ಬಾಲಣ್ಣನ ಆರೋಗ್ಯದ ವಿಷಯದಲ್ಲಿ ಅರಣ್ಯ ಇಲಾಖೆ ಕಳ್ಳಾಟ-ಕರವೇ ಸಿಂಹ ಸೇನೆ ಆಕ್ರೋಶ-Forest department's negligence regarding Balanna's health - Karve Simha Sena outraged

 SUDDILIVE || SHIVAMOGGA

ಬಾಲಣ್ಣನ ಆರೋಗ್ಯದ ವಿಷಯದಲ್ಲಿ ಅರಣ್ಯ ಇಲಾಖೆ ಕಳ್ಳಾಟ-ಕರವೇ ಸಿಂಹ ಸೇನೆ ಆಕ್ರೋಶ-Forest department's negligence regarding Balanna's health - Karve Simha Sena outrage

Forest, sanghatane

ಶಿವಮೊಗ್ಗದ ಸಕ್ರಬೈಲಿನಲ್ಲಿರುವ ಬಾಲಣ್ಣನ ಕಿವಿ ಹರಿದು ಹಾಕಿರುವ ವಿಚಾರದಲ್ಲಿ ಮೊದಲಿನಿಂದಲೂ ಹೋರಾಟ ಮಾಡುತ್ತಿರುವ ಕರ್ನಾಟಕ ರಕ್ಷಣ ವೇದಿಕೆ ಸಿಂಹಸೇನೆ ಇಂದು ಮತ್ತೆ ಶಿವಮೊಗ್ಗದ ವನ್ಯಜೀವಿ ಅರಣ್ಯ ಇಲಾಖೆಗೆ ಭೇಟಿ ನೀಡಿ ಆನೆಯ ಆರೋಗ್ಯವಿಚಾರದಲ್ಲಿ ನಿರ್ಲಕ್ಷ ವಹಿಸುತ್ತಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದೆ. 

ಅರಣ್ಯ ಇಲಾಖೆ ಸಾಕಾನೆ ಬಾಲಣ್ಣನಿಗೆ ಅನಾರೋಗ್ಯವಿದ್ದರೂ ಸಹ ಪಾಲಿಕೆಯ ದಸರಾ ಮೆರವಣಿಗೆಗೆ ಅವಕಾಶಕೊಟ್ಟು ನಂತರ ಇಂಜೆಕ್ಷನ್ ಕೊಟ್ಟು ಕಿವಿ ಕೊಳೆಯುವ ಹಾಗೆ ಮಾಡಲಾಗಿತ್ತು. ನಂತರ ಕಿವಿ ಕೊಳೆಯುತ್ತಿರುವ ಪರಿಣಾಮ ಕಿವಿಹರಿಯಲಾಯಿತು. ಆನೆಗಳಿಗೆ ಮದ ಬಂದಿದೆಯೋ ಅಥವಾ ಇಲ್ಲವೋ ಎಂಬುದಕ್ಕೆ ಕಿವಿಯೇ ಸೂಕ್ಷ್ಮವಾದ ಸಂಕೇತ ನೀಡುತ್ತದೆ. 

ಆದರೆ ಸಕ್ರೆಬೈಲಿನಲ್ಲಿ ಮಾಧ್ಯಮಗಳಿಗಾಗಲಿ ಅಥವಾ ಹೆಲ್ತ್ ರಿಪೋರ್ಟ್ ಗಳಾಗಲಿ ನೀಡದೆ ಕದ್ದುಮುಚ್ಚಿವ್ಯವಹಾರ ಮಾಡುತ್ತಿರುವ ಬಗ್ಗೆ ಸಂಘಟನೆ ಆಕ್ರೋಶ ವ್ಯಕ್ತಪಡಿಸಿದೆ. ಆನೆ ಹೆಲ್ತ್ ರಿಪೋರ್ಟ್ ಗಳ ಬಗ್ಗೆ ಮಾದ್ಯಮಗಳಿಹೆ ಬಿಡುಗಡೆ ಮಾಡದೆ ಇರುವ ಬಗ್ಗೆ ಅನುಮಾನಗಳಿವೆ ಎಂದು ಸಂಘಟನೆಯ ಅಧ್ಯಕ್ಷ ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳದಲ್ಲಿಯೇ ಸಂಕ್ರೆಬೈಲಿನ ಆರ್ ಎಫ್ ಒ ವಿನಯ್ ರೊಂದಿಗೆ ಮೊಬೈಲ್ ನಲ್ಲಿ ಮಾತನಾಡಿದ್ದು ಮಾಧ್ಯಮಗಳಿಗೆ ಹೆಲ್ತ್ ರಿಪೋರ್ಟ್ ಬಿಡುಗಡೆ ಮಾಡಿ ಇಲ್ಲ ಹೈಕೋರ್ಟ್ ನಲ್ಲಿ ಸಂಘಟನೆ ಇಲಾಖೆಯ ವಿರುದ್ಧ ಪಿಐಎಲ್ ಹಾಕಲಿದೆ ಎಂದು ಎಚ್ಚರಿಸಿದ್ದಾರೆ. ಒಟ್ಟಿನಲ್ಲಿ ಅರಣ್ಯ ಇಲಾಖೆಯ ಕಳ್ಳಾಟ ಆನೆಯ ವಿಚಾರದಲ್ಲಿ ಬಯಲಾಗುತ್ತಿದೆ. 

Forest department's negligence regarding Balanna's health - Karve Simha Sena outraged

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close