ಜಿಲ್ಲೆಯ ರೈತರ ಸಮಸ್ಯೆಗೆ ಸ್ಪಂದಿಸುವಂತೆ ಬಿಜೆಪಿ ಪ್ರತಿಭಟನೆ- BJP protests to address the problems of farmers in the district

 SUDDILIVE || SHIVAMOGGA

ಜಿಲ್ಲೆಯ ರೈತರ ಸಮಸ್ಯೆಗೆ ಸ್ಪಂದಿಸುವಂತೆ ಬಿಜೆಪಿ ಪ್ರತಿಭಟನೆ-BJP protests to address the problems of farmers in the district

Bjp, protest

ಜಿಲ್ಲೆಯ ರೈತರ ದೈನಂದಿನ ಸಮಸ್ಯೆಗಳನ್ನು ಪರಿಹರಿಸುವಂತೆ ಒತ್ತಾಯಿಸಿ ಇಂದು ಬಿಜೆಪಿ ಜಿಲ್ಲಾ ರೈತ ಮೋರ್ಚ ಗೋಪಿ ವೃತ್ತದಿಂದ ಡಿಸಿ ಕಚೇರಿಯ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಡಿಸಿ ಕಚೇರಿ ಎದುರು ರಸ್ತೆ ತಡೆ ನಡೆಸಿದರು. ನಂತರ ಡಿಸಿಗೆ ಮನವಿ ಸಲ್ಲಿಸಲಾಯಿತು.

ಅತಿವೃಷ್ಟಿಯಿಂದ ಹಾಗೂ ಅನಾವೃಷ್ಟಿಯಿಂದ ಕೊಳೆತು ಹೋದ ಭತ್ತದ ಗಿಡಗಳನ್ನು ಮತ್ತು ಸರ್ಕಾರದ ವೈಫಲ್ಯಗಳ ಪ್ಲಕಾಡುಗಳನ್ನು ಹಿಡಿದುಕೊಂಡು ಬಂದ ಪ್ರತಿಭಟನೆಗಾರರು ವಿದ್ಯುತ್ ಪೂರೈಕೆ ಮತ್ತು ನೀರಾವರಿ ಸಮಸ್ಯೆ, ಅಡಿಕೆ ಬೆಳೆ, ರೋಗಕ್ಕೆ ಹಾನಿಯಾಗಳಿಗೆ ಪರಿಹಾರ, ಖರೀದಿ ಕೇಂದ್ರ ಆರಂಭ,  ಬೆಂಬಲ ಬೆಲೆ ಹಾಗೂ ಕಾಡಾನೆ ಮತ್ತು ವನ್ಯಜೀವಿಗಳ ಹಾವಳಿಯಿಂದ ರಕ್ಷಣೆ ನೀಡುವಂತೆ ಆಗ್ರಹಿಸಿ ಪ್ರತಿಭಟನಾಕಾರರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

ಕೃಷಿ ಪಂಸೆಟ್ಟುಗಳಿಗೆ ಅನಿಮಿಯತ ಮತ್ತು ಕಳಪೆ ಗುಣಮಟ್ಟದ ವಿದ್ಯುತ್ ಪೂರೈಕೆ ಆಗುತ್ತಿದೆ. ವಿದ್ಯುತ್ ಪೂರೈಕೆ ಮಾಡಲು ಬೆಸ್ಕಾಂ ಗೆ ಕಟ್ಟುನಿಟ್ಟಾದ ಸೂಚನೆ ನೀಡಿ ಕನಿಷ್ಠ ಏಳು ಗಂಟೆಗಳ ಕಾಲ ಗುಣಮಟ್ಟದ ತ್ರೀ ಫೇಸ್ ವಿದ್ಯುತ್ ಪೂರೈಕೆ ಆಗಬೇಕೆಂದು ಮತ್ತು ಕೆರೆಕಟ್ಟೆಗಳ ಊಳೆತ್ತಬೇಕೆಂದು ಸಹ ಮನವಿಯಲ್ಲಿ ಒತ್ತಾಯಿಸಲಾಗಿದೆ.

ಶಿವಮೊಗ್ಗ ಜಿಲ್ಲೆಯಲ್ಲಿ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆಗೆ ಹಳದಿ ಎಲೆ ರೋಗ, ಮತ್ತು ಕೊಳೆ ರೋಗದ ಹಾವಳಿ ಹೆಚ್ಚಾಗಿದ್ದು ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ ರೋಗ ನಿಯಂತ್ರಣಕ್ಕೆ ವೈಜ್ಞಾನಿಕ ತಾಂತ್ರಿಕ ನೆರವು ನೀಡಬೇಕು, ರೋಗನಿರೋಧಕ ಅಡಿಕೆ ತಳಿಗಳ ಅಭಿವೃದ್ಧಿಗೆ ಹೊತ್ತು ನೀಡಬೇಕು.

ಮುಖ್ಯ ಬೆಳೆಗಳಾದ ಭಕ್ತ ಜೋಳ ರಾಗಿಗೆ ಕನಿಷ್ಠ ಬೆಂಬಲ ಬೆಲೆ ಸಮರ್ಪಕವಾಗಿ ಸಿಗುತ್ತಿಲ್ಲ ವಿಮಾ ಕಂಪನಿಗಳಿಗೆ ತ್ವರಿತವಾಗಿ ಮತ್ತು ಪಾರದರ್ಶಕವಾಗಿ ಪರಿಹಾರ ವಿತರಿಸಲು ಆದೇಶ ನೀಡಬೇಕು. ಸರ್ಕಾರದ ಕನಿಷ್ಠ ಬೆಂಬಲ ಬೆಲೆ ಅಡಿ ರೈತರಿಂದ ಧಾನ್ಯಗಳನ್ನು ಖರೀದಿಸಲು ಸೂಕ್ತ ವ್ಯವಸ್ಥೆ ಮತ್ತು ಖರೀದಿ ಕೇಂದ್ರಗಳನ್ನು ಹೆಚ್ಚಿಸಬೇಕು.

ಮಲೆನಾಡು ಭಾಗಗಳಲ್ಲಿ ಕಾಡಾನೆ ಹಂದಿ ಮತ್ತು ಇತರೆ ವನ್ಯಜೀವಿಗಳ ಹಾವಳಿಯಿಂದ ಬೆಳೆ ಹಾನಿಯಾಗುತ್ತಿದೆ ಇದಕ್ಕೆ ಪರಿಹಾರವಾಗಿ ತಡೆಗೋಡೆ ಮತ್ತು ಸೌರ ಬೇಲಿ ನಿರ್ಮಿಸಬೇಕು. ಬೆಳೆಹಾನಿಯನ್ನ ತ್ವರಿತವಾಗಿ ವಿತರಿಸಬೇಕು. ಖರೀದಿ ಕೇಂದ್ರ ಆರಂಭಿಸಬೇಕೆಂದು ಆಗ್ರಹಿಸಲಾಯಿತು. 

BJP protests to address the problems of farmers in the district

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close