್’ಪೆಕ್ಟರ್ ಪ್ರವೀಣ್ ಎಸ್ ಪಿ, ಶಿವಮೊಗ್ಗ ಸಿಡಿಆರ್ ಸೆಲ್ ಸಿಬ್ಬಂದಿಗಳಾದ ಇಂದೇಶ್, ಪ್ರಶಾಂತ್, ಪರಶುರಾಮ್, ಉಮೇಶ್ ಲಮಾಣಿ, ಸಂತೋಷ್, ಸುನೀಲ್ ರವರು ಆರೋಪಿಯನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.

Auto theft-arrest

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close