ಆನೆ ಓಡಿಸಲು ಸ್ಕ್ವಾಡ್ ರಚನೆ

 SUDDILIVE || SHIVAMOGGA

ಆನೆ ಓಡಿಸಲು ಸ್ಕ್ವಾಡ್ ರಚನೆ-Squad formation to drive away elephant


Squad, formation

ಶಿವಮೊಗ್ಗದ ಜಿಲ್ಲಾ ಪಂಚಾಯಿತಿ ನಲ್ಲಿ ತ್ರೈಮಾಸಿ ಕೆಡಿಪಿ ಪ್ರಗತಿ ಪರಿಶೀಲನಾ ಸಭೆ ನಡೆದಿದೆ. ಸಭೆಯಲ್ಲಿ ಡೀಮ್ಡ್ ಫಾರೆಸ್ಟ್ ನಲ್ಲಿ ರೈತರ ಮನೆ, ಜಮೀನಿಗೆ ನೋಟೀಸ್ ಕೊಡುವ ಬಗ್ಗೆ ಆನೆಗಳನ್ನ ಓಡಿಸಲು ಸ್ಕ್ವಾಡ್ ರಚನೆಗೆ ಮತ್ತು ಗ್ರಾಮೀಣ ಭಾಗದಲ್ಲಿ ವೈದ್ಯರ ನೇಮಕಾತಿಯ ಬಗ್ಗೆ ಚರ್ಚೆ ನಡೆದಿದೆ. 

ಮೊದಲಿಗೆ ಡೀಮ್ಡ್ ಫಾರೆಸ್ಟ್ ನಲ್ಲಿ ರೈತರಿಗೆ ಒಕ್ಕಲೇಳುವಂತೆ ಅರಣ್ಯ ಇಲಾಖೆ ನೋಟೀಸ್ ಕೊಡುತ್ತಿದೆ. ನ್ಯಾಯಾಲಯದ ಪ್ರಕರಣಗಳನ್ನ ಹೊರತುಪಡಿಸಿ ಡೀಮ್ಡ್ ಫಾರೆಸ್ಟ್ ಗೂ ಅರಣ್ಯ ಬರ್ತಾಯಿದ್ದಾರೆ.   ರೈತರು ಕಾನೂನು ಕೈಗೆ ತೆಗೆದುಕೊಂಡರೆ ನೀವು ಯಾರೂ ಉಳಿಯಲ್ಲ ಯರಗ್ನಾಳ್ ನಲ್ಲಿ ಡೀಮ್ಡ್ ಫಾರೆಸ್ಟ್ ನಲ್ಲಿದ್ದರೂ ನೋಟೀಸ್ ನೀಡಲಾಗಿದೆ 2000 ಅಡಿಕೆ ಮರಗಳನ್ನ‌ಹಾನಿಮಾಡಲಾಗಿದೆ ಎಂದರು. 

ಸಚಿವ ಮಧು ಬಂಗಾರಪ್ಪ ಮಾತನಾಡಿ, ಇನ್ನುಮುಂದೆ ಡೀಮ್ಡ್ ಫಾರೆಸ್ಟ್ ವಿಚಾರದಲ್ಲಿ ಕೋರ್ಟ್ ನಲ್ಲಿ ಪ್ರಕರಣವಿದ್ದರೆ ಅದನ್ನ ಹೊರತು ಪಡಿಸಿ ಡಿಸಿ ಅನುಮತಿ ಪಡೆದು ನೋಟೀಸ್ ಕೊಡುವಂತೆ ಸೂಚಿಸಿದರು. 

ಗ್ರಾಮೀಣ ಭಾಗದಲ್ಲಿ ವೈದ್ಯರ ಕೊರತೆಯಿದೆ. ಕ್ಯಾಬಿನೆಟ್ ನಲ್ಲಿ ಬಿಲ್ ಪಾಸಾಗಿದೆ. ಇದು ರಾಜ್ಯದ ವಿಷಯವಾಗಿದೆ.‌  3800 ವೈದ್ಯರು ನೇಮಕಾತಿ ಮಾಡಿಕೊಳ್ಳಬೇಕಿದೆ. ಅಸೆಂಬ್ಲಿಯಲ್ಲಿ ನಿರ್ಣಯಿಸಲಾಗುವುದು. ಇದೇವೇಳೆ ಔಟ್ ಸೋರ್ಸ್ ನೌಕರರಿಗೆ ಸಂಬಳ ನೀಡಲಾಗುತ್ತಿಲ್ಲ. ಕಾಂಟ್ರಾಕ್ಟರ್ ತಿನ್ನುತ್ತಿದ್ದಾನೆ ಎಂದು ಆರಗ ಗರಂ ಆದರು.  ನಾನೇ ಪತ್ರ ಬರೆದು ವೈದ್ಯಕೀಯ ಔಟ್ ಸೋರ್ಸ್ ಸಿಬ್ಬಂದಿಗಳಿಗೆ ಇಎಸ್ಐ ಪಿಎಫ್ ಕೊಡುತ್ತಿಲ್ಲ ಎಂದು ಆರೋಗ್ಯ ಇಲಾಖೆಗೆ ಪತ್ರ ಬರೆದಿರುವುದಾಗಿ ಹೇಳಿದರು.

ಸಚಿವ ಮಧು ಬಂಗಾರಪ್ಪ ಸಹ ಈ ಬಗ್ಗೆ ಆಕ್ಷೇಪಿಸಿದರು. ಡಿಸಿ ಎರಡು ವಾರದಲ್ಲಿ ಡಿಹೆಚ್ ಒ ನೇತೃತ್ವದಲ್ಲಿ ಸಮಿತಿ ರಚಿಸಿ ಎರಡು ವಾರದಲ್ಲಿ ವರದಿ ತರಿಸಲಾಗುವುದು. ನಿಟ್ಟೂರು, ಬ್ಯಾಕೋಡು ಗೆ ವೈದ್ಯರನ್ನ ನೇಮಿಸುವಙಯೆ ಶಾಸಕ ಬೇಳೂರು ಡಿಹೆಚ್ ಒ ಗೆ ಸೂಚಿಸಿದರು. 

ತೀರ್ಥಹಳ್ಳಿ, ಸಾಗರಕ್ಕೆ ಬಂದಿದೆ ಅರಣ್ಯ ಇಲಾಖೆ ಏನು ಕ್ರಮ‌ಕೈಗೊಂಡಿಲ್ಲ ಎಂದ ಶಾಸಕ ಆರಗ ಜ್ಞಾನೇಂದ್ರ ಆನೆ ಹಿಡಿಯಲು ಬಿಟ್ಟು ಗಂಟೆ ಭಾರಿಸಲು ಹೋಗ್ತೀರಾ ಎಂದು ಗುಡುಗಿದರು. ಆನೆಗಳು ಎಂಪಿ ಚುನಾವಣೆ ವೇಳೆ ರೈತ ಸತ್ತಿದ್ದಾನೆ ಎಂದು ಶಾಸಕ ಬೇಳೂರು ಗರಂ ಆದರು.  ಇದಕ್ಕೆ ಉತ್ತರಿಸಿದ ಡಿಎಫ್ಒ ಬೀಟ್ ಹೆಚ್ಚಿಸಲಾಗಿದೆ ಎಂದರು. ಆದರೆ ಇದಕ್ಕೂ ಆಕ್ಷೇಪಿಸಿದ ಶಾಸಕಿ ಶಾರದಾ ಪೂರ್ಯನಾಯ್ಕ್ ಎರಡು ವರ್ಷದಿಂದ ಕಾಡಂಚು ಮತ್ತು ಗ್ರಾಮದ ನಡುವೆ ಇಪಿಟಿ ನಿರ್ಮಿಸಿಲ್ಲ. ಸೋಲಾರ್ ಸಿಸ್ಟಮ್ ಆಗಿಲ್ಲ ಎಂದರು.

ಚಿಕ್ಕಮಗಳೂರಿನಲ್ಲಿ ಅನೆ‌ ಸ್ಕ್ವಾಡ್ ರಚಿಸಲಾಗಿದೆ. ಹಾಗೆ ಶಿವಮೊಗ್ಗದಲ್ಲಿ ರಚಿಸಿ. ಸ್ಕ್ವಾಡ್ ನಲ್ಲಿ 30 ಜನರಿದ್ದಾರೆ. ಹಾಗಾಗಿ ಸಚಿವರು ಸ್ಕ್ವಾಡ್ ರಚಿಸಿ ಎಂದು ಶಾಸಕ ಆರಗ ಹೇಳಿದರು. ಹೊರಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿ ಎಂದು ಸಚಿವರು ಸೂಚಿಸಿದರು. ಕರಡಿ ಮತ್ತು ಚಿರತೆ ದಾಳಿ ಹೆಚ್ಚಾಗಿದೆ. ಕರಡಿ ಪೈಪ್ ಒಡಿತ್ತಾ ಇವೆ. ಹಗಲುಹೊತ್ತು ವಿದ್ಯುತ್ ಬೇಕು ಎಂದು ಶಾಸಕಿ ಶಾರದ ಪೂರ್ಯನಾಯ್ಕ್ ಸಭೆಗೆ ಆಗ್ರಹಿಸಿದರು. 

Squad formation to drive away elephant

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close